babri masjid demolition :ಬಾಬರಿ ಮಸೀದಿ ಧ್ವಂಸಕ್ಕೆ 29 ವರ್ಷ; ಕೇರಳದಲ್ಲಿ ಮಕ್ಕಳ ಮೇಲೆ ಒತ್ತಡ ಹೇರಿದ ಪಿಎಫ್​ಐ ಸಂಘಟನೆ ವಿರುದ್ಧ ಬಿಜೆಪಿ ಕೆಂಡ..!

ಬಾಬರಿ ಮಸೀದಿ ಧ್ವಂಸ ಘಟನೆ ನಡೆದು ಇಂದಿನ ಬರೋಬ್ಬರಿ 29 ವರ್ಷಗಳು ಪೂರ್ಣಗೊಂಡಿವೆ. 1992ರ ಡಿಸೆಂಬರ್​ 12ರಂದು ಲಕ್ಷಗಟ್ಟಲೇ ಹಿಂದೂ ಕರಸೇವಕರು ಬಾಬರಿ ಮಸೀದಿಯನ್ನು ಧ್ವಂಸ (babri masjid demolition) ಮಾಡುವ ಮೂಲಕ ಇದು ಶ್ರೀರಾಮ ಜನ್ಮ ಭೂಮಿ ಎಂದು ಪ್ರತಿಪಾದಿಸಿದ್ದರು. ಈ ಘಟನೆಯು ದೇಶದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಘಟನೆ ನಡೆದು 29 ವರ್ಷಗಳೇ ಕಳೆದರೂ ಸಹ ದ್ವೇಷ ಇನ್ನೂ ಆರಿದಂತೆ ಕಾಣುತ್ತಿಲ್ಲ. ಕೇರಳದಲ್ಲಿ ಇಂದು ಶಾಲಾ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ ( PFI distributes ) ‘ನಾನು ಬಾಬರಿ’ ( I am Babri ಎಂಬ ಬ್ಯಾಡ್ಜ್​​ ಎಂಬ ಅಂಟಿಸಿರುವ ಆರೋಪ ಎದುರಾಗಿದೆ.

ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ ಕಾರ್ಯಕರ್ತರು ಶಾಲೆಗೆ ತೆರಳುತ್ತಿದ್ದ ಮಕ್ಕಳಿಗೆ ನಾನು ಬಾಬರಿ ಎಂಬ ಬ್ಯಾಡ್ಜ್​ ಅಂಟಿಸಿದ್ದಾರೆ. ಈ ಸಂಬಂಧ ಕೇರಳ ಪೊಲೀಸರು ಪಿಎಫ್​ಐ ಕಾರ್ಯಕರ್ತರ ವಿರುದ್ಧ ಸೆಕ್ಷನ್​ 341, 154ಎ ಹಾಗೂ 38ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಸೇಂಟ್​ ಜಾರ್ಜ್​ ಪ್ರೌಢಶಾಲೆಯಲ್ಲಿ ನಡೆದ ಘಟನೆಯ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿಕೆ ಕೃಷ್ಣದಾಸ್​ ದೂರನ್ನು ನೀಡಿದ್ದಾರೆ.


ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರನ್ನು ಪತ್ರದ ಮುಖೇನ ಸಲ್ಲಿಸಲಾಗಿದೆ. ಮುನೀರ್​ ಇಬ್ನು ನಜೀರ್​ ನೇತೃತ್ವದಲ್ಲಿ ಕೇವಲ ಹಿಂದೂ ಹಾಗೂ ಕ್ರಿಶ್ಚಿಯನ್​ ಸಮುದಾಯದ ವಿದ್ಯಾರ್ಥಿಗಳನ್ನೇ ಟಾರ್ಗೆಟ್​ ಮಾಡಲಾಗಿದೆ. 7 ವರ್ಷದೊಳಗಿನ ಮಕ್ಕಳಿಗೆ ಬಾಬರಿ ಬ್ಯಾಡ್ಜ್​​ ಧರಿಸುವಂತೆ ಒತ್ತಡ ಹೇರಿದ್ದಾರೆ. ಇದು ಮಕ್ಕಳ ಮೂಲಭೂತ ಹಕ್ಕುಗಳಿಗೆ ಭಂಗ ತಂದಂತಾಗಿದೆ. ಹೀಗಾಗಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ತಂದ ಪಿಎಫ್​ಐ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಇದನ್ನು ಓದಿ : RAMA BHAT URIMAJALU No More : ಬಿಜೆಪಿಯ ಭೀಷ್ಮ ಉರಿಮಜಲು ಕೆ.ರಾಮ ಭಟ್‌ ವಿಧಿವಶ

ಇದನ್ನು ಓದಿ : Girl Molested : ವಿದ್ಯುತ್‌ ಮೀಟರ್‌ ರೀಡಿಂಗ್‌ಗೆ ಮನೆಗೆ ಬಂದ : 12 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ

PFI distributes ‘I am Babri’ badge in Kerala on Babri demolition anniversary; FIR registered and NCPCR alerted Babri Masjid Demolition

Comments are closed.