ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ ಫೈನಲ್‌ ಮಳೆಯಿಂದ ರದ್ದು : ಅಫ್ಘಾನಿಸ್ತಾನದ ವಿರುದ್ದ ಐತಿಹಾಸಿಕ ಚಿನ್ನ ಗೆದ್ದ ಭಾರತ

ಭಾರತ ಹಾಗೂ ಅಫ್ಘಾನಿಸ್ತಾನದ (India vs Afghanistan)  ವಿರುದ್ದದ ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ನ ಫೈನಲ್‌ (Asian Games 2023 Final) ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದ್ರೆ ಅಗ್ರ ಶ್ರೇಯಾಂಕದ ಹಿನ್ನೆಲೆಯಲ್ಲಿ ಭಾರತ ತಂಡ ( Indian Cricket Team) ಐತಿಹಾಸಿಕ ಚಿನ್ನದ ಪದಕವನ್ನು ಜಯಿಸಿದೆ.

ಭಾರತ ಹಾಗೂ ಅಫ್ಘಾನಿಸ್ತಾನದ (India vs Afghanistan)  ವಿರುದ್ದದ ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ನ ಫೈನಲ್‌ (Asian Games 2023 Final) ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದ್ರೆ ಅಗ್ರ ಶ್ರೇಯಾಂಕದ ಹಿನ್ನೆಲೆಯಲ್ಲಿ ಭಾರತ ತಂಡ ( Indian Cricket Team) ಐತಿಹಾಸಿಕ ಚಿನ್ನದ ಪದಕವನ್ನು ಜಯಿಸಿದೆ. ಈ ಮೂಲಕ ಚೊಚ್ಚಲ ಪುರುಷರ ಕ್ರಿಕೆಟ್‌ ನಲ್ಲಿ ಚಿನ್ನ ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ.

ಚೀನಾದ ಹ್ಯಾಂಗ್ ಝೌನ್‌ನಲ್ಲಿರುವ ಜೆಜಿಯಾಂಗ್‌ ತಂತ್ರಜ್ಞಾನ ವಿಶ್ವವಿದ್ಯಾಲಯದ ಪಿಂಗ್‌ಫೆಂಗ್‌ ಕ್ರಿಕೆಟ್‌ ಮೈದಾನದಲ್ಲಿ ಇಂದು ಭಾರತ ಹಾಗೂ ಅಫ್ಘಾನಿಸ್ತಾನದ ವಿರುದ್ದ ಫೈನಲ್‌ ಪಂದ್ಯ ನಡೆದಿದೆ. ಮಳೆಯ ಹಿನ್ನೆಲೆಯಲ್ಲಿ ಪಂದ್ಯ ಕೊಂಚ ತಡವಾಗಿಯೇ ಆರಂಭವಾಗಿತ್ತು.

IND vs AFG Asian Games 2023 Cricket India wins Gold after final gets abandoned due to Rain
Image Credit to Original Source

ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ತಾನ ತಂಡಕ್ಕೆ ಭಾರತದ ಬೌಲರ್‌ಗಳಾದ ಶಿವಂ ದುಬೆ (Shivam Dube) ಹಾಗೂ ಅರ್ಷದೀಪ್‌ ಸಿಂಗ್‌ (Arshadeep Singh) ಆರಂಭಿಕ ಆಘಾತವನ್ನು ನೀಡಿದ್ರು. ಆರಂಭಿಕ ಆಟಗಾರರಾದ ಜುಬೈದ್ ಅಕ್ಬರಿ 5 ಹಾಗೂ ಮೊಹಮ್ಮದ ಶಹಜಾದ್‌ ಕೇವಲ 4 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ರೆ, ನೂರ್‌ ಆಲಿ ಝರ್ದಾನ್‌ ಕೇವಲ 1 ರನ್‌ ಗಳಿಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ರು.

ಇದನ್ನೂ ಓದಿ : ವಿಶ್ವಕಪ್‌ 2023 : ಶುಭಮನ್‌ ಗಿಲ್‌ ಔಟ್‌, ರೋಹಿತ್‌ ಶರ್ಮಾ- ಇಶಾನ್‌ ಕಿಶಾನ್‌ ಓಪನರ್‌

ನಂತರ ಶಾಹಿದುಲ್ಲಾ ಕಮಲ್‌ ಹಾಗೂ ಅಫ್ಸರ್‌ ಝಜಾಯಿ ಒಂದಿಷ್ಟು ಹೊತ್ತು ಭಾರತೀಯ ದಾಳಿಯನ್ನು ಎದುರಿಸಿದ್ರು. ಆದರೆ ಝಝಾಯ್‌ ೧೫ ರನ್‌ ಗಳಿಸಿದ್ದಾಗ, ರವಿ ಬಿಶ್ನೋಹಿಗೆ ವಿಕೆಟ್‌ ಒಪ್ಪಿಸಿದ್ರು. ನಂತರ ಬಂದ ಕರೀಂ ಜನ್ನತ್‌ ಆಟ ಕೇವಲ ೧ರನ್‌ ಗಳಿಗೆ ಕೊನೆಯಾಯ್ತು.

ಶಾಹಿದುಲ್ಲಾ ಕಮಲ್‌ಗೆ ಗುಲ್ಬದ್ದೀನ್‌ ನಾಬಿ ಸಾಥ್‌ ಕೊಟ್ರು. 43 ಎಸೆತಗಳನ್ನು ಎದುರಿಸಿದ್ದ ಕಮಲ್‌ 49 ರನ್‌ ಬಾರಿಸಿದ್ರೆ, ಗುಲ್ಬದ್ದಿನ್‌ ನಾಬಿ 24 ಎಸೆತಗಳಲ್ಲಿ 27 ರನ್‌ ಬಾರಿಸುವ ಮೂಲಕ ಅಫ್ಘಾನಿಸ್ತಾನ ತಂಡಕ್ಕೆ ನೆರವಾದ್ರು. ಆದರೆ 18.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 112 ರನ್‌ ಗಳಿಸಿದ್ದ ವೇಳೆಯಲ್ಲಿ ಧಾರಾಕಾರ ಮಳೆ ಸುರಿದಿದೆ.

IND vs AFG Asian Games 2023 Cricket India wins Gold after final gets abandoned due to Rain
Image Credit to Original Source

ಮಳೆಯಿಂದಾಗಿ ಪಂದ್ಯವನ್ನು ಮುಂದುವರಿಸುವುದು ಅಸಾಧ್ಯ ಎಂದು ಮ್ಯಾಚ್‌ ರೆಫ್ರಿ ಘೋಷಣೆ ಮಾಡುತ್ತಿದ್ದಂತೆಯೇ ಪಂದ್ಯವನ್ನು ಏಷ್ಯನ್‌ ಗೇಮ್ಸ್‌ ಫೈನಲ್‌ ಪಂದ್ಯವನ್ನು ರದ್ದುಗೊಳಿಸಲಾಯಿತು. ಆದರೆ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಅಗ್ರ ಶ್ರೇಯಾಂಕವನ್ನು ಕಾಯ್ದುಕೊಂಡ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಏಷ್ಯನ್‌ ಗೇಮ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಜಯಿಸಿದೆ.

ಭಾರತ ತಂಡ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನೇಪಾಳ ಹಾಗೂ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿತ್ತು. ಇನ್ನು ಅಫ್ಘಾನಿಸ್ತಾನ ತಂಡ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಸೆಮಿಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಇದನ್ನೂ ಓದಿ : ವಿಶ್ವಕಪ್ 2023 : ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡ ರೋಹಿತ್‌ ಶರ್ಮಾ !

ಅಫ್ಘಾನಿಸ್ತಾನ ಚೊಚ್ಚಲ ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಜಯಿಸುವ ಕನಸು ಕಂಡಿತ್ತು. ಆದರೆ ಮಳೆಯಿಂದಾಗಿ ಅಫ್ಘಾನಿಸ್ತಾನದ ಕನಸು ನುಚ್ಚುನೂರಾಗಿದೆ. ಒಂದೊಮ್ಮೆ ಮಳೆ ಸುರಿಯದೇ ಇದ್ದಿದ್ದರೂ ಕೂಡ ಭಾರತ ಫೈನಲ್‌ ಪಂದ್ಯವನ್ನು ಜಯಿಸುವ ಸಾಮರ್ಥ್ಯವನ್ನು ಹೊಂದಿತ್ತು.

IND vs AFG Asian Games 2023 Cricket India wins Gold after final gets abandoned due to Rain

Comments are closed.