CHEESEBURGER FISH : ಸಮುದ್ರದಾಳದಲ್ಲಿ ಪತ್ತೆಯಾಯ್ತು ಅಪರೂಪದ ಮೀನು: ಬರ್ಗರ್​ ಮಾದರಿಯ ಜಲಚರ ಕಂಡ ನೆಟ್ಟಿಗರು ಶಾಕ್​​

ಚೈನೀಸ್​ ರೆಸ್ಟಾರೆಂಟ್​ಗಳಿಗೆ ಹೋದರೆ ಸಾಕು ನಿಮಗೆ ಮೆನು ಪಟ್ಟಿಯಲ್ಲಿ ಚೀಸ್​ ಬರ್ಗರ್​​ ಮೊದಲ ಸಾಲಿನಲ್ಲಿಯೇ ಕಾಣಸಿಗುತ್ತದೆ. ಇದನ್ನು ನೀವು ಕೂಡ ಬಾಯಲ್ಲಿ ನೀರೂರಿಸುತ್ತಲೇ ತಿಂದಿರ್ತೀರಾ. ಆದರೆ ಎಲ್ಲಾದರೂ ಥೇಟ್​​ ಚೀಸ್​ ಬರ್ಗರ್​ನಂತೆಯೇ ಕಾಣುವ ಮೀನನ್ನು(CHEESEBURGER FISH) ಕಂಡಿದ್ದೀರೇ..? ಇಲ್ಲ ಎಂದಾದಲ್ಲಿ ನೀವು ಈ ಸ್ಟೋರಿಯನ್ನು ಓದಲೇಬೇಕು.

ಕಡಲಿನ ಒಡಲು ಕೌತುಕಗಳ ಮಡಿಲು ಅಂತಾ ಹೇಳಿದ್ರೆ ತಪ್ಪಾಗಲಾರದು. ಏಕೆಂದರೆ ಮನುಷ್ಯ ಎಷ್ಟೇ ಆವಿಷ್ಕಾರಗಳನ್ನು ಮಾಡಿದ್ದೇನೆ ಎಂದು ಹೇಳಿಕೊಂಡರೂ ಸಹ ಮಾನವ ಕುಲಕ್ಕೆ ಆಶ್ಚರ್ಯವನ್ನುಂಟು ಮಾಡಬಲ್ಲ ಯಾವುದಾದರೊಂದು ವಿಚಾರವನ್ನು ಸಮುದ್ರ ತನ್ನೊಟ್ಟಿಗೆ ಇಟ್ಟುಕೊಂಡಿರುತ್ತೆ.ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ರಷ್ಯಾದಲ್ಲಿ ಚೀಸ್​ ಬರ್ಗರ್​ನಂತೆ ಕಾಣುವ ಮೀನೊಂದು ಬಲೆಗೆ ಬಿದ್ದಿದೆ.

ವಿಚಿತ್ರ ಅನಿಸಿದ್ರು ಸತ್ಯ..! ಈ ಮೀನು ನೋಡೋಕೆ ಥೇಟ್​ ಚೀಸ್​ ಬರ್ಗರ್​ಗೆ ಹಲ್ಲು ಬಂದಂತೆ ಕಾಣುವಂತಿದೆ. 39 ವರ್ಷದ ಮೀನುಗಾರ ರೋಮನ್​ ಫೆಡರೋಟ್ಸವ್​ ಎಂಬವರು ರಷ್ಯಾದಲ್ಲಿ ಈ ವಿಚಿತ್ರ ಮೀನನ್ನು ಬಲೆಗೆ ಬೀಳಿಸಿದ್ದಾರೆ. ಈ ಚೀಸ್​ ಬರ್ಗರ್​ ಮೀನಿನ ಫೋಟೋವನ್ನು ರೋಮನ್​​ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಸಖತ್​ ವೈರಲ್​ ಆಗಿದೆ.
ಅನೇಕರು ಇದನ್ನು ಹೊಸ ಬಗೆಯ ಚೀಸ್​ ಬರ್ಗರ್​ ಅಂತಾ ಕರೆದ್ರೆ ಇನ್ನು ಕೆಲವರು ಇದೇನು ಚಿಕನ್​ ಸ್ಯಾಂಡ್​ವಚ್​​ ಎಂದು ಹೇಳಿದ್ದಾರೆ. ಆದರೆ ಈ ಮೀನಿನ ನಿಜವಾದ ಹೆಸರು ಅಥವಾ ಜಾತಿಗೆ ಬಗ್ಗೆ ಇಲ್ಲಿವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ .

ಇದನ್ನೂ ಓದಿ : Guinness Records : ಸೋಡಾ ಕುಡಿದು ಗಿನ್ನೆಸ್​ ರೆಕಾರ್ಡ್​ ಬರೆದ ಭೂಪ ..!!

ಇದನ್ನು ಓದಿ : Viral Video : ಮೊಟ್ಟೆ ತಿನ್ನೋಕೆ ಬಂದಿದ್ದ ಹಾವಿಗೆ ಬಿಗ್‌ ಶಾಕ್‌ : ಹಾವನ್ನೇ ಅಟ್ಟಾಡಿಸಿ ಓಡಿಸಿದ ಕೋಳಿ !

Man finds bizarre fish that looks like ‘cheeseburger with teeth’

Comments are closed.