Cow As National Animal: ‘ಇದು ಕೋರ್ಟ್​ನ ಕೆಲಸವೇ..?’ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದವರಿಗೆ ಸುಪ್ರೀಂಕೋರ್ಟ್ ಪ್ರಶ್ನೆ

ದೆಹಲಿCow As National Animal : ಗೋವುಗಳನ್ನು ಭಾರತದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ . ಈ ಅರ್ಜಿಯಲ್ಲಿ ದೇಶದಲ್ಲಿ ಗೋವುಗಳನ್ನು ರಕ್ಷಣೆ ಮಾಡಲು ಪರಿಹಾರ ನೀಡಬೇಕು ಎಂದೂ ಕೇಳಲಾಗಿತ್ತು.


ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್​.ಕೆ ಕೌಲ್​ ಹಾಗೂ ಅಭಯ್​ ಶ್ರೀನಿವಾಸ್​ ಓಕಾ ಅವರನ್ನೊಳಗೊಂಡ ಪೀಠವು ಇಂದು ವಿಚಾರಣೆ ಕೊನೆಯಲ್ಲಿ ಮನವಿಯನ್ನು ಸಲ್ಲಿಸಿದ ಬಳಿಕ ಅರ್ಜಿದಾರರಿಗೆ ಅರ್ಜಿಯನ್ನು ಹಿಂಪಡೆಯುವಂತೆ ಹೇಳಿದೆ. ಈ ವಿಚಾರವಾಗಿ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲರು ಕೇಂದ್ರ ಸರ್ಕಾರಕ್ಕೆ ಗೋವುಗಳನ್ನು ರಕ್ಷಿಸುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದೆ.


ಆದರೆ ಈ ಅರ್ಜಿಗೆ ಋಣಾತ್ಮಕ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಯಾವುದೇ ಪ್ರಾಣಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವುದು ನ್ಯಾಯಾಲಯದ ಕೆಲಸವೇ..? ಇಂತಹ ಅರ್ಜಿಗಳನ್ನು ಏಕೆ ಸಲ್ಲಿಸುತ್ತೀರಿ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ.


ನಾನು ನಿಮ್ಮ ಪ್ರಭುತ್ವವನ್ನು ಒತ್ತಾಯಿಸುವುದಿಲ್ಲ. ಆದರೆ ಇದನ್ನು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ವಿನಂತಿಸುತ್ತೇನೆ ಎಂದು ಅರ್ಜಿದಾರರ ಪರ ವಕೀಲರು ಉತ್ತರಿಸಿದ್ದಾರೆ. “ಈಗ ನೀವು ಆರ್ಟಿಕಲ್ 32 ರ ಅಡಿಯಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಯಾರ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ? ನೀವು ಅಂತಹ ಅರ್ಜಿಗಳೊಂದಿಗೆ ನ್ಯಾಯಾಲಯಕ್ಕೆ ಬರುವುದರಿಂದ ಕಾನೂನನ್ನು ಗಾಳಿಗೆ ತೂರಲಾಗಿದೆಯೇ?” ಎಂದು ಸಿಟ್ಟಿಗೆದ್ದ ಪೀಠವು ಪ್ರಶ್ನಿಸಿತು.”ನಾನು ನಿಮ್ಮ ಪ್ರಭುತ್ವವನ್ನು ಒತ್ತಾಯಿಸುವುದಿಲ್ಲ ಆದರೆ ಇದನ್ನು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ವಿನಂತಿಸುತ್ತೇನೆ” ಎಂದು ಅರ್ಜಿದಾರರ ಪರ ವಕೀಲರು ಉತ್ತರಿಸಿದರು.

ಇದನ್ನು ಓದಿ : Dhoni Entertainment : ಕ್ಯಾಪ್ಟನ್ ಕೂಲ್ ಧೋನಿ ಇನ್ನು ಮುಂದೆ ಸಿನಿಮಾ ಪ್ರೊಡ್ಯೂಸರ್.. ತಮಿಳು, ತೆಲುಗು, ಮಲಯಾಳಂ ಚಿತ್ರ ನಿರ್ಮಿಸಲಿದ್ದಾರೆ ಮಾಹಿ

ಇದನ್ನೂ ಓದಿ : Congress Party’s Bharat Jodo Yatra :ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಕಮಲ‌ ಕಲಿಗಳಿಂದ ಠಕ್ಕರ್

Supreme Court Refuses To Entertain Plea To Declare Cow As National Animal Of India

Comments are closed.