Navjot Singh Sidhu : ಜೈಲಿನಲ್ಲಿರುವ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಆಸ್ಪತ್ರೆಗೆ ದಾಖಲು

Navjot Singh Sidhu : ರೋಡ್​ ರೇಜ್​ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧುರನ್ನು ಸೋಮವಾರದಂದು ಚಂಡೀಗಢದ ಪಿಜಿಐಎಂಇಆರ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನವಜೋತ್​ ಸಿಂಗ್​ ಸಿಧು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನವಜೋತ್​ ಸಿಂಗ್​ ಸಿಧು ಯಕೃತ್ತು ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಕಾರಣದಿಂದಾಗಿ ಅವೆರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನೇಕ ವೈದ್ಯಕೀಯ ಪರೀಕ್ಷೆಗೆ ಒಳಗಾದ ಬಳಿಕ ಸಿಧುರನ್ನು ಸೋಮವಾರ ಮಧ್ಯಾಹ್ನ ಪಟಿಯಾಲದ ಜೈಲಿನಿಂದ PGIMER ಆಸ್ಪತ್ರೆಗೆ ವರ್ಗಾಯಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ ಹೆಪಟಾಲಜಿ ವಿಭಾಗದಲ್ಲಿ ಬೆಳಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಗಾದರು. ಮಧ್ಯಾಹ್ನ, ಸಿಧು ಅವರನ್ನು ಪಿಜಿಐಎಂಇಆರ್‌ಗೆ ದಾಖಲಿಸಲಾಯಿತು, ಅಲ್ಲಿ ಸಿಧುರನ್ನು ಪಟಿಯಾಲಾ ಜೈಲಿನಿಂದ ಭಾರೀ ಭದ್ರತೆಯಲ್ಲಿ ಕರೆತರಲಾಯಿತು. ಸಂಜೆ, ಪಿಜಿಐಎಂಇಆರ್ ಹೇಳಿಕೆ ನೀಡಿದ್ದು, ಸಿಧುರನ್ನು ನಿಗಾದಲ್ಲಿ ಇರಿಸಲಾಗಿದೆ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ನವಜೋತ್​ ಸಿಂಗ್​ ಸಿಧು ಲಿವರ್​ಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಚಂಡಿಗಢದ ನೆಹರು ಆಸ್ಪತ್ರೆ ಎಕ್ಸಟೆಂನ್ಶನ್​, ಪಿಜಿಐಎಂಇಆರ್​ನ ಹೆಪಟಾಲಜಿ ವಾರ್ಡ್​ನಲ್ಲಿ ದಾಖಲಾಗಿದ್ದಾರೆ. ಇವರಿಗೆ ವೈದ್ಯಕೀಯ ಮೌಲ್ಯಮಾಪನದ ಅವಶ್ಯಕತೆ ಇದೆ ಎಂದು ಹೇಳಿದೆ .

1988 ರ ರೋಡ್ ರೇಜ್ ಸಾವಿನ ಪ್ರಕರಣದಲ್ಲಿ ಪಂಜಾಬ್​ನ ಕಾಂಗ್ರೆಸ್​ ನಾಯಕ ಸಿಧುರನ್ನು ಮೇ 20 ರಂದು ಪಟಿಯಾಲಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು. ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ. 1988ರ ರೋಡ್​ ರೇಜ್​ ಸಾವು ಪ್ರಕರಣದಲ್ಲಿ ಸಿಧು ದೋಷಿ ಎಂದು ಸಾಬೀತಾಗಿದೆ. ನಡುರಸ್ತೆಯಲ್ಲಿ ನಡೆದ ಜಗಳದಲ್ಲಿ ಸಿಧು ವಯಸ್ಸಾದ ವ್ಯಕ್ತಿಯ ತಲೆಗೆ ಹೊಡೆದಿದ್ದರು. ಬಳಿಕ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಇದೇ ಪ್ರಕರಣದಲ್ಲಿ ಇದೀಗ ನವಜೋತ್​ ಸಿಂಗ್​ ಸಿಧು ಶಿಕ್ಷೆ ಅನುಭವಿಸುತ್ತಿದ್ದಾರೆ.

58 ವರ್ಷ ಪ್ರಾಯದ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಎಂಬಾಲಿಸಮ್​ ಎನ್ನುವು ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಲ್ಲದೇ ಇವರಿಗೆ ಯಕೃತ್ತು ಸಂಬಂಧಿ ಕಾಯಿಲೆ ಕೂಡ ಇದೆ. 2015ರಲ್ಲಿ ನವಜೋತ್​ ಸಿಂಗ್​ ಸಿಧು ದೆಹಲಿಯ ಆಸ್ಪತ್ರೆಯಲ್ಲಿ ರಕ್ತನಾಳದ ಥ್ರಂಬೋಸಿಸ್​​​ಗಾಗಿ ಚಿಕಿತ್ಸೆಗೆ ಒಳಗಾಗಿದ್ದರು.ಜೈಲಿನಲ್ಲಿ ನವಜೋತ್​ ಸಿಂಗ್​ ಸಿಧು ಆಹಾರ ಕ್ರಮವು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿತ್ತು . ನವಜೋತ್​ ಸಿಂಗ್​ ಸಿಧು ಮೈದಾ, ಗೋಧಿ ಹಾಗೂ ಸಕ್ಕರೆಯಂತಹ ಆಹಾರವನ್ನು ಸೇವನೆ ಮಾಡಬಾರದು. ಅವರು ಪಪ್ಪಾಯಿ, ಪೇರಲೆ, ಡಬಲ್​ ಟೋನ್ಡ್​ ಹಾಲು , ಫೈಬರ್​ ಹಾಗೂ ಕಾರ್ಬೋಹೈಡ್ರೇಟ್​ಗಳನ್ನು ಹೊಂದಿರದ ಆಹಾರವನ್ನು ಸೇವನೆ ಮಾಡಬಾರದು ಎಂದು ಸಿಧು ಪರ ವಕೀಲರು ಹೇಳಿದ್ದಾರೆ .

ಇದನ್ನು ಓದಿ : ಕಮರಿಗೆ ಉರುಳಿದ ಬಸ್ : 22 ಸಾವು, 6 ಮಂದಿಗೆ ಗಾಯ

ಇದನ್ನೂ ಓದಿ : PSI Exams Scam : ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ : ಕಾನ್ಸ್ ಟೇಬಲ್ ಹರೀಶ್ ಬಂಧನ

Navjot Singh Sidhu admitted to Chandigarh’s PGIMER hospital, condition stable

Comments are closed.