2 killed in Ranchi : ನೂಪುರ್​ ಶರ್ಮಾ ವಿರುದ್ಧದ ಪ್ರತಿಭಟನೆ ವೇಳೆ ಹಿಂಸಾಚಾರ : ಇಬ್ಬರು ಸಾವು

2 killed in Ranchi : ಬಿಜೆಪಿಯ ಮಾಜಿ ವಕ್ತಾರೆ ನೂಪುರ್​ ಶರ್ಮಾ ಪ್ರವಾದಿ ಮೊಹಮ್ಮದ್​ ಪೈಗಂಬರ್​​ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆಯು ದೇಶದಲ್ಲಿ ಹೊಸ ಕಿಚ್ಚನ್ನು ಹಚ್ಚಿದೆ. ನೂಪುರ್​ ಶರ್ಮಾರ ಬಂಧನಕ್ಕೆ ಆಗ್ರಹಿಸಿ ಶುಕ್ರವಾರದಂದು ದೇಶದ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ದೇಶದ ವಿವಿಧೆಡೆಗಳಲ್ಲಿ ಕಲ್ಲು ತೂರಾಟ ನಡೆದಿದ್ದು ಮಾತ್ರವಲ್ಲದೇ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಜಾರ್ಖಂಡ್​ನ ರಾಂಚಿಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ಸಾವನ್ನಪ್ಪಿದ್ದರೆ ಹತ್ತು ಜನರು ಗಾಯಗೊಂಡಿದ್ದಾರೆ.

ಶುಕ್ರವಾರ ನಡೆದ ಪ್ರತಿಭಟನೆಯು ಕ್ರಮೇಣ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಹಿಂಸಾಚಾರ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುತ್ತಿದ್ದಂತೆಯೇ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗುಂಪು ಚದುರಿಸಲು ಯತ್ನಿಸಿದ್ದಾರೆ. ಅಲ್ಲದೇ ಕಲ್ಲು ತೂರಾಟವನ್ನು ನಿಯಂತ್ರಣಕ್ಕೆ ತರಲು ಲಾಠಿ ಚಾರ್ಜ್​ ನಡೆಸಿದ್ದಾರೆ.

ಈ ವಿಚಾರವಾಗಿ ಮಾತನಾಡಿ ರಾಜೇಂದ್ರ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ ಅಧಿಕಾರಿಗಳು, ಪ್ರವಾದಿ ಮೊಹಮ್ಮದ್​ ಪೈಗಂಬರ್​ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್​ ಶರ್ಮಾ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ರಾಂಚಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹಾಗೂ 10 ಮಂದಿ ಗಾಯಗೊಂಡಿದ್ದಾರೆ . ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರತಿಭಟನೆ ಸಂದರ್ಭದಲ್ಲಿ ನಡೆದ ಫೈರಿಂಗ್​ನಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಅಲ್ಲದೇ ನಾಲ್ವರು ಪೊಲೀಸರು ಮತ್ತು 8 ಮಂದಿ ಗಲಭೆಕೋರರು ಗಾಯಗೊಂಡಿ ದ್ದಾರೆ. ಈ ಗಾಯಾಳುಗಳಿಗೆ ರಿಮ್ಸ್​ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುತ್ತೇವೆ ಎಂದು ರಾಂಚಿ ನಗರ ಪೊಲೀಸ್​ ಮುಖ್ಯಸ್ಥ ಅಂಶುಮಾನ್​ ಕುಮಾರ್​ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನು ಓದಿ : Fastest Ball in Cricket History : ಶೋಯೆಬ್ ಅಖ್ತರ್ ವಿಶ್ವದಾಖಲೆ ಉಡೀಸ್ ಮಾಡಿದನಾ ಜಮ್ಮು ಎಕ್ಸ್‌ಪ್ರೆಸ್

ಇದನ್ನೂ ಓದಿ : KL Rahul‌ : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ

ಇದನ್ನೂ ಓದಿ : Coronavirus : ದೇಶದಲ್ಲಿ ಮೂರು ತಿಂಗಳ ಬಳಿಕ ದೈನಂದಿನ ಕೋವಿಡ್ ಪ್ರಕರಣದಲ್ಲಿ ಗಣನೀಯ ಏರಿಕೆ

Remarks against the Prophet: 2 killed in Ranchi as protests erupt across country

Comments are closed.