ISIS ಉಗ್ರರ ಜೊತೆ ನಂಟು : ಕರ್ನಾಟಕ, ಕೇರಳ, ತಮಿಳುನಾಡಿನ 100ಕ್ಕೂ ಅಧಿಕ ಕಡೆ ಎನ್ಐಎ ದಾಳಿ

ನವದೆಹಲಿ : NIA Raids : ಶಂಕಿತ ಐಸಿಸ್ ಉಗ್ರರ ಜೊತೆ ನಂಟು ಹೊಂದಿರುವ ಹಾಗೂ ಉಗ್ರರ ಕುರಿತು ಸಹಾನುಭೂತಿ ಹೊಂದಿರುವವರ ವಿರುದ್ದ ಎನ್ಐಎ ಅಧಿಕಾರಿಗಳು ಸಮರ ಸಾರಿದ್ದಾರೆ. ಕೊಯಮತ್ತೂರು, ಮಂಗಳೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಮೂರು ರಾಜ್ಯಗಳ ನೂರಕ್ಕೂ ಅಧಿಕ ಸ್ಥಳಗಳ ಮೇಲೆ ಎನ್ಐಎ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿದೆ.

ಕರ್ನಾಟಕದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ಶೋಧ ನಡೆಸಿದೆ. ಅಲ್ಲದೇ ಕೇರಳ ಮತ್ತು ತಮಿಳುನಾಡಿನ 60ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಅಕ್ಟೋಬರ್ 23, 2022 ಮತ್ತು ನವೆಂಬರ್ 19, 2022 ರಂದು ನಡೆದ ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಸ್ಫೋಟಗಳಿಗೆ ಸಂಬಂಧಿಸಿದಂತೆ ಈ ಶೋಧ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.ತಮಿಳುನಾಡಿನ ಕೊಡುಂಗಯ್ಯೂರು ಮತ್ತು ಕೇರಳದ ಮನ್ನಾಡಿ ಸೇರಿದಂತೆ ಮೂರು ರಾಜ್ಯಗಳ ನೂರಾರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಅಕ್ಟೋಬರ್ 23 ರಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೊಟ್ಟೈ ಈಶ್ವರನ್ ದೇವಾಲಯದ ಮುಂಭಾಗದಲ್ಲಿ ಸ್ಫೋಟಕಗಳನ್ನು ತುಂಬಿದ ಕಾರಿನಲ್ಲಿ ಬಾಂಬ್ ಸ್ಫೋಟಿಸಿದ ಪ್ರಕರಣದಲ್ಲಿ ಎನ್‌ಐಎ ಕಳೆದ ವರ್ಷ ಅಕ್ಟೋಬರ್ 27 ರಂದು ತನಿಖೆ ಆರಂಭಿಸಿತು. ಕಳೆದ ವರ್ಷ ಅಕ್ಟೋಬರ್ 23 ರಂದು ತಮಿಳುನಾಡು ಪೊಲೀಸರು ಆರಂಭದಲ್ಲಿ ದೂರು ದಾಖಲಿಸಿಕೊಂಡ ಪ್ರಕರಣದಲ್ಲಿ ಹನ್ನೊಂದು ಆರೋಪಿಗಳನ್ನು ಭಯೋತ್ಪಾದನಾ ನಿಗ್ರಹ ಸಂಸ್ಥೆ ಈ ಹಿಂದೆ ಬಂಧಿಸಿತ್ತು.

ಮೃತ ಆರೋಪಿ ಜಮೇಶಾ ಮುಬೀನ್ ಭಯೋತ್ಪಾದನೆಯನ್ನು ಬೆಂಬಲಿಸುವ ಸಲುವಾಗಿ ಆತ್ಮಾಹುತಿ ದಾಳಿ ನಡೆಸಲಾಗಿದೆ. ಇದರಿಂದಾಗಿ ದೇವಾಲಯದ ಸಂಕೀರ್ಣಕ್ಕೆ ವ್ಯಾಪಕವಾದ ಹಾನಿ ಉಂಟಾಗಿತ್ತು ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿತ್ತು. ಅಲ್ಲದೇ ಆರೋಪಿಗಳು ಈರೋಡ್ ಜಿಲ್ಲೆಯ ಸತ್ಯಮಂಗಲಂ ಅರಣ್ಯದ ಆಸನೂರು ಮತ್ತು ಕಡಂಬೂರ್ ಪ್ರದೇಶದ ಅರಣ್ಯ ಪ್ರದೇಶದ ಒಳಭಾಗದಲ್ಲಿ ಸ್ಪೋಟಕ್ಕೆ ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿತ್ತು.

ಇನ್ನೊಂದೆಡೆಯಲ್ಲಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಮಂಗಳೂರು ಹೊರವಲಯದ ನಾಗುರಿಯಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಸ್ಪೋಟಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸುಧಾರಿತ ಸ್ಪೋಟಕಗಳನ್ನು ಬಳಸಿ ಕುಕ್ಕರ್ ಬಾಂಬ್ ತಯಾರಿ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿತ್ತು. ಘಟನೆಯಲ್ಲಿ ಆರೋಪಿ ಮೊಹಮ್ಮದ್ ಶಾರೀಕ್ ಹಾಗೂ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಎಂಬವರು ಗಾಯಗೊಂಡಿದ್ದರು. ಕರಾವಳಿ ಭಾಗದಲ್ಲಿ ಕೋಮು ಪ್ರಚೋದನೆ ನೀಡುವ ಸಲುವಾಗಿ ಈ ದಾಳಿ ನಡೆಸಲು ಉನ್ನಾರ ನಡೆಸಲಾಗಿದೆ ಎಂಬುವುದು ತನಿಖೆಯಿಂದ ಬಯಲಾಗಿತ್ತು.

ಮಂಗಳೂರು ಸ್ಪೋಟದ ಬೆನ್ನಲ್ಲೇ ಆರೋಪಿ ಶಾರಿಕ್ ಇಸ್ಲಾಮಿಕ್ ಸ್ಟೇಟ್ (ಐಎಸ್) ನಡುವೆ ನಂಟು ಹೊಂದಿದ್ದಾನೆ ಅನ್ನೋದು ಬಯಲಾಗಿತ್ತು. ಅಲ್ಲದೇ ಈತನಿಗೆ ಸಹಕಾರ ನೀಡುತ್ತಿದ್ದ ಸೈಯದ್ ಯಾಸಿನ್, ಮುನೀರ್ ಅಹಮದ್ ಎಂಬವರನ್ನು ಬಂಧಿಸಲಾಗಿತ್ತು. ಈ ಮೂವರೂ ಸೇರಿಕೊಂಡು ಶಿವಮೊಗ್ಗ ಜಿಲ್ಲೆಯ ತುಂಗಾ ನದಿಯ ದಡದಲ್ಲಿ ಸ್ಫೋಟಕ್ಕೆ ಪ್ರಯೋಗ ಮತ್ತು ಪೂರ್ವಾಭ್ಯಾಸ ನಡೆಸಿದ್ದರು. ಅಲ್ಲದೇ ಸ್ಪೋಟ ಪ್ರಯೋಗ ಸಕ್ಸಸ್ ಆಗಿತ್ತು. ಇದೀಗ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರನ್ನು ಬಂಧಿಸಲು ಕಾರ್ಯಕ್ಕೆ ಎನ್ಐಎ ಮುಂದಾಗಿದೆ.

ಇದನ್ನೂ ಓದಿ : WPI Inflation : ಜನವರಿಯಲ್ಲಿ ಸಗಟು ಹಣದುಬ್ಬರ 24 ತಿಂಗಳಲ್ಲಿ ಕನಿಷ್ಠ ಶೇ.4.73ಕ್ಕೆ ಇಳಿಕೆ : ಹಣದುಬ್ಬರ ಇಳಿಕೆಗೆ ಮುಖ್ಯ ಕಾರಣವೇನು ?

ಇದನ್ನೂ ಓದಿ : Domestic visa revaluation: ವಿದೇಶಿ ಕೆಲಸದ ಕನಸು ಕಾಣುತ್ತಿರುವವರಿಗೆ ಗುಡ್‌ ನ್ಯೂಸ್‌ : ಬದಲಾಯ್ತು ವೀಸಾ ನಿಯಮ

NIA Raids 60 Locations Across Karnataka Tamil nadu and Kerala Suspected ISIS Sympathisers

Comments are closed.