Sania Mirza : RCB ಮೆಂಟರ್ ಆಗಿ ಸಾನಿಯಾ ಮಿರ್ಜಾ ನೇಮಕ

ಹೈದರಾಬಾದ್ : ಮಹಿಳಾ ಪ್ರೀಮಿಯರ್ ಲೀಗ್ 2023ಕ್ಕಾಗಿ ತಂಡಗಳು ಸಜ್ಜಾಗುತ್ತಿವೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡದ ಮೆಂಟರ್ ಆಗಿ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಅವರನ್ನು ನೇಮಕ ಮಾಡಿದೆ. ದುಬೈನಲ್ಲಿ ತನ್ನ ಕೊನೆಯ ಪಂದ್ಯಾವಳಿಯನ್ನು ಆಡಲಿರುವ ಮಿರ್ಜಾ ನಂತರ ಆರ್ ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಮಿರ್ಜಾ ಸೇರ್ಪಡೆಯಿಂದಾಗಿ ಆಟಗಾರರಿಗೆ ಪ್ರೇರಣೆಯಾಗಲಿದೆ. ಇತ್ತೀಚಿಗಷ್ಟೇ ಸಾನಿಯಾ ಮಿರ್ಜಾ ರೋಹನ್ ಬೋಪಣ್ಣ ಅವರ ಜೊತೆಗೆ ಆಸ್ಟ್ರೇಲಿಯಾ ಓಪನ್ ಮಿಶ್ರ ಡಬಲ್ಸ್ ಫೈನಲ್ ಪ್ರವೇಶಿಸಿದ್ದರು.

ಮಹಿಳಾ ಪ್ರೀಮಿಯರ್ ಲೀಗ್ ಗಾಗಿ ಆರ್ ಸಿಬಿ ಬಲಿಷ್ಠ ತಂಡವನ್ನು ಕಟ್ಟಿಕೊಂಡಿದೆ.ಸ್ಮೃತಿ ಮಂಧಾನ , ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್ ಠಾಕೂರ್, ರಿಚಾ ಘೋಷ್, ಎರಿನ್ ಬರ್ನ್ಸ್ ಸೇರಿದಂತೆ ಖ್ಯಾತನಾಮ ಕ್ರಿಕೆಟಿಗರು ತಂಡದಲ್ಲಿದ್ದಾರೆ. ಜೊತೆಗೆ ಸಾನಿಯಾ ಮಿರ್ಜಾ ತಂಡದ ಆಟಗಾರರಿಗೆ ಸ್ಪೂರ್ತಿಯನ್ನು ತುಂಬುವ ಕಾರ್ಯವನ್ನು ಮಾಡಲಿದ್ದಾರೆ. ಸಾನಿಯಾ ಮಿರ್ಜಾ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಮೂರು ಮಿಶ್ರ ಡಬಲ್ಸ್ ಟ್ರೋಫಿಗಳನ್ನು ಅವರು ಮಹೇಶ್ ಭೂಪತಿ (2009 ಆಸ್ಟ್ರೇಲಿಯನ್ ಓಪನ್, 2012 ಫ್ರೆಂಚ್ ಓಪನ್) ಮತ್ತು ಬ್ರೆಜಿಲಿಯನ್ ಬ್ರೂನೋ ಸೋರೆಸ್ (2014 ಯುಎಸ್ ಓಪನ್) ಅವರೊಂದಿಗೆ ಗೆದ್ದಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗುತ್ತಿರುವ ಕುರಿತು ಸಾನಿಯಾ ಮಿರ್ಜಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

RCB ಪೂರ್ಣ ತಂಡ: ಸ್ಮೃತಿ ಮಂಧಾನ (3.4 ಕೋಟಿ), ಸೋಫಿ ಡಿವೈನ್ (50 ಲಕ್ಷ), ಎಲ್ಲಿಸ್ ಪೆರ್ರಿ (1.7 ಕೋಟಿ), ರೇಣುಕಾ ಸಿಂಗ್ ಠಾಕೂರ್ (1.5 ಕೋಟಿ), ರಿಚಾ ಘೋಷ್ (1.9 ಕೋಟಿ), ಎರಿನ್ ಬರ್ನ್ಸ್ (30 ಲಕ್ಷ), ದಿಶಾ ಕಸತ್ (10 ಕೋಟಿ). ಲಕ್ಷ), ಇಂದ್ರಾಣಿ ರಾಯ್ (10 ಲಕ್ಷ), ಶ್ರೇಯಾಂಕಾ ಪಾಟೀಲ್ (10 ಲಕ್ಷ), ಕನಿಕಾ ಅಹುಜಾ (35 ಲಕ್ಷ), ಆಶಾ ಶೋಬನಾ (10 ಲಕ್ಷ), ಹೀದರ್ ನೈಟ್ (40 ಲಕ್ಷ), ಡೇನ್ ವ್ಯಾನ್ ನೀಕರ್ಕ್ (30 ಲಕ್ಷ), ಪ್ರೀತಿ ಬೋಸ್ (30) ಲಕ್ಷ), ಪೂನಂ ಖೇಮ್ನಾರ್ (10 ಲಕ್ಷ), ಕೋಮಲ್ ಝಂಜಾದ್ (25 ಲಕ್ಷ), ಮೇಗನ್ ಶುಟ್ (40 ಲಕ್ಷ), ಸಹನಾ ಪವಾರ್ (10 ಲಕ್ಷ)

ವಿದೇಶಿ ಆಟಗಾರರು: ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಎರಿನ್ ಬರ್ನ್, ಹೀದರ್ ನೈಟ್, ಡೇನ್ ವ್ಯಾನ್ ನೀಕೆರ್ಕ್, ಮೇಗನ್ ಶುಟ್

ಇದನ್ನೂ ಓದಿ : CCL 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಫೆ. 18ರಿಂದ ಆರಂಭ : ಹೊಸ ಮಾದರಿಯಲ್ಲಿ ಪಂದ್ಯಾವಳಿ

ಇದನ್ನೂ ಓದಿ : Minnu Mani: 30 ಲಕ್ಷದ ಒಡತಿಯಾದ ಬುಡಕಟ್ಟು ಹುಡುಗಿ, ಮಹಿಳಾ ಕ್ರಿಕೆಟ್‌ನಲ್ಲೊಂದು ಅಪ್ರತಿಮ ಯಶೋಗಾಥೆ

Sania Mirza Appointed As Mentor For RCB in women’s Premier League 2023

Comments are closed.