Desi Detox Drinks : ಈ ದೇಸಿ ಪಾನೀಯಗಳ ಬಗ್ಗೆ ಗೊತ್ತಾ; ಇವು ಹಬ್ಬದ ನಂತರ ಕಾಡುವ ಅಜೀರ್ಣ ಸಮಸ್ಯೆ ದೂರ ಮಾಡಬಲ್ಲದು

ಈಗ ಹಬ್ಬಗಳ ಕಾಲ (Festival season). ಒಂದಾದ ನಂತರ ಒಂದು ಹಬ್ಬಗಳು ಬರುತ್ತವೆ. ಸಂತೋಷ, ಸಂಭ್ರಮ, ಸಡಗರ ಎಲ್ಲೆಡೆ ಕಾಣಿಸುತ್ತದೆ. ಹಬ್ಬಕ್ಕೆ ವಿವಿಧ ಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ರುಚಿಯಾದ ಹಬ್ಬದ ಅಡುಗೆಗಳು ಸ್ವಲ್ಪ ಹೆಚ್ಚಾಗಿಯೇ ನಮ್ಮ ದೇಹ ಸೇರುತ್ತವೆ. ಸಿಹಿ ತಿನಿಸುಗಳು, ಎಣ್ಣೆಯಲ್ಲಿ ಕರಿದ ತಿಂಡಿಗಳು, ಹಬ್ಬದಲ್ಲಿ ಮಾತ್ರ ಮಾಡುವ ವಿಶೇಷ ವ್ಯಂಜನಗಳನ್ನು ತಿಂದು, ಆರೋಗ್ಯವು ಏರುಪೇರಾಗುವುದು ಸಹಜ. ಅದರಲ್ಲೂ ಡಯಟ್‌ನಲ್ಲಿರುವವರಿಗಂತೂ ಇವು ಹೆಚ್ಚಿನ ಅಡ್ಡಿ ಪಡಿಸುವುದು. ದೇಹದಲ್ಲಿ ಸೇರಿಕೊಂಡಿರುವ ಅನಗತ್ಯ ಕ್ಯಾಲೋರಿಗಳನ್ನು ಹೊರಹಾಕುವುದು ಅತಿ ಮುಖ್ಯವಾಗಿದೆ. ದೇಶ ಶುದ್ದೀಕರಿಸಲು ಸಹಾಯ ಮಾಡುವ ಆಹಾರಗಳು (Desi Detox Drinks) , ಹಬ್ಬಗಳಲ್ಲಿ ನಾವು ಸೇವಿಸಿದ್ದನ್ನು ಹೊರಹಾಕಲು ಪ್ರಮುಖ ಸಾಧನವಾಗಿದೆ.

ಇಲ್ಲಿ ಹೇಳಿರುವ ದೇಸಿ ಪಾನೀಯಗಳು ನಿಮ್ಮ ದೇಹ ಶುದ್ಧೀಕರಣ ಪ್ರಕ್ರಿಯೆಗೆ ಸಹಾಯ ಮಾಡಬಲ್ಲದು. ಇವುಗಳು ದೇಹದ ಎಲ್ಲಾ ಮೂಲೆಗಳಿಂದಲೂ ವಿಷವನ್ನು (ಅನಗತ್ಯ ಕ್ಯಾಲೋರಿ) ಹೊರಹಾಕಲು ಸರಿಯಾದ ಸಾಧನವಾಗಿದೆ. ಅಂತಹ ಉತ್ತಮ ದೇಸಿ ಪಾನಿಯಗಳು ಇಲ್ಲಿವೆ.

ನಿಮ್ಮ ಜೀರ್ಣಕ್ರಿಯೆ ಹೆಚ್ಚಿಸುವ ದೇಸಿ ಡಿಟಾಕ್ಸ್‌ ಪಾನೀಯಗಳು :

  1. ಸೋಂಫ್‌ (ಬಡೇಸೊಪ್ಪು) ನ ನೀರು:
    ಸೋಂಫ್‌ ಅಥವಾ ಬಡೇಸೊಪ್ಪಿನ ನೀರು ಚಯಾಪಚಯದ ವೇಗವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ, ಆಹಾರವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಜೀರ್ಣ ಮಾಡುವಂತೆ ಉತ್ತೇಜಿಸುತ್ತದೆ. ಆದ್ದರಿಂದ ಒಂದು ಲೋಟ ಸೋಂಫ್‌ ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ.
  2. ಜೀರಿಗೆ ನೀರು :
    ಜೀರಿಗೆ ಅತಿ ಹೆಚ್ಚು ಆಂಟಿಒಕ್ಸಿಡೆಂಟ್‌ ಹೊಂದಿರುವ ಭಾರತೀಯ ಮಸಾಲೆಯಾಗಿದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಒಂದು ಭಾರತೀಯ ಮಸಾಲೆಯಾಗಿದೆ; ಇದು ದೇಹದ ಅನುಪಯುಕ್ತ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮತ್ತು ದೇಹವನ್ನು ಸಂಪೂರ್ಣವಾಗಿ ಶುದ್ದೀಕರಿಸುತ್ತದೆ.

ಇದನ್ನೂ ಓದಿ : Breakfast Recipes : ಬೆಳಗ್ಗಿನ ತಿಂಡಿಗೆ ಮಾಡಿ ಸಿಂಪಲ್‌ ರಾಗಿ ದೋಸೆ

  1. ಅರಿಶಿಣದ ಟೀ :
    ಅರಿಶಿಣವು ಅದರ ಆರೋಗ್ಯ ಪ್ರಯೋಜನಕಾರಿ ಗುಣದಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಇದು ಆಂಟಿಒಕ್ಸಿಡೆಂಟ್‌ ಮತ್ತು ಆಂಟಿಇನ್ಪ್ಲಮೇಟರಿ ಗುಣ ಹೊಂದಿದೆ. ಅರಿಶಿಣ ಮತ್ತು ಶುಂಠಿ ಸೇರಿಸಿ ಮಾಡಿದ ಟೀ ನಿಮ್ಮ ದೇಹದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  2. ಪಿಂಕ್‌ ಸಾಲ್ಟ್‌–ಶುಂಠಿ ನೀರು :
    ಶುಂಠಿ ಮತ್ತು ಪಿಂಕ್‌ ಸಾಲ್ಟ್‌ ಸೇರಿಸಿ ತಯಾರಿಸಿದ ನೀರು ನಿಮ್ಮ ದೇಹವನ್ನು ಶುದ್ಧಿಕರಿಸಲು ಸಹಾಯ ಮಾಡುವುದು. ಈ ಪಾನೀಯವು ಉಲ್ಲಾಸವನ್ನು ಹೆಚ್ಚಿಸಿ ರಿಫ್ರೆಶ್‌ ಮೂಡ್‌ ಅನ್ನು ತರುವುದು. ಇದು ಬಾಯಿಯ ರುಚಿಯನ್ನು ಹೆಚ್ಚಿಸುವುದು.
  3. ಮಸಾಲಾ ನೀರು :
    ಜೀರಿಗೆ, ಸೋಂಫ್‌ ಮುಂತಾದವುಗಳನ್ನು ಸೇರಿಸಿ ತಯಾರಿಸುವ ನೀರಿಗೆ ಮಸಾಲಾ ನೀರು ಎಂದು ಹೆಸರು. ಇವು ದೇಹ ಶುದ್ಧೀಕರಿಸಲು ಉತ್ತಮ ಏಜೆಂಟ್‌ ಆಗಿ ಕೆಲಸ ಮಾಡುವುದು. ರಾತ್ರಿ ಅರ್ಧ ಲೀಟರ್‌ ನೀರಿಗೆ ಒಂದು ಚಮಚ ಜೀರಿಗೆ, ಒಂದು ಚಮಚ ಸೋಂಫ್‌ ಮತ್ತು ಒಂದು ಚಮಚ ಓಮ್‌ (ಅಜ್ವಾಯ್ನ್‌) ಕಾಳು ಸೇರಿಸಿ ಒಂದು ಪ್ಲೇಟ್‌ ಮುಚ್ಚಿ ಇಡಿ. ಮುರುದಿನ ಬೆಳಿಗ್ಗೆ ಆ ನೀರನ್ನು ಕುಡಿಯಿರಿ. ಇದು ಅಜೀರ್ಣ ಸಮಸ್ಯೆಗೆ ರಾಮಬಾಣವಿದ್ದಂತೆ.

ಇದನ್ನೂ ಓದಿ : Soft Rotis : ಮೃದುವಾದ ರೋಟಿ ಮಾಡಲು ಸೆಲೆಬ್ರಿಟಿ ಶೆಫ್‌ ಹೇಳುವ ಈ ಟಿಪ್ಸ್‌ ಫಾಲೋ ಮಾಡಿ

(Desi Detox Drinks these 5 desi drinks help you detox your body after festivals)

Comments are closed.