Eidgah Ground : ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಸಿಕ್ಕ‌ಜಯ : ಚಾಮರಾಜಪೇಟೆಯ ಈದ್ಗಾ ಮೈದಾನ ಎಲ್ಲ ಧರ್ಮದವರಿಗೂ ಮುಕ್ತ ಮುಕ್ತ

ಬೆಂಗಳೂರು : ಹಲಾಲ, ಜಟ್ಕಾ‌ಕಟ್ ಹಾಗೂ ಹಿಜಾಬ್ ಬಳಿಕ‌ ಮುಸ್ಲಿಂ‌ ಧಾರ್ಮಿಕ ಕ್ಷೇತ್ರಗಳು ವಿವಾದಕ್ಕೆ ಗುರಿಯಾಗಿದ್ದವು. ಈ ಮಧ್ಯೆ ಬೆಂಗಳೂರಿನ ಚಾಮರಾಜಪೇಟೆ ಯಲ್ಲಿ ಶತಮಾನಗಳಿಂದ ಈದ್ಗಾ ಮೈದಾನ (Eidgah Ground ) ಎಂದು ಕರೆಯಲ್ಪಡುತ್ತಿದ್ದ ಮೈದಾನದ ಮೇಲೆ ಹಿಂದೂಪರ ಸಂಘಟನೆಗಳ ಕಣ್ಣು ಬಿದ್ದಿತ್ತು. ಬಿಬಿಎಂಪಿ ಆಟದ ಮೈದಾನವಾಗಿರೋ ಚಾಮರಾಜಪೇಟೆ ಮೈದಾನವನ್ನು ಕೇವಲ ಮುಸ್ಲಿಂಮರಿಗೆ ಮಾತ್ರವಲ್ಲದೇ ಹಿಂದೂಗಳಿಗೂ ಅವಕಾಶ ನೀಡಬೇಕೆಂದು ಹೋರಾಟ ಆರಂಭಿಸಿದ್ದರು.

ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ಎಂದು ಕರೆಯಲ್ಪಡುವ ಮೈದಾನ ಮುಸ್ಲಿಂರ ಪ್ರಾರ್ಥನೆಗೆ ಮೀಸಲಾಗಿತ್ತು.‌ಹೀಗಾಗಿ ಸಹಜವಾಗಿಯೇ ಎಲ್ಲರೂ ಇದನ್ನು ಈದ್ಗಾ ಮೈದಾನ ಎಂದೇ ಭಾವಿಸಿದ್ದರು. ಆದರೆ ಈ ಮೈದಾನದ ಹಿಂದೆ ಬಿದ್ದ ಹಿಂದೂಪರ ಸಂಘಟನೆ ಕಾರ್ಯಕರ್ತರು ಇದು ಕೇವಲ ಈದ್ಗಾ ಮೈದಾನವಲ್ಲ. ಬದಲಾಗಿ ಬಿಬಿಎಂಪಿ ಆಟದ ಮೈದಾನ ಎಂಬುದನ್ನು ಪತ್ತೆಹಚ್ಚಿದ್ದರು. ಮಾತ್ರವಲ್ಲ ಈ ಮೈದಾನದಲ್ಲಿ ಮುಸ್ಲಿಂಮರಿಗೆ ಮಾತ್ರವಲ್ಲ ಹಿಂದೂಗಳಿಗೂ ಹಬ್ಬ ಹರಿದಿನಗಳ ಆಚರಣೆಗೆ ಅವಕಾಶ ನೀಡಬೇಕು. ನವರಾತ್ರಿ, ಗಣೇಶೋತ್ಸವ ಸೇರಿದಂತೆ ಎಲ್ಲ ಹಬ್ಬಗಳ ಆಚರಣೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು.

ಹಾಗೇ ನೋಡೋದಾದರೇ ಈ ಈದ್ಗಾ ಮೈದಾನದ ವಿವಾದ ಈಗ ಹೊಸದಲ್ಲ ಬದಲಾಗಿ ಹಲವು ವರ್ಷಗಳಿಂದ ಇದೆ. ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ 16 ವರುಷದ ಹಿಂದೆಯೂ ನಡೆದಿತ್ತು. ಈ ವೇಳೆ ಹಿಂದೂ ಹಬ್ಬ, ಕಾರ್ಯಕ್ರಮಗಳಿಗೆ ಅವಕಾಶ ನೀಡಲು ಮನವಿ ಮಾಡಲಾಗಿತ್ತು. 2006 ರಲ್ಲಿ ಹಿಂದೂಗಳಿಗೆ ಹಬ್ಬ ಆಚರಣೆ ಮಾಡಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಲಾಗಿತ್ತು. ಅನಿವಾರ್ಯ ಸಂದರ್ಭದಲ್ಲಿ ಶಾಮಿಯಾನ ಬಳಸಲೂ ಅನುಮತಿ ನೀಡಲಾಗಿತ್ತು. 2006 ACP ಪೊಲೀಸ್ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಉಲ್ಲೇಖ ಇದೆ.

ಆದರೆ ಬಳಿಕ ಇದು ಕೇವಲ‌ಮುಸ್ಲಿಂ ಸಮುದಾಯಕ್ಕೆ ಮಾತ್ರ ಮೀಸಲಾಗಿತ್ತು. ಈಗ ಧ್ವನಿ ಎತ್ತಿದ ಹಿಂದೂಪರ ಸಂಘಟನೆಗಳು ಎಲ್ಲ ಧರ್ಮಿಯರಿಗೂ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಲ್ಲದೇ ಅವಕಾಶ ನೀಡದಿದ್ದರೇ ಹೋರಾಟ ನೀಡುವ ಎಚ್ಚರಿಕೆ ನೀಡಿತ್ತು. ಈಗ ಹಿಂದೂಪರ ಸಂಘಟನೆಗಳ ಬೇಡಿಕೆಗೆ ತಲೆಬಾಗಿಸಿದ ಬಿಬಿಎಂಪಿ ಎಲ್ಲ ಸಮುದಾಯ ದವರೂ ಚಾಮರಾಜಪೇಟೆಯ ಮೈದಾನದಲ್ಲಿ ಕಾರ್ಯಕ್ರಮ ಮಾಡಬಹುದು ಎಂದಿದೆ. ಅದರೆ ಯಾವುದೇ ಕಾರ್ಯಕ್ರಮಕ್ಕೆ ಬಿಬಿಎಂಪಿಗೆ ಶುಲ್ಕ ಪಾವತಿಸಿ ಅನುಮತಿ ಪಡೆಯೋದು ಕಡ್ಡಾಯ ಎಂದಿದೆ. ಇದು ಹಿಂದೂಪರ ಸಂಘಟನೆಗಳ ಸಂಭ್ರಮಕ್ಕೆ ಕಾರಣವಾಗಿದೆ. ಇದೇ ಜೋಶ್ ನಲ್ಲಿ ಹಿಂದೂಪರ ಸಂಘಟನೆಗಳು ಇದೇ ಬರುವ ಜೂನ್ 21 ರಂದು ಚಾಮರಾಜಪೇಟೆಯ ಮೈದಾನದಲ್ಲಿ ಯೋಗ ಶಿಬಿರ ನಡೆಸಲು ನಿರ್ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಇದನ್ನೂ ಓದಿ : Loud Speaker Permission : ಬೆಂಗಳೂರಿನಲ್ಲಿ ಜೋರಾಗಲಿದೆ ಧರ್ಮ ದಂಗಲ್ : ಲೌಡ್ ಸ್ಪೀಕರ್ ಗೆ ಅನುಮತಿ ಕೋರಿ 700 ಅರ್ಜಿ ಸಲ್ಲಿಕೆ

ಇದನ್ನೂ ಓದಿ : Raghu Dixit and Mayuri : ರಘು ದೀಕ್ಷಿತ್​ – ಮಯೂರಿ ನಡುವಿನ ದಾಂಪತ್ಯ ಮುರಿದುಬೀಳಲು ನಿಜವಾದ ಕಾರಣ ಇಲ್ಲಿದೆ ನೋಡಿ

Eidgah Ground of Chamarajapet is open to all religions

Comments are closed.