PF : ಪಿಎಫ್‌ ಹಣ ಪಡೆಯಬೇಕಾದ್ರೆ ಈ ನಿಯಮ ಪಾಲಿಸಲೇ ಬೇಕು : ಮುಂದಿನ ತಿಂಗಳಿಂದ ಜಾರಿಯಾಗ್ತಿದೆ ಹೊಸ ರೂಲ್ಸ್‌

  • ಸುಶ್ಮಿತಾ ಸುಬ್ರಹ್ಮಣ್ಯ

ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದಾರೋ ಇಲ್ಲವೋ ಎಂಬುದನ್ನ ಖಚಿತ ಪಡಿಸಿಕೊಳ್ಳುವುದು ಉತ್ತಮ ಒಂದು ವೇಳೆ ಆಧಾರ್‌ ಲಿಂಕ್‌ ಮಾಡಿಲ್ಲವಾದರೆ ಮೊದಲೂ ಆಧಾರ್ ಲಿಂಕ್ ಮಾಡಿಸಿಕೊಳ್ಳಿ. ಇಲ್ಲವಾದರೆ ನಿಮ್ಮ ಪಿಎಫ್‌ ನಿಮ್ಮ ಕೈಗೆ ಸಿಗುವುದಿಲ್ಲ. ಉದ್ಯೋಗಿಗಳ ಭವಿಷ್ಯ ನಿಧಿ (EPF) ಹೊಂದಿರುವವರು ತಮ್ಮ ಆಧಾರ್ ಕಾರ್ಡ್ ಅನ್ನು ಪ್ರಾವಿಡೆಂಟ್ ಫಂಡ್ (PF) ಖಾತೆಗಳೊಂದಿಗೆ ಸೆಪ್ಟೆಂಬರ್ 1 ರ ಮೊದಲು ಲಿಂಕ್ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ನೀಡಿದೆ.

ಉದ್ಯೋಗಿಗಳು ತಮ್ಮ ಪಿಎಫ್ ಕೊಡುಗೆ ಮತ್ತು ಇತರ ಪ್ರಯೋಜನಗಳನ್ನು ಹಾಗೂ ಸೌಲಭ್ಯವನ್ನು ಪಡೆಯಲು ಇದು ಅವಶ್ಯಕ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಈ ಹಿಂದೆ 2021ರ ಜೂನ್ 1 ಕ್ಕೆ ಗಡುವು ನೀಡಲಾಗಿತ್ತು. ಆದರೆ ಇದೀಗ ಅದನ್ನು ಮುಂದೂಡಲಾಗಿದ್ದು, ಸೆಪ್ಟೆಂಬರ್ ಒಂದರ ತನಕ ಸಮಯ ನೀಡಲಾಗಿದೆ. ಇನ್ನು ಈ ಹೊಸ ನಿಯಮವನ್ನು ಜಾರಿಗೆ ತರಲು ಕಾರ್ಮಿಕ ಸಚಿವಾಲಯ ಸಾಮಾಜಿಕ ಭದ್ರತೆ ಕೋಡ್ನ ಸೆಕ್ಷನ್ 142 ಅನ್ನು ತಿದ್ದುಪಡಿ ಮಾಡಿದೆ.

ಸೆಕ್ಷನ್ 142 ರ ಪ್ರಕಾರ ಉದ್ಯೋಗಿ ಅಥವಾ ಅಸಂಘಟಿತ ಕೆಲಸಗಾರ ಅಥವಾ ಇತರ ಯಾವುದೇ ವ್ಯಕ್ತಿಯ ಗುರುತನ್ನ ಆಧಾರ್ ಸಂಖ್ಯೆಯ ಮೂಲಕ ನೀಡಲು ಅವಕಾಶ ಮಾಡಿಕೊಡು ತ್ತದೆ. ಪಿಎಫ್‌ಗೆ ಸಂಬಂಧಿಸಿದ ಸೌಲಭ್ಯ ಮತ್ತು ಸೇವೆಯನ್ನು ಈ ಕೋಡ್ ಅಡಿಯಲ್ಲಿ ಪಡೆಯಬಹುದು. ಈ ಸಾಮಾಜಿಕ ಭದ್ರತೆ ಸಂಹಿತೆ, 2020 ಎಲ್ಲ ಸಂಘಟಿತ, ಅಸಂಘಟಿತ ಅಥವಾ ಯಾವುದೇ ಇತರ ವಲಯಗಳಲ್ಲಿನ ಎಲ್ಲಾ ಉದ್ಯೋಗಿಗಳು ಮತ್ತು ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವ ಗುರಿಯೊಂದಿಗೆ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮತ್ತು ಕ್ರೋಡಿಕರಿಸುವ ಶಾಸನವಾಗಿದೆ.

ಈ ಸಂಹಿತೆಯನ್ನು ಇನ್ನೂ ಜಾರಿಗೆ ತರಲಾಗಿಲ್ಲವಾದರೂ, ಕೋಡ್‌ನ ಸೆಕ್ಷನ್ 142 ಅನ್ನು ಜಾರಿಗೆ ತರುವಂತೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಜೂನ್ 3 ರಂದು ಆದೇಶಿಸಿದೆ. ಇದು ನೋಂದಣಿ ಮಾಡಿಕೊಳ್ಳಲು ಬಯಸುವ ಉದ್ಯೋಗಿಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರು ಆಧಾರ್ ಸಂಖ್ಯೆಯನ್ನು ನೀಡುವುದು ಕಡ್ಡಾಯ ಹಾಗೂ ಈ ಮೂಲಕ ಅದರ ಅಡಿಯಲ್ಲಿ ಬರುವ ಪ್ರಯೋಜನಗಳು ಅಥವಾ ವಿವಿಧ ಯೋಜನೆಗಳ ಅಡಿಯಲ್ಲಿ ಯಾವುದೇ ಹಣವನ್ನು ಸ್ವೀಕರಿಸಬಹುದು.

ಈಗಾಗಲೇ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದ್ದು, ಮತ್ತೆ ಹೆಚ್ಚಿನ ಗಡುವು ನೀಡಲಾಗುವುದಿಲ್ಲ ಎಂದು ಇಲಾಖೆ ಎಚ್ಚರಿಸಿದೆ. ಇಪಿಎಫ್‌ಒ ಅಧಿಸೂಚನೆಯನ್ನು ಹೊರಡಿಸಿದೆ. ಅಲ್ಲದೇ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದರೋ ಇಲ್ಲವೋ ಎಂಬುದನ್ನ ಖಚಿತಪಡಿಸಿಕೊಳ್ಳುವುದು ಹಾಗೂ ಆಧಾರ್ ಲಿಂಕ್ ಮಾಡಿಸುವುದು ಅವರ ಉದ್ಯೋಗದಾತರು ಅಂದರೆ ಕೆಲಸ ನೀಡಿರುವ ಕಂಪನಿಯವರ ಜವಾಬ್ದಾರಿಯಾಗಿದೆ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ : PM MODI : ಅನ್ನದಾತರಿಗೆ ಪ್ರಧಾನಿ ಮೋದಿ ಕೊಡ್ತಿದ್ದಾರೆ ಗುಡ್‌ನ್ಯೂಸ್‌ : ರೈತರ ಖಾತೆ ಸೇರುತ್ತೆ 19,500 ಕೋಟಿ

ಇದನ್ನೂ ಓದಿ : China Corona : ಕೊರೊನಾ ಜನ್ಮದಾತ ಚೀನಾದಲ್ಲಿ ಹೆಚ್ಚಿದ ಸೋಂಕು : ಡೆಲ್ಟಾ ಆರ್ಭಟಕ್ಕೆ ತತ್ತರಿಸಿದೆ ಕೆಂಪು ರಾಷ್ಟ್ರ

(This rule must be followed for the PF to receive money: New Rules in force next month)

Comments are closed.