KL Rahul : IND vs NZ ಟೆಸ್ಟ್‌ ಸರಣಿಯಿಂದ ಹೊರಬಿದ್ದ ಕೆ.ಎಲ್‌. ರಾಹುಲ್

ಮುಂಬೈ : ನ್ಯೂಜಿಲೆಂಡ್‌ ವಿರುದ್ದ(IND vs NZ) ಟೆಸ್ಟ್‌ ಸರಣಿಗೂ ಮುನ್ನವೇ ಕ್ರಿಕೆಟ್‌ ಪ್ರಿಯರಿಗೆ ಬಿಗ್‌ ಶಾಕ್‌ ಎದುರಾಗಿದೆ. ಟಿ20 ಸರಣಿಯಲ್ಲಿ ಅದ್ಬುತ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ಕನ್ನಡಿಗ ಕೆ.ಎಲ್‌. ರಾಹುಲ್‌ (KL Rahul) ಟೆಸ್ಟ್‌ ಸರಣಿಯಿಂದ ಹೊರಬಿದ್ದಿದ್ದಾರೆ. ಎಡತೊಡೆ ಮೇಲೆ ಸ್ನಾಯು ಸೆಳೆತ ಉಂಟಾಗಿದ್ದು, ಬದಲಿ ಆಟಗಾರರನ್ನು ಬಿಸಿಸಿಐ ಘೋಷಣೆ ಮಾಡಿದೆ.

ನ್ಯೂಜಿಲೆಂಡ್‌ ವಿರುದ್ದ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ದ ಸರಣಿಗೆ ಟೀಂ ಇಂಡಿಯಾ ಸಜ್ಜುಗೊಳ್ಳಬೇಕಾಗಿದೆ. ನ್ಯೂಜಿಲೆಂಡ್‌ ವಿರುದ್ದದ ಮೊದಲ ಪಂದ್ಯದಲ್ಲಿ ನಾಯಕ ವಿರಾಟ್‌ ಕೊಯ್ಲಿ ಹೊರಗುಳಿದಿದ್ದಾರೆ. ಹೀಗಾಗಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಚುಟುಕು ಕ್ರಿಕೆಟ್‌ ನಾಯಕ ರೋಹಿತ್‌ ಶರ್ಮಾ ಅವರಿಗೆ ಈಗಾಗಲೇ ವಿಶ್ರಾಂತಿ ನೀಡಲಾಗಿತ್ತು. ಆದ್ರೀಗ ಭರವಸೆಯ ಆಟಗಾರ ಕೆ.ಎಲ್.ರಾಹುಲ್‌ ಕೂಡ ತಂಡದಿಂದ ಹೊರಗುಳಿದಿದ್ದಾರೆ. ಹೀಗಾಗಿ ಸೂರ್ಯಕುಮಾರ್‌ ಯಾದವ್‌ ಅವರನ್ನು ರಾಹುಲ್‌ ಬದಲಿ ಆಟಗಾರನನ್ನಾಗಿ ನೇಮಕ ಮಾಡಲಾಗಿದೆ.

ರಾಹುಲ್‌ ಗಾಯಗೊಂಡಿರುವ ಕುರಿತು ಬಿಸಿಸಿಐ ಅಧಿಕೃತ ಹೇಳಿಕೆಯನ್ನು ನೀಡಿದೆ. ಆದರೆ ಗಾಯ ಯಾವ ಸ್ವರೂಪದ್ದು ಅನ್ನೋ ಬಗ್ಗೆ ತಿಳಿದು ಬಂದಿಲ್ಲ. ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ತಯಾರಿಗಾಗಿ ಅವರು ಈಗ NCA ಯಲ್ಲಿ ಪುನರ್ವಸತಿಗೆ ಒಳಗಾಗಲಿದ್ದಾರೆ. ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಕೆಎಲ್ ರಾಹುಲ್ ಬದಲಿಗೆ ಶ್ರೀ ಸೂರ್ಯಕುಮಾರ್ ಯಾದವ್ ಅವರನ್ನು ಹೆಸರಿಸಿದೆ ಎಂದು ಬಿಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಕೊಹ್ಲಿ ತಂಡವನ್ನು ಮುನ್ನಡೆಸಲು ಮರಳುತ್ತಾರೆ ಆದರೆ ರೋಹಿತ್‌ಗೆ ಸಂಪೂರ್ಣ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. “ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಶ್ರೀ. ಕೆ.ಎಲ್. ರಾಹುಲ್ ಎಡತೊಡೆಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ ಮತ್ತು ಮುಂಬರುವ ನ್ಯೂಜಿಲೆಂಡ್ ವಿರುದ್ಧದ 2-ಪಂದ್ಯಗಳ Paytm ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.

ಭಾರತ ಟೆಸ್ಟ್ ತಂಡ : ಅಜಿಂಕ್ಯ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ವೃದ್ಧಿಮಾನ್ ಸಹಾ (ವಿಕೆಟ್-ಕೀಪರ್), ಕೆಎಸ್ ಭರತ್ (ವಿಕೆಟ್-ಕೀಪರ್, ) ರವೀಂದ್ರ ಜಡೇಜಾ, ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಎಂಡಿ ಸಿರಾಜ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ : Syed Mushtaq Ali Trophy : ಮನೀಶ್‌ ಪಾಂಡೆ, ಕದಂ ಆರ್ಭಟ : ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಇದನ್ನೂ ಓದಿ : SMAT Final : ಸಯ್ಯದ್‌ ಮುಸ್ತಾಕ್‌ ಆಲಿ ಟ್ರೋಫಿ ಗೆದ್ದ ತಮಿಳುನಾಡು: ಫೈನಲ್‌ನಲ್ಲಿ ಎಡವಿದ ಕರ್ನಾಟಕ

( IND vs NZ: KL Rahul Ruled Out of Test Series, another top Batsman Added )

Comments are closed.