Vande Bharat train: ಹಸು ಆಯ್ತು, ಎಮ್ಮೆ ಆಯ್ತು.. ಇದೀಗ ಗೂಳಿಗೆ ಗುದ್ದಿದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು..

ಮುಂಬೈ: Vande Bharat train: ಪ್ರಧಾನಿ ಮೋದಿ ಅವರು ತಿಂಗಳ ಹಿಂದೆ ಚಾಲನೆ ನೀಡಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಅದೃಷ್ಟ ಇನ್ನೂ ನೆಟ್ಟಗಾಗಿಲ್ಲ ಅನ್ನಿಸ್ತಿದೆ. ಈ ಹಿಂದೆ ಹಸು, ಎಮ್ಮೆಗೆ ಡಿಕ್ಕಿಯಾಗಿ ಸುದ್ದಿಯಾಗಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಇವತ್ತು ಗೂಳಿಗೆ ಡಿಕ್ಕಿ ಹೊಡೆದಿದೆ. ಮುಂಬೈ ಸೆಂಟ್ರಲ್ ನಿಂದ ಗುಜರಾತ್ ಗಾಂಧಿನಗರಕ್ಕೆ ಹೊರಟಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಗೂಳಿ ಅಡ್ಡಬಂದಿದೆ. ಗುಜರಾತ್ ನ ಅಟಲ್ ಸ್ಟೇಷನ್ ಗೆ ತೆರಳುವಾಗ ಈ ಘಟನೆ ನಡೆದಿದೆ. ಪರಿಣಾಮ ರೈಲಿನ ಮುಂಭಾಗ ಜಖಂ ಆಗಿದೆ. ಸದ್ಯ ದುರಸ್ತಿ ಕಾರ್ಯ ನಡೆಸಲಾಗುತ್ತಿದ್ದು ನಾಳೆ ಮತ್ತೆ ಸಂಚರಿಸುವ ಸಾಧ್ಯತೆ ಇದೆ.

ಇಂದು ಬೆಳಿಗ್ಗೆ ಸುಮಾರು 8.17ರ ಹೊತ್ತಿಗೆ ಈ ಘಟನೆ ನಡೆದಿದೆ. ಅಪಘಾತ ನಡೆದ ಬಳಿಕ ರೈಲು 15 ನಿಮಿಷ ಘಟನೆ ನಡೆದ ಸ್ಥಳದಲ್ಲಿಯೇ ನಿಂತಿತ್ತು. ಗೂಳಿ ಗುದ್ದಿದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಅದನ್ನು ಹೊರತುಪಡಿಸಿ ಬೇರೆ ಎಲ್ಲಿಯೂ ಹಾನಿ ಆಗಿಲ್ಲ. ಯಾವುದೇ ಪ್ರಯಾಣಿಕರಿಗೂ ತೊಂದರೆ ಆಗಿಲ್ಲ ಎಂದು ಪಶ್ಚಿಮ ರೈಲು ಮುಖ್ಯ ಪಿಆರ್ ಒ ಸುಮಿತ್ ಠಾಕೂರ್ ಮಾಹಿತಿ ನೀಡಿದ್ದಾರೆ.

ಸೆಪ್ಟಂಬರ್ 29ರಂದು ಪ್ರಧಾನಿ ಮೋದಿ ವಂದೇ ಭಾರತ್ ಎಕ್ಸ್ ಪ್ರೆಸ್ ಹೈಸ್ಪೀಡ್ ರೈಲಿಗೆ ಚಾಲನೆಯನ್ನು ನೀಡಿದ್ದರು. ಆ ಬಳಿಕ ಅಕ್ಟೋಬರ್ 6ರಂದು ಇದೇ ರೈಲು ಆನಂದ್ ನಿಲ್ದಾಣದಲ್ಲಿ 4 ಎಮ್ಮೆಗಳಿಗೆ ಗುದ್ದಿತ್ತು. ಅದಾದ ಬಳಿಕ ಮರುದಿನ ಅಂದರೆ ಅಕ್ಟೋಬರ್ 7ರಂದು ಅಹಮದಾಬಾದ್ ನ ವತ್ವಾದಲ್ಲಿ ಹಸುವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಇಂದು ಮತ್ತೆ ಹಳಿ ಮೇಲೆ ನಿಂತಿದ್ದ ಗೂಳಿಗೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಗುದ್ದಿದೆ. ಅಪಘಾತಕ್ಕೆ ರೈಲಿನ ಅತೀವೇಗ ಕಾರಣ ಎನ್ನಲಾಗುತ್ತಿದೆ. ಈ ಘಟನೆ ಮೂಲಕ ಚಾಲನೆ ಸಿಕ್ಕಿದ ಒಂದೇ ತಿಂಗಳಲ್ಲಿ ವಂದೇ ಭಾರತ್ ರೈಲು 3 ಬಾರಿ ಅಪಘಾತಕ್ಕೀಡಾಗಿ ದುರಸ್ತಿಗೊಳಗಾಗಿದೆ.

ಮೊದಲ ಅಪಘಾತ (ಅ.6) ಸಂಭವಿಸಿದ ಸಂದರ್ಭದಲ್ಲಿ ರೈಲ್ವೇ ಇಲಾಖೆ ಎಮ್ಮೆಗಳ ಮಾಲೀಕರ ವಿರುದ್ಧ 1989ರ ರೈಲ್ವೆ ಕಾಯ್ದೆ ಸೆಕ್ಷನ್ 147ರಡಿ ಮೇಲೆ ಎಫ್‍ಐಆರ್ ದಾಖಲಿಸಿತ್ತು. ಆದರೆ ಈವರೆಗೂ ಪೊಲೀಸರು ಎಮ್ಮೆಗಳ ಮಾಲೀಕರನ್ನು ಪತ್ತೆ ಮಾಡಿಲ್ಲ ಎನ್ನಲಾಗಿದೆ. ದೇಶದಲ್ಲಿ ಸಂಚರಿಸುತ್ತಿರುವ ಮೂರನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಇದಾಗಿದ್ದು, ಪ್ರಾಣಿಗಳಿಗೆ ಡಿಕ್ಕಿ ಹೊಡೆದೇ ಸುದ್ದಿಯಾಗುತ್ತಿದೆ.

ಇದನ್ನೂ ಓದಿ:Punith Rajkumar : ಅಪ್ಪು ಜೀವನ ಸಾಧನೆ ಶಾಲಾ ಪಠ್ಯಕ್ಕೆ ಸೇರಿಸಿ : ಸಿಎಂ ಬೊಮ್ಮಾಯಿಗೆ ಅಭಿಮಾನಿಗಳ ಮನವಿ

ಇದನ್ನೂ ಓದಿ: Virat Kohli : ಆಗಸ್ಟ್ 27ಕ್ಕೆ 81 ರನ್, ಅಕ್ಟೋಬರ್ 28ಕ್ಕೆ 629 ರನ್; ಹೇಗಿದೆ ನೋಡಿ ಕಿಂಗ್ ಕೊಹ್ಲಿ ಹವಾ!

vande bharat express train hits cattle near atul station in gujarat

Comments are closed.