Centella Asiatica:ನೆನಪಿನ ಶಕ್ತಿ ವೃದ್ಧಿಸುವ ಒಂದೆಲಗದ ಚಟ್ನಿ

(Centella Asiatica)ಸಾಮಾನ್ಯವಾಗಿ ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂಬ ಕಾರಣಕ್ಕೆ ಒಂದೆಲಗವನ್ನು ಮಕ್ಕಳಿಗೆ ತಿನ್ನಿಸುತ್ತಾರೆ. ಇನ್ನು ಸಾಕಷ್ಟು ಮಂದಿ ಒಂದೆಲಗದಿಂದ ಚಟ್ನಿಯನ್ನು ತಯಾರಿಸಿ ತಿನ್ನುತ್ತಾರೆ. ಈ ಚಟ್ನಿ ರುಚಿಕರವಾಗಿರುವುದು ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಒಂದಲಗದ ಚಟ್ನಿ ಮಾಡುವ ವಿಧಾನ ಈ ಕೆಳಗಿನಂತಿದೆ.

(Centella Asiatica)ಬೇಕಾಗುವ ಸಾಮಗ್ರಿಗಳು :

  • ಒಂದಲಗ ಸೊಪ್ಪು
  • ಹಸಿ ಮೆಣಸು
  • ಬೆಳ್ಳುಳ್ಳಿ
  • ಹುಳಿ
  • ಉಪ್ಪು
  • ಎಣ್ಣೆ
  • ತುರಿದ ಕಾಯಿ

ಮಾಡುವ ವಿಧಾನ :
ಮೊದಲಿಗೆ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಂದಲಗ, ಹಸಿಮೆಣಸು, ಬೆಳ್ಳುಳ್ಳಿಯನ್ನು ಹುರಿದುಕೊಳ್ಳಬೇಕು.ಹುರಿದುಕೊಂಡ ಪದಾರ್ಥವನ್ನು ಮಿಕ್ಸಿ ಗೆ ಹಾಕಿ ಅದರ ಜೋತೆ ತುರಿದ ಕಾಯಿ, ಹುಳಿ, ಉಪ್ಪು ಹಾಕಿ ರುಬ್ಬಿಕೊಂಡರೆ ರುಚಿ ರುಚಿಯಾದ ಒಂದೆಲಗದ ಚಟ್ನಿ ರೆಡಿ. ಇದನ್ನು ದೋಸೆ, ಚಪಾತಿ, ಅನ್ನದ ಜೋತೆ ತಿಂದರೆ ಇನ್ನೂ ರುಚಿಯಾಗಿರುತ್ತದೆ.

ಹಿರೆಕಾಯಿ ಸಿಪ್ಪೆಯ ಚಟ್ನಿ

  • ಬೇಕಾಗುವ ಸಾಮಗ್ರಿ
  • ಹಿರೆಕಾಯಿ ಸಿಪ್ಪೆ
  • ಹಸಿ ಮೆಣಸು
  • ಬೆಳ್ಳುಳ್ಳಿ
  • ಹುಳಿ
  • ಉಪ್ಪು
  • ಎಣ್ಣೆ
  • ತುರಿದ ಕಾಯಿ

ಮಾಡುವ ವಿಧಾನ:

ಹಿರೆಕಾಯಿ ಸಿಪ್ಪೆಯನ್ನು ಬೆಯಿಸಿಕೊಳ್ಳಬಹುದು ಅಥವ ಹುರಿದುಕೊಳ್ಳಬಹುದು. ಒಂದು ಬಣಾಲೆಗೆ ಎಣ್ಣೆಯನ್ನು ಹಾಕಿ ಹಸಿಮೆಣಸು, ಬೆಳ್ಳುಳ್ಳಿ ಹುರಿದುಕೊಳ್ಳಬೇಕು. ಮಿಕ್ಸಿಯಲ್ಲಿ ಹುರಿದುಕೊಂಡ ಹಸಿಮೆಣಸು, ಬೆಳ್ಳುಳ್ಳಿ, ಹಿರೆಕಾಯಿ ಸಿಪ್ಪೆ, ತುರಿದ ಕಾಯಿ, ಉಪ್ಪು, ಹುಳಿ ಹಾಕಿ ರುಬ್ಬಿದರೆ ಹಿರೆಕಾಯಿ ಚಟ್ನಿ ರೆಡಿ. ಸಿಪ್ಪೆಯಲ್ಲಿ ಮಾಡಿದ ಚಟ್ನಿ ಎಂದಾಗ ತಿನ್ನಲು ಕಷ್ಟವೆನಿಸಬಹುದು ಆದರೆ ಇದರಿಂದ ಹಲವಾರು ಉಪಯೋಗ ಇರುವುದರಿಂದ ಆರೋಗ್ಯಕ್ಕೆ ಉತ್ತಮ.

ಟೊಮೆಟೊ ಚಟ್ನಿ

  • ಬೇಕಾಗುವ ಸಾಮಾಗ್ರಿಗಳು:
  • ಟೊಮೆಟೊ
  • ಒಣ ಮೆಣಸು
  • ಎಣ್ಣೆ
  • ಬೆಳ್ಳುಳ್ಳಿ
  • ಹುಳಿ
  • ಉಪ್ಪು
  • ತುರಿದ ಕಾಯಿ

ಮಾಡುವ ವಿಧಾನ:
ಮೊದಲಿಗೆ ಟೊಮೆಟೊವನ್ನು ಬೆಯಿಸಿಕೊಳ್ಳಬೇಕು ನಂತರ ಒಂದು ಬಣಾಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಒಣ ಮೆಣಸು, ಬೆಳ್ಳುಳ್ಳಿ ಹುರಿದುಕೊಳ್ಳಬೇಕು. ತದನಂತರ ಮಿಕ್ಸಿಯ ಜಾರಿನಲ್ಲಿ ಬೆಯಿಸಿದ ಟೊಮೆಟೊ, ಹುರಿದ ಒಣ ಮೆಣಸು, ಬೆಳ್ಳುಳ್ಳಿ ಹಾಗೂ ತುರಿದ ಕಾಯಿ,ಹುಳಿ,ಉಪ್ಪು ಎಲ್ಲವನ್ನು ಹಾಕಿ ರುಬ್ಬಿಕೊಂಡರೆ ರುಚಿ ರುಚಿಯಾದ ಟೊಮೆಟೊ ಚಟ್ನಿ ರೆಡಿ.

ಇದನ್ನೂ ಓದಿ:Domino’s Pizza:ಪಿಝಾ ಆರ್ಡರ್ ಮಾಡಿದವರಿಗೆ ಬಿಗ್ ಶಾಕ್‌ : ಡೊಮಿನೋಸ್‌ ಪಿಝಾದಲ್ಲಿ ಗಾಜಿನ ಚೂರು ಪತ್ತೆ

ಇದನ್ನೂ ಓದಿ:Film Fare awards 2022 :‌ ಫಿಲ್ಮ್ ಫೇರ್ ನಲ್ಲಿ ಚಿರುಗೆ ಅವಾರ್ಡ್: ಪ್ರಶಸ್ತಿ ಸ್ವೀಕರಿಸಿದ ಮೇಘನಾ ಭಾವುಕ

ಸಿಹಿ ಕುಂಬಳಕಾಯಿ ಸಿಪ್ಪೆಯ ಚಟ್ನಿ

  • ಬೇಕಾಗುವ ಸಾಮಾಗ್ರಿಗಳು:
  • ಸಿಹಿ ಕುಂಬಳಕಾಯಿ
  • ಒಣ ಮೆಣಸು ಅಥವಾ ಹಸಿ ಮೆಣಸು
  • ಬೆಳ್ಳುಳ್ಳಿ
  • ಹುಳಿ
  • ಉಪ್ಪು
  • ತುರಿದ ಕಾಯಿ

ಮಾಡುವ ವಿಧಾನ

ಒಂದು ಬಣಾಲೆಯಲ್ಲಿ ಎಣ್ಣೆ ಹಾಕಿ, ಅದರಲ್ಲಿ ಸಿಹಿ ಕುಂಬಳಕಾಯಿ ಸಿಪ್ಪೆ, ಮೆಣಸು,ಬೆಳ್ಳುಳ್ಳಿಯನ್ನು ಹುರಿದುಕೊಳ್ಳಬೇಕು .ನಂತರ ಮಿಕ್ಸಿ ಜಾರಿಯಲ್ಲಿ ಹುರಿದ ಪದಾರ್ಥಗಳ ಜೊತೆಗೆ ತುರಿದ ಕಾಯಿ, ಹುಳಿ, ಉಪ್ಪು ಹಾಕಿಕೊಂಡು ರುಬ್ಬಿಕೊಂಡರೆ ರುಚಿಯಾದ ಚಟ್ನಿ ತಯಾರಾಗುತ್ತದೆ.

Centella Asiatica improves memory

Comments are closed.