Cylinder Blast : ಅಡುಗೆ ಅನಿಲ ಸಿಲಿಂಡರ್ ಸ್ಫೋಟ : ಮಹಿಳೆ ಸಾವು, 10 ಮಂದಿಗೆ ಗಾಯ

ಸೇಲಂ : ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸ್ಪೋಟಗೊಂಡು (Cylinder Blast) ಮಹಿಳೆ ಸಾವನ್ನಪ್ಪಿ ಕನಿಷ್ಠ 10 ಜನರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ಕಳಿಂಗಪಟ್ಟಿ ಎಂಬಲ್ಲಿ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮೃತರನ್ನು ರಾಜಲಕ್ಷ್ಮಿ (80 ವರ್ಷ ) ಎಂಬವರೇ ಮೃತ ದುದೈವಿ. ಬೆಳಗ್ಗೆ ಚಹಾ ಮಾಡುವ ಸಲುವಾಗಿ ಗ್ಯಾಸ್‌ ಆನ್‌ ಮಾಡಿದ್ದಾರೆ. ಈ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡು ಗ್ಯಾಸ್‌ ಸ್ಪೋಟಗೊಂಡಿದೆ. ವೆಂಕಟರಾಜನ್ (62 ವರ್ಷ ), ಇಂದಿರಾಣಿ (54 ವರ್ಷ ), ಮೋಹನ್ ರಾಜ್ (40 ವರ್ಷ), ನಾಗಸುತ (30 ವರ್ಷ), ಗೋಪಾಲ್ (70 ವರ್ಷ), ಧನಲಕ್ಷ್ಮಿ (64 ವರ್ಷ), ಸುದರ್ಶನ್ (6 ವರ್ಷ), ಗಣೇಶನ್ (37 ವರ್ಷ), ಉಷಾರಾಣಿ (40ವರ್ಷ), ಲೋಕೇಶ್ (10 ವರ್ಷ) ಎಂಬವರೇ ಗಾಯಗೊಂಡವರು.

ಘಟನೆಯಿಂದಾಗಿ ಅಕ್ಕ ಪಕ್ಕದಲ್ಲಿನ ಸುಮಾರು ನಾಲ್ಕೈದು ಮನೆಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಗೋಪಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಒಟ್ಟು ೧೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಅಲ್ಲದೇ ಘಟನೆಯ ಕುರಿತು ತನಿಖೆ ಮುಂದುವರಿದಿದೆ.

ಇದನ್ನೂ ಓದಿ :  ಸಿನಿಮಾದಲ್ಲಿ ನಟಿಸುವ ಆಮಿಷ : ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ

ಇದನ್ನೂ ಓದಿ : ವ್ಯಾನ್‌ – ಟ್ಯಾಂಕರ್ ಭೀಕರ ಅಪಘಾತ : 5 ಮಂದಿ ಸಾವು, ಮೂವರ ಸ್ಥಿತಿ ಚಿಂತಾಜನಕ

(Gas Cylinder Blast in Salem women death 10 people injured)

Comments are closed.