Chickpea : ದೇಹದ ತೂಕ ಇಳಿಸಬೇಕಾ ? ಹಾಗಾದ್ರೆ ಹುರಿಗಡಲೆ ತಿನ್ನಿ

(Chickpea) ಇತ್ತೀಚಿನ ದಿನಗಳಲ್ಲಿ ಜನರು ದೇಹದ ತೂಕವನ್ನು ಇಳಿಸಲು ಹೆಚ್ಚಿನ ಪ್ರಯತ್ನ ಪಡುತ್ತಿರುತ್ತಾರೆ. ಯೋಗ, ವ್ಯಾಯಾಮ ಹಾಗೂ ಆರೋಗ್ಯಕರವಾದ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಾರೆ. ಆದರೂ ಕೂಡ ದೇಹದ ತೂಕವನ್ನು ಇಳಿಸಲು ಆಗದೇ ಪರದಾಡುತ್ತಿರುವವರು ಹುರಿಗಡಲೆ(Chickpea)ಯನ್ನು ತಿನ್ನುವ ಮೂಲಕ ತೂಕವನ್ನು ಸರಿದೂಗಿಸಬಹುದಾಗಿದೆ. ಹುರಿಗಡಲೆಗಳು ಸ್ವಲ್ಪ ದುಂಡಗಿನ ಮತ್ತು ಅನಿಯಮಿತ ಆಕಾರವನ್ನು ಹೊಂದಿರುವ ‘ಫ್ಯಾಬೇಸಿ’ ಕುಟುಂಬಕ್ಕೆ ಸೇರಿದ ದ್ವಿದಳ ಧಾನ್ಯಗಳಾಗಿವೆ . ಹುರಿಗಡಲೆ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು . ಇದರಲ್ಲಿ ಕಾರ್ಬೋಹೈಡ್ರೇಟ್‌ , ಪ್ರೋಟಿನ್‌ , ಕ್ಯಾಲ್ಸಿಯಂ, ಕಬ್ಬಿಣಾಂಶ , ವಿಟಮಿನ್‌ ಇರುವುದರಿಂದ ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದಂತಹ ಪದಾರ್ಥವಾಗಿದೆ . ಹುರಿಗಡಲೆ(Chickpea)ಯನ್ನು ತಿನ್ನುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಮತ್ತು ತೂಕವನ್ನು ಕೂಡ ನಿಯಂತ್ರಿಸುತ್ತದೆ.

ಹುರಿಗಡಲೆ(Chickpea) ತಿನ್ನುವುದರ ಪ್ರಯೋಜನಗಳು :

ಮೊದಲನೆಯದಾಗಿ, ಹುರಿಗಡಲೆ ತೂಕವನ್ನು ನಿಯಂತ್ರಿಸುತ್ತದೆ. ಹುರಿಗಡಲೆ ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ. ಆದ್ದರಿಂದ ಹಸಿವಾಗುವ ಪ್ರಮಾಣ ಕಮ್ಮಿ. ಬೆಳಿಗ್ಗೆ ಒಂದು ಹಿಡಿಯಷ್ಟು ಹುರಿಗಡಲೆಯನ್ನು ತಿಂದರೆ ಅದು ಹಸಿವನ್ನು ತಡೆಗಟ್ಟಿ ನಿಮ್ಮ ತೂಕವನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ : World Stroke Day : ಹೃದಯದ ಆರೋಗ್ಯಕ್ಕೆ 4 ಆಯುರ್ವೇದ ಸಲಹೆಗಳು

ಎರಡನೆಯದಾಗಿ, ಹುರಿಗಡಲೆಯು ನಿಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ . ನಮ್ಮ ದೇಹದಲ್ಲಿನ ಬಲವಾದ ರೋಗನಿರೋಧಕ ಶಕ್ತಿಯು ರೋಗಗಳ ವಿರುದ್ಧ ಹೋರಾಡಲು ಸಹಾಯನ್ನು ಮಾಡುತ್ತದೆ . ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಕಡಿಮೆಯಾಗಿರುತ್ತದೆ ಮತ್ತು ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಇದನ್ನೂ ಓದಿ : Peanut Health Benefits : ಚಳಿಗಾಲದಲ್ಲಿ ಶೇಂಗಾ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು ನಿಮಗೆ ಗೊತ್ತಾ…

ಮೂರನೆಯದಾಗಿ, ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣ ಕ್ರೀಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ನೀವು ಹೊಂದಿದ್ದರೆ , ಇದು ನಿಮ್ಮ ಜೀರ್ಣ ಶಕ್ತಿಯನ್ನು ಸಮತೋಲನ ಗೊಳಿಸುತ್ತದೆ . ಬೆಳಗ್ಗಿನ ಆಹಾರದಲ್ಲಿ ಇದನ್ನು ಸೇವಿಸುವುದರಿಂದ ಇದು ಮಾನಸಿಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.

ಇದನ್ನೂ ಓದಿ : Mirracle Drink : ದೇಹದ ಹಲವು ಅರೋಗ್ಯ ಸಮಸ್ಯೆಗಳಿಗೆ ಕುಡಿಯಿರಿ ಮಿರಾಕಲ್ ಡ್ರಿಂಕ್

ಜನರು ಆರೋಗ್ಯವಾಗಿರಲು ಔಷಧಿಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆರೋಗ್ಯಕರ ಆಹಾರವನ್ನು ಸೇವಿಸುವುದರ ಅರ್ಥವನ್ನು ಈಗಿನ ಜನರಾದ ನಾವು ಮರೆತಿದ್ದೇವೆ. ದಿನನಿತ್ಯದ ಆರೋಗ್ಯಕರ ಆಹಾರವು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಭಾರತದ ಹಲವಾರು ಭಾಗಗಳಲ್ಲಿ ಹುರಿಗಡಲೆಯು ಬಹುಪಾಲು ಜನರ ಬೇಡಿಕೆಯ ಆಹಾರವಾಗಿತ್ತು. ವಾಸ್ತವವಾಗಿ ಬೇಸಿಗೆಯ ದಿನಗಳಲ್ಲಿ ಉತ್ತಮ ಸಮರಿಟನ್ನರು ರಸ್ತೆಯಲ್ಲಿ ದಾರಿಹೋಕರಿಗೆ ನೀರಿನೊಂದಿಗೆ ಹುರಿಗಡಲೆಯನ್ನು ವಿತರಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಹುರಿಗಡಲೆಯು ನಿಮ್ಮ ಆರೋಗ್ಯವನ್ನು ಸುಧಾರಿಸುವ ಅತಿ ಹೆಚ್ಚುಆರೋಗ್ಯಕರವಾದ ಪ್ರಯೋಜನಗಳಿಂದ ತುಂಬಿದೆ.

(Chickpea) Nowadays people are trying more and more to reduce body weight. Yoga, exercise and healthy eating habits are adopted. However, those who are struggling to lose weight can make up for it by eating chickpeas.

Comments are closed.