ಸದಾನಂದನ್ ಮಾಸ್ಟರ್‌ ರಾಜ್ಯಸಭೆಗೆ : 2 ಕಾಲು ಕತ್ತರಿಸಿದ್ರೂ, ಛಲಬಿಡದ ಶಿಕ್ಷಕ

ಕೇರಳ : ದೇವರನಾಡು ಕೇರಳದ ಹಿರಿಯ ಸಾಮಾಜಿಕ ಕಾರ್ಯಕರ್ತ, ಶಿಕ್ಷಣ ತಜ್ಞರಾದ ಸದಾನಂದನ್ ಮಾಸ್ಟರ್‌ ( C Sadanandan Master ) ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ. ಸದಾನಂದನ್ ಮಾಸ್ಟರ್‌ ಅವರ ನೇಮಕ ಇದೀಗ ಬಿಜೆಪಿ ಕಾರ್ಯಕರ್ತರ ಸಂಭ್ರಮಕ್ಕೆ ಕಾರಣವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಖ್ಯಾತ ವಕೀಲರಾದ ಉಲ್ವಲ್‌ ನಿಕಮ್‌, ಮಾಜಿ ವಿದೇಶಾಂಗ ಸಚಿವ ಹರ್ಷವರ್ಧನ್‌ ಶ್ರಿಂಗ್ಲಾ, ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್‌ ಹಾಗೂ ಕೇರಳದ ಹಿರಿಯ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞರಾಗಿರುವ ಸದಾನಂದನ್ ಮಾಸ್ಟರ್‌ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬಾದ ಪೆರಿಚೇರಿಯಲ್ಲಿ ಜನಿಸಿದ ಸದಾನಂದನ್ ಮಾಸ್ಟರ್‌ ಗೌವಾಹಟಿಯ ವಿಶ್ವವಿದ್ಯಾನಿಯಲದಿಂದ ಬಿಕಾಂ ಪದವಿ ಹಾಗೂ ಕ್ಯಾಲಿಕಟ್‌ ವಿಶ್ವವಿದ್ಯಾಲಯದಿಂದ ಬಿಎಡ್‌ ಪದವಿಯನ್ನು ಪಡೆದುಕೊಂಡಿದ್ದರು.

ಸದಾನಂದನ್ ಮಾಸ್ಟರ್‌ ಅವರ ತಂದೆ ಕುಂಜಿರಾಮನ್‌ ನಂಬಿಯಾರ್‌ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ತನ್ನ ತಂದೆ ಹಾಗೂ ಸದಾನಂದನ್ ಮಾಸ್ಟರ್‌ ಅವರ ಅಣ್ಣ ಸಿಪಿಐಎಂನ ಸಿದ್ದಾಂತದಿಂದ ಪ್ತಭಾವಿತರಾಗಿದ್ದರು.

ಆದರೆ ಸದಾನಂದ ಮಾಸ್ಟರ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರಭಾವಿತರಾಗಿದ್ದರು. 1984ರಿಂದ ಸದಾನಂದನ್ ಮಾಸ್ಟರ್‌ ಅವರು ಆರ್‌ಎಸ್‌ಎಸ್‌ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

1999ರಿಂದ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಶ್ರೀ ದುರ್ಗಾ ವಿಲಾಸಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯಾಷನಲ್ ಟೀಚರ್ಸ್ ಯೂನಿಯನ್‌ನ ರಾಜ್ಯ ಉಪಾಧ್ಯಕ್ಷರಾಗಿ, ದೇಶಿಯ ಅಧ್ಯಾಪಕ ವಾರ್ತಾ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಕೇರಳದ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ.

ಕೇರಳ ಬಿಜೆಪಿಯಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಸದಾನಂದನ್ ಮಾಸ್ಟರ್‌ ಅವರು, 2016 ಮತ್ತು 2021ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಕೂತುಪರಂಬಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

Sadanandan Master‌ : 1994ರಲ್ಲಿ ಸದಾನಂದ ಮಾಸ್ಟರ್‌ ಕಾಲು ಕತ್ತರಿಸಿ ವಿಕೃತಿ

ಸದಾನಂದನ್ ಮಾಸ್ಟರ್‌ ಅವರು ಆರ್‌ಎಸ್‌ಎಸ್‌ನ ಬೌದ್ದಿಕ್‌ ಪ್ರಮುಖ್‌ ಆಗಿ ಕೆಲಸ ಮಾಡುತ್ತಿದ್ದರು. 1994ರ ಜನವರಿ 25ರ ರಾತ್ರಿ ಸದಾನಂದ ಮಾಸ್ಟರ್‌ ಅವರು ತನ್ನ ತಂಗಿಯ ನಿಶ್ಚಿತಾರ್ಥದ ಸಿದ್ದತೆ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದರು.

ತನ್ನ ಮನೆಯಿಂದ ಸ್ವಲ್ಪ ದೂರದಲ್ಲೇ ಸಿಪಿಐಎಂ ಕಾರ್ಯಕರ್ತರು ಸದಾನಂದನ್ ಮಾಸ್ಟರ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಸದಾನಂದ ಮಾಸ್ಟರ್‌ ಅವರ ಎರಡು ಕಾಲುಗಳನ್ನು ಕತ್ತರಿಸಿ ಹಾಕಿದ್ದರು.

ಅಷ್ಟೇ ಅಲ್ಲಾ ಗಾಯಗೊಂಡ ಕಾಲನ್ನು ಡಾಂಬರು ರಸ್ತೆಗೆ ಉಜ್ಜಿ ವಿಕೃತಿ ಮರೆದಿದ್ದರು ಅನ್ನೋ ಆರೋಪವೂ ಇದೆ. ಗಾಯದ ಮಡುವಿನಲ್ಲಿ ಬಿದ್ದಿದ್ದ ಸದಾನಂದ ಮಾಸ್ಟರ್‌ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದರು.

Also Read : ದೆಹಲಿ ಪ್ರವಾಸದ ವರೆಗೆ ಸಿದ್ದರಾಮಯ್ಯ ಸಿಎಂ : ಶಾಸಕ ಸುನಿಲ್‌ ಕುಮಾರ್‌ ವ್ಯಂಗ್ಯ

ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರೂ ಕೂಡ ಸದಾನಂದನ್ ಮಾಸ್ಟರ್‌ ಅವರು ಜಗ್ಗಲೇ ಇಲ್ಲ. ಕೃತಕ ಕಾಲುಗಳನ್ನು ಅಳವಡಿಸಿಕೊಂಡು ತನ್ನ ಶಿಕ್ಷಕ ವೃತ್ತಿಯನ್ನು ಮುಂದುವರಿಸಿದ್ದರು.

ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹಲವು ಹುದ್ದೆಗಳನ್ನು ನಿಬಾಯಿಸಿದ್ದಾರೆ. ದೇವರನಾಡು ಕೇರಳದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯ ಜೊತೆಗೆ ಬಿಜೆಪಿಯನ್ನ ಸಂಘಟನಾತ್ಮಕವಾಗಿ ಬೆಳೆಸುವಲ್ಲಿ ಸದಾನಂದನ್ ಮಾಸ್ಟರ್‌ ಸಾಕಷ್ಟು ಶ್ರಮಿಸಿದ್ದಾರೆ.

Sadanandan Master : ರಾಜ್ಯಸಭೆಗೆ ಆಯ್ಕೆಯಿಂದ ಬಿಜೆಪಿಗೇನು ಲಾಭ ?

ಸದಾನಂದನ್ ಮಾಸ್ಟರ್‌ ಅವರ ಕಾಲು ಕತ್ತರಿಸಿದ ಪ್ರಕರಣ ಕೇರಳ ಮಾತ್ರವಲ್ಲ ದೇಶದಾದ್ಯಂತ ಬಾರೀ ಸುದ್ದಿಯನ್ನು ಮಾಡಿತ್ತು. ತನ್ನ ಕಾಲು ಕಳೆದುಕೊಂಡಿದ್ದರೂ ಕೂಡ ಅವರು ಎದೆಗುಂದದೆ ಬದುಕಿದ್ದು ಬಿಜೆಪಿಗೆ ವರದಾನವಾಗಿತ್ತು.

ಸದಾನಂದನ್ ಮಾಸ್ಟರ್‌ ಅವರ ಪ್ರೇರಣೆಯಿಂದಲೇ ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಾಮಾನ್ಯ ಶಾಲೆಯ ಶಿಕ್ಷಕರಿಗೆ ರಾಜ್ಯಸಭೆಯ ಸ್ಥಾನಮಾನ ಸಿಕ್ಕಿರೋದು ಕೇರಳದ ಬಿಜೆಪಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

ಮುಂದಿನ ಕೇರಳ ಚುನಾವಣೆಯಲ್ಲಿ ಸದಾನಂದನ್ ಮಾಸ್ಟರ್‌ ಅವರು ಚುನಾವಣೆಯ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ. ಮಾತ್ರವಲ್ಲ ಎಡರಂಗದ ಸರಕಾರದ ವಿರುದ್ದ ಕೇಳಿಬರುತ್ತಿರೋ ಆರೋಪಗಳು ಬಿಜೆಪಿಗೆ ವರದಾನ ಆಗುವ ಸಾಧ್ಯತೆಯೂ ಇದೆ.

ಸದಾನಂದ ಮಾಸ್ಟರ್‌ ಹೊಗಳಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ಸಸದಾನಂದನ್ ಮಾಸ್ಟರ್‌ ಅವರು ನೇಮಕ ಆಗುತ್ತಲೇ ಗುಣಗಾನ ಮಾಡಿದ್ದಾರೆ. ಸದಾನಂದ ಮಾಸ್ಟರ್‌ ಅವರನ್ನು ಬಿಜೆಪಿ ಜೀವಂತ ಹುತಾತ್ಮ ಎಂದು ಕರೆಯುತ್ತಿದೆ.

ಸದಾನಂದನ್ ಮಾಸ್ಟರ್‌ ಅವರ ನೇಮಕ ತ್ಯಾಗಕ್ಕೆ ಸಿಕ್ಕ ಗೌರವ, ಅವರ ಜೀವನವನ್ನು ಧೈರ್ಯ ಮತ್ತು ಅನ್ಯಾಯಕ್ಕೆ ಮಣಿಯದೇ ಇರುವ ಪ್ರತಿರೂಪ ಎಂದು ಮೋದಿ ಅವರು ಬಣ್ಣಿಸಿದ್ದಾರೆ.

Also Read : ಅಂಚೆ ಕಚೇರಿ ಯೋಜನೆ : 5 ಲಕ್ಷ ಠೇವಣಿ ಇಟ್ರೆ ಸಿಗುತ್ತೆ 10 ಲಕ್ಷ..!

ಆರ್‌ಎಸ್‌ಎಸ್‌ ನಾಯಕರಾಗಿ ಸದಾನಂದನ್ ಮಾಸ್ಟರ್‌

ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಸದಸ್ಯರಾಗಿದ್ದರು. ಪದವಿ ಶಿಕ್ಷಣದ ನಂತರದಲ್ಲಿ ಅವರು ಆರ್‌ಎಸ್‌ಎಸ್‌ನ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದರು.

ಆರ್‌ಎಸ್‌ಎಸ್‌ ವಿಚಾರಧಾರೆಗಳನ್ನು ಕೇರಳದಾದ್ಯಂತ ಪಸರಿಸುವತ್ತ ಮಹತ್ವದ ಕಾರ್ಯ ಮಾಡಿದ್ದಾರೆ. ಅವರು ರಾಷ್ಟ್ರೀಯ ಶಿಕ್ಷಕರ ಒಕ್ಕೂಟದ ಅಧ್ಯಕ್ಷರಾಗಿ ಅಷ್ಟೇ ಅಲ್ಲಾ, ಆರ್‌ಎಸ್‌ಎಸ್ ಚಿಂತಕರ ಚಾವಡಿಯಾದ ಭಾರತೀಯ ವಿಚಾರ ಕೇಂದ್ರದ ಸಕ್ರಿಯ ಸದಸ್ಯರೂ ಆಗಿದ್ದಾರೆ.

1994ರಲ್ಲಿ ತಮ್ಮ ಮೇಲೆ ದಾಳಿ ನಡೆಯುವ ವೇಳೆಯಲ್ಲಿಯೂ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೌದ್ದಿಕ್‌ ಪ್ರಮುಖ್‌ ಆಗಿ ಸೇವೆ ಸಲ್ಲಿಸುತ್ತಿದ್ದರು.

Sadanandan Master Nominate Rajya Sabha Kerala Politician and School teacher Who Lost Both Legs in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories