Rishi Sunak : ಬ್ರಿಟನ್​​​ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್​​ ನಾರಾಯಣ ಮೂರ್ತಿ ಅಳಿಯ ಆಗೋದ್ರ ಹಿಂದಿದೆ ಪುಟ್ಟ ಲವ್​ ಸ್ಟೋರಿ

Rishi Sunak : ಬ್ರಿಟನ್​​ನಲ್ಲಿ ರಾಜಕೀಯ ಹೈಡ್ರಾಮಾ ಶುರುವಾದಾಗಿನಿಂದಲೂ ಪ್ರಬಲವಾಗಿ ಕೇಳಿ ಬರುತ್ತಿದ್ದ ಹೆಸರು ಅಂದರೆ ರಿಷಿ ಸುನಕ್​ . ಜಾನ್​ ಬೋರಿಸ್​ ಬ್ರಿಟನ್​​ನ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್​ ಬಳಿಕ ಜಾನ್​ ಬೋರಿಸ್​ ವಿರುದ್ಧ ತಮ್ಮ ಬಂಡಾಯವನ್ನು ಸೂಚಿಸುವ ಸಂಕೇತವಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಜಾನ್​ ಬೋರಿಸ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೂಡ ನೀಡಿದ್ದರು. ಬೋರಿಸ್​ ರಾಜೀನಾಮೆ ಬಳಿಕ ಬ್ರಿಟನ್​ನಲ್ಲಿ ಪ್ರಧಾನಿ ಆಯ್ಕೆ ಚಟುವಟಿಕೆ ಜೋರಾಗಿದೆ.


ಬ್ರಿಟನ್​ನ ಪ್ರಧಾನಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾರತೀಯ ಮೂಲದ ರಿಷಿ ಸುನಕ್​​ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಐದು ಹಂತದ ಚುನಾವಣೆಯಲ್ಲಿಯೂ ಮುನ್ನಡೆಯನ್ನು ಕಾಯ್ದುಕೊಂಡಿರುವ ರಿಷಿ ಸುನಕ್​​ ಬ್ರಿಟನ್​ ಪ್ರಧಾನಿ ಗದ್ದುಗೆಯೇರಲು ಅಣತಿ ದೂರದಲ್ಲಿದ್ದಾರೆ. ಅಂದಹಾಗೆ ಈ ರಿಷಿ ಸುನಕ್​ ಇನ್ಪೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರ ಅಳಿಯ.


ಈಗ ಬ್ರಿಟನ್​ನಲ್ಲಿ ಪ್ರಧಾನಿ ಸ್ಪರ್ಧೆಯನ್ನು ಎದುರಿಸುತ್ತಿರುವ ರಿಷಿ ಸುನಕ್​ ಹಿಂದೊಮ್ಮೆ ನಾರಾಯಣ ಮೂರ್ತಿಯವರ ಅಳಿಯನಾಗಲೂ ಸಹ ಹರಸಾಹಸವನ್ನೇ ಪಟ್ಟಿದ್ದರಂತೆ. ಈ ಬಗ್ಗೆ ಖುದ್ದು ರಿಷಿ ಸುನಕ್​ರೇ ಹೇಳಿ ಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ಪರಸ್ಪರ ಪ್ರೀತಿಸಿದ್ದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿ ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್​​ರಿಗೆ ಮುಂದಿನ ಹಾದಿ ಅಂದುಕೊಂಡಷ್ಟು ಸುಲಭವಂತೂ ಆಗಿರಲಿಲ್ಲ .


ಅಕ್ಷತಾ ಮೂರ್ತಿ ಪ್ರೀತಿಯ ವಿಚಾರ ತಿಳಿದ ಬಳಿಕ ಮದುವೆಗೆ ನಾರಾಯಣ ಮೂರ್ತಿ ಸುತಾರಾಂ ಒಪ್ಪಿರಲಿಲ್ಲವಂತೆ. ಸ್ಟಾನ್​ಫರ್ಡ್​ ಯೂನಿವರ್ಸಿಟಿಯಲ್ಲಿ ಅಕ್ಷತಾ ಮೂರ್ತಿಯೊಂದಿಗೆ ವ್ಯಾಸಂಗ ಮಾಡಿದ್ದ ರಿಷಿ ಸುನಕ್​​ ಏನಾದರಾಗಲಿ ಅಕ್ಷತಾರನ್ನೇ ಮದುವೆಯಾಗೋದು ಅಂತಾ ಡಿಸೈಡ್​ ಆಗಿದ್ದರಂತೆ .


ಮೊದಲು ಈ ಪ್ರೇಮಕ್ಕೆ ನಾರಾಯಣಮೂರ್ತಿ ಒಪ್ಪಿಗೆಯನ್ನೇ ನೀಡಿರಲಿಲ್ಲವಂತೆ. ಬಳಿ ರಿಷಿ ಸುನಕ್​ರನ್ನು ವೈಯಕ್ತಿಕವಾಗಿ ಭೇಟಿಯಾದ ಮೇಲೆ ಇವರಿಬ್ಬರ ಪ್ರೀತಿಗೆ ಹಸಿರು ನಿಶಾನೆ ದೊರಕಿತ್ತು. ವಿಶೇಷ ಅಂದರೆ ಅಕ್ಷತಾ ಮೂರ್ತಿ ಈಗಲೂ ಕೂಡ ಭಾರತೀಯ ಪ್ರಜೆ.


ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಒಪ್ಪಿಗೆಯನ್ನು ಪಡೆದ ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್​ 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇವರ ದಾಂಪತ್ಯದಲ್ಲಿ ಅನೌಷ್ಕಾ ಹಾಗೂ ಕೃಷ್ಣಾ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಜನಿಸಿದ್ದಾರೆ. ರಿಷಿ ಸುನಕ್​ ರಾಜಕೀಯದ ಸಲಹೆಗಳನ್ನು ನಾರಾಯಣ ಮೂರ್ತಿ ಬಳಿಯಲ್ಲಿ ಕೇಳಿದ್ದರಂತೆ.ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ನವೂ ರಿಷಿ ಸುನಕ್​ಗೆ ಮಾರ್ಗದರ್ಶನ ನೀಡಿದ್ದು ನಾರಾಯಣ ಮೂರ್ತಿಯಂತೆ.ಇದೀಗ ಭಾರತದ ಅಳಿಯ ಬ್ರಿಟನ್​ನಲ್ಲಿ ಗೆಲುವಿನ ರೇಸ್​ನಲ್ಲಿದ್ದು ಪ್ರಧಾನಿ ಹುದ್ದೆ ಆದಷ್ಟು ಬೇಗ ಸುನಕ್​ರ ಪಾಲಾಗಲಿ ಎನ್ನುವುದು ಭಾರತೀಯರ ಆಶಯ ಕೂಡ ಆಗಿದೆ.

ಇದನ್ನು ಓದಿ : Bank holidays August 2022 : ಬ್ಯಾಂಕ್‌ ಗ್ರಾಹಕರ ಗಮನಕ್ಕೆ, ಅಗಸ್ಟ್‌ನಲ್ಲಿ 13 ದಿನಗಳ ಕಾಲ ಬ್ಯಾಂಕ್‌ ಬಂದ್‌

ಇದನ್ನೂ ಓದಿ : bigg boss : ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಭಾಗಿಯಾಗಬೇಕೆಂದುಕೊಂಡಿರುವವರಿಗೆ ಕಲರ್ಸ್ ಕನ್ನಡದಿಂದ ಮಹತ್ವದ ಸಂದೇಶ

Rishi Sunak Akshata Murthy Love Story

Comments are closed.