Weather Report : ಭಾರತದ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆ

ನವದೆಹಲಿ : ಭಾರತದಲ್ಲಿ ಕಳೆದ ಹಲವು ದಿನಗಳಿಂದಲೂ ತೀವ್ರ ಮಳೆಯಾಗಿ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಇದರ ಬೆನ್ನಲೇ ಭಾರತಕ್ಕೆ ಇನ್ನೊಂದು ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.

ಭಾರತ ಹವಾಮಾನ ಇಲಾಖೆ (IMD) ತನ್ನ ಇತ್ತೀಚಿನ ಮಾಹಿತಿಯ ಪ್ರಕಾರ ಶಾಹೀನ್ ಚಂಡಮಾರುತದಿಂದಾಗಿ ಭಾರತದಾದ್ಯಂತ ಏಳು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಇದು ಮುಂದಿನ 24 ಗಂಟೆಗಳಲ್ಲಿ ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: Gulab Cyclone : ಇನ್ನೂ ಗುಲಾಬ್ ಚಂಡಮಾರುತದ ಅಬ್ಬರ : ಹವಾಮಾನ ಇಲಾಖೆ ಎಚ್ಚರಿಕೆ, 3 ದಿನ ಭಾರೀ ಮಳೆ

ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಗುಜರಾತ್ ಗೆ ಈ ಇತ್ತೀಚಿನ ಹವಾಮಾನ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 26 ರಂದು ಗುಲಾಬ್ ಚಂಡಮಾರುತವು ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭೂಸ್ಪರ್ಶ ಮಾಡಿದ ನಂತರ ಬಂದಿದೆ, ಇದು ಮೂರು ಜನರ ಜೀವವನ್ನು ಬಲಿ ತೆಗೆದುಕೊಂಡಿದೆ.

ಈಗ ಶಾಹೀನ್ ಚಂಡಮಾರುತದ ತೀವ್ರತೆ ಭಾರತವಲ್ಲದೆ ಪಾಕಿಸ್ತಾನ ಮತ್ತು ಇರಾನ್ ಬಳಿ ಇದೆ. ಶುಕ್ರವಾರ ಬೆಳಿಗ್ಗೆ 5.30 ರ ಸುಮಾರಿಗೆ, ಶಾಹೀನ್ ಗುಜರಾತ್ ನ ದೇವಭೂಮಿ ದ್ವಾರಕಾದಿಂದ ಪಶ್ಚಿಮ-ವಾಯುವ್ಯಕ್ಕೆ 400ಕಿ.ಮೀ, ಪಾಕಿಸ್ತಾನದ ಕರಾಚಿಯಿಂದ ದಕ್ಷಿಣ-ನೈರುತ್ಯಕ್ಕೆ 260ಕಿ.ಮೀ ಮತ್ತು ಇರಾನ್ ನ ಚಬಹಾರ್ ಬಂದರಿನ ಪೂರ್ವ-ಆಗ್ನೇಯಕ್ಕೆ 530ಕಿ.ಮೀ ದೂರದಲ್ಲಿದೆ. ಆಳವಾದ , ವಾಯುಭಾರ ಕುಸಿತವಾಗಿ ದುರ್ಬಲಗೊಳ್ಳಲಿದೆ.ಇನ್ನು ಅರಬ್ಬಿ ಸಮುದ್ರದ ಮೇಲೆ ಹೊಸ ಚಂಡಮಾರುತವಾಗಿ ತೀವ್ರಗೊಳ್ಳುತ್ತದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: Tata-Air India : ಟಾಟಾ ತೆಕ್ಕೆಗೆ ಏರ್‌ ಇಂಡಿಯಾ : 68 ವರ್ಷದ ಬಳಿಕ ಮರಳಿ ಪಡೆದ ಟಾಟಾ ಗ್ರೂಪ್

Comments are closed.