Yahoo News : ಭಾರತದಲ್ಲಿ ಸುದ್ದಿ ನಿಲ್ಲಿಸಿದ ಯಾಹೂ

ನವದೆಹಲಿ : ಭಾರತದಲ್ಲಿ ಸುದ್ದಿ ಮಾಧ್ಯಮ ಸಂಸ್ಥೆಯಾಗಿದ್ದ ಯಾಹೂ ನ್ಯೂಸ್‌ ಇನ್ಮುಂದೆ ಸುದ್ದಿ ಪ್ರಕಟಿಸುವುದನ್ನು ನಿಲ್ಲಿಸಲಿದೆ. ವಿದೇಶಿ ಮಾಲೀಕತ್ವದ ಕಂಪೆನಿಗಳಿಗೆ ಹೊಸ ವಿದೇಶಿ ನೇರ ಹೂಡಿಕೆ (FDI) ನಿಯಮಗಳಿಂದಾಗಿ ಯಾಹೂ ತನ್ನ ಸುದ್ದಿ ವೆಬ್‌ಸೈಟ್‌ಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

ಕಳೆದ ಎರಡು ದಶಕಗಳಿಂದಲೂ ಯಾಹೂ ನ್ಯೂಸ್‌ ಕಾರ್ಯನಿರ್ವಹಿಸುತ್ತಿತ್ತು. ಅದ್ರಲ್ಲೂ ಯಾಹೂ ಸುದ್ದಿ ಮಾತ್ರವಲ್ಲದೇ ಕ್ರಿಕೆಟ್‌, ಹಣಕಾಸು, ಮನರಂಜನೆ ಸೇರಿದಂತೆ ಹಲವು ಸೇವೆಗಳನ್ನು ಭಾರತೀಯರಿಗೆ ಒದಗಿಸುತ್ತಿದೆ. ಆದರೆ ಇಂದಿನಿಂದ ಯಾಹೂ ಭಾರತದಲ್ಲಿ ಸುದ್ದಿಯನ್ನು ಪ್ರಕಟಿಸುವುದಿಲ್ಲ. ಆದರೆ ಯೂಹೂ ಈ ಮೇಲ್‌ ಹಾಗೂ ಸರ್ಚ್‌ ಇಂಜಿನ್‌ ಸೇವೆಯನ್ನು ಬಳಸುತ್ತಿರುವವರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಯಾಹೂ ಇಂಡಿಯಾ ಹೇಳಿದೆ.

ಯುಎಸ್‌ ಮೂಲಕ ಟೆಕ್‌ ಕಂಪೆನಿಯಾಗಿರುವ ವೆರಿಝಾನ್‌ 2017ರಲ್ಲಿ ಯಾಹೂವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಆದರೆ ಕೇಂದ್ರ ಸರಕಾರ ಅಕ್ಟೋಬರ್‌ನಲ್ಲಿ ಜಾರಿಗೆ ತರಲಿರುವ ಹೊಸ ಎಫ್‌ಡಿಐ ನಿಯಮಾವಳಿಗಳ ಪ್ರಕಾರ, ಭಾರತದಲ್ಲಿ ಡಿಜಿಟಲ್ ಮಾಧ್ಯಮ ಕಂಪನಿಗಳು ವಿದೇಶಿ ಹೂಡಿಕೆಯ ರೂಪದಲ್ಲಿ ಶೇ 26 ರಷ್ಟು ಹೂಡಿಕೆಯನ್ನು ಮಾತ್ರವೇ ಸ್ವೀಕರಿಸಬಹುದಾಗಿದೆ. ಆದರೆ ಯಾರೂ ವಿದೇಶಿ ಮೂಲದ ಕಂಪೆನಿಯಾಗಿರೋದ್ರಿಂದಾಗಿ ಇನ್ಮುಂದೆ ವ್ಯವಹಾರ ನಡೆಸಲು ಸಾಧ್ಯವಿಲ್ಲ ಎಂದಿದೆ.

ಕಳೆದ ಇಪತ್ತು ವರ್ಷಗಳಿಂದಲೂ ಭಾರತೀಯರಿಗೆ ಸೇವೆಯನ್ನು ಒದಗಿಸಿದ ಹೆಮ್ಮೆ ನಮಗಿದೆ. ಇಷ್ಟು ವರ್ಷಗಳ ಕಾಲ ಸೇವೆಯನ್ನು ಸಲ್ಲಿದ್ದು ಭಾರತೀಯರಿಗೆ ಹತ್ತಿರುವಾಗಲು ಸಹಕಾರ ನೀಡಿದ ಎಲ್ಲರಿಗೂ ಯಾಹೂ ಧನ್ಯವಾದವನ್ನು ಹೇಳಿದೆ. ಆದರೆ ನೀವೂ ಯಾಹೂ ಮೇಲ್‌ ಸೇವೆಯನ್ನು ಬಳಸುತ್ತಿದ್ದರೆ, ಅದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಇದನ್ನೂ ಓದಿ : ಈ ನಂಬರ್‌ಗೆ ಮಿಸ್‌ಕಾಲ್‌ ಕೊಟ್ರೆ ಮನೆ ಬಾಗಿಲಿಗೆ ಬರುತ್ತೆ ಗ್ಯಾಸ್‌

ಇದನ್ನೂ ಓದಿ : ಡಿ ಮಾರ್ಟ್ ಮಾಲೀಕನ ಸಾಧನೆ: ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ರಾಧಾಕೃಷ್ಣನ್ ದಮಾನಿ

(Yahoo News Sites Shuts Down In India Due To New FDI Rules)

Comments are closed.