Cardamom Benefits: ಏಲಕ್ಕಿಯ ಮ್ಯಾಜಿಕ್‌ಗಳು ಏನೇನು ಎಂಬುದು ನಿಮಗೆ ಗೊತ್ತೇ?

ಏಲಕ್ಕಿಗೆ ಸಾಂಬಾರ ಪದಾರ್ಥಗಳಲ್ಲೇ ಅಗ್ರ ಸ್ಥಾನ(Cardamom Benefits). ಅದರ ವಿಶೇಷ ಪರಿಮಳದಿಂದಲೇ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಚಹಾ, ವ್ಯಂಜನಗಳು ಮತ್ತು ಸಿಹಿ ತಿನಿಸುಗಳಿಗೆಲ್ಲಾ ಪರಿಮಳವನ್ನು ಹೆಚ್ಚಿಸಿ ಆಹಾರಗಳಿಗೆ ಹೊಸ ಅನುಭವವನ್ನೇ ನೀಡುತ್ತದೆ. ಏಲಕ್ಕಿ ಬಹುಪಯೋಗಿ ಮಸಾಲೆ ಪದಾರ್ಥವಾಗಿದೆ. ಸಾಂಬಾರ್‌, ಭಾಜಿ, ಬ್ರೆಡ್‌, ಅನ್ನ ಮತ್ತು ಪಾನೀಯಗಳಾದ ಚಹಾ, ಪಾನಕ, ಕಷಾಯ ಎಲ್ಲದರಲ್ಲೂ ಇದರ ಬಳಕೆ ಇದೆ. ನೈಸರ್ಗಿಕವಾಗಿಯೇ ಪರಿಮಳವನ್ನು ಹೊಂದಿರುವ ಏಲಕ್ಕಿ ಬರೀ ಅಡುಗೆಗಷ್ಟೇ ಅಲ್ಲ, ಆರೋಗ್ಯದ ಮೇಲೂ ಪರಿಣಾಮ ಬೀರಬಲ್ಲದು. ಇದರಿಂದ ಅನೇಕ ಆರೋಗ್ಯದ ಪ್ರಯೋಜನಗಳಿವೆ. ಇದರಲ್ಲಿರುವ ನೈಸರ್ಗಿಕ ಸಂಯುಕ್ತಗಳು ಮತ್ತು ಆಂಟಿಒಕ್ಸಿಡೆಂಟ್‌ಗಳು ಹಲವಾರು ರೋಗಗಳು ಮತ್ತು ಸೋಂಕು ತಡೆಯಲು ಸಹಾಯಮಾಡುತ್ತದೆ.

ಏಲಕ್ಕಿಯನ್ನು ಇಲಾಯ್ಚಿ, ಕಾರ್ಡಮಮ್‌ ಎಂದೆಲ್ಲಾ ಕೆರೆಯುತ್ತಾರೆ. ನಿಮಗೆ ಗೊತ್ತೇ ನಮ್ಮ ಅಜ್ಜಿಯಂದಿರು ದೂರದ ಊರುಗಳಿಗೆ ಪ್ರಯಾಣಿಸುವಾಗ ಏಕೆ ಅವರ ಬ್ಯಾಗ್‌ಗಳಲ್ಲಿ ಸ್ವಲ್ಪ ಏಲಕ್ಕಿಯನ್ನು ಇಟ್ಟುಕೊಂಡಿರುತ್ತಿದ್ದರು? ಇದಕ್ಕೆ ಉತ್ತರ ಅದರಲ್ಲಿರುವ ಅಗಾಧ ಆರೋಗ್ಯದ ಪ್ರಯೋಜನಗಳು.

ಇದನ್ನೂ ಓದಿ : Black Pepper: ಕಾಳು ಮೆಣಸಿನ ಈ ಭಾರಿ ಪ್ರಯೋಜನ ತಿಳಿದರೆ ನೀವೂ ಡಯಟ್‌ನಲ್ಲಿ ಇದನ್ನು ಖಂಡಿತ ಸೇರಿಸಿಕೊಳ್ತೀರಾ!

ಏಲಕ್ಕಿಯ ಸೇವನೆಯಿಂದಾಗುವ ಆರೋಗ್ಯದ ಪ್ರಯೋಜನಗಳು.

  • ಜೀರ್ಣಶಕ್ತಿ ಹೆಚ್ಚಿಸುತ್ತದೆ:
    ಏಲಕ್ಕಿಯ ಕಾಳುಗಳು ಅತೀ ಹೆಚ್ಚಿನ ನಾರಿನಾಂಶ ಹೊಂದಿದೆ. ಇದು ಜೀರ್ಣ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಅಜೀರ್ಣ, ಎಸಿಡಿಟಿ, ಗ್ಯಾಸ್‌ ಮತ್ತು ಹೊಟ್ಟೆ ಉಬ್ಬರ ಮುಂತಾದವುಗಳನ್ನು ತಡೆಯಲು ಸಹಾಯಮಾಡುತ್ತದೆ. ಇದರಲ್ಲಿರುವ ಸಂಯುಕ್ತಗಳು ಆಹಾರವು ಕರುಳಿನಲ್ಲಿ ಸರಾಗವಾಗಿ ಹೋಗಲು ಅನುಕೂಲ ಮಾಡಿಕೊಡುತ್ತವೆ.
  • ರಕ್ತದೊತ್ತಡ ನಿಭಾಯಿಸುತ್ತದೆ:
    ಏಲಕ್ಕಿಯ ಆಂಟಿಒಕ್ಸಿಡೆಂಟ್‌ ಮತ್ತು ಡ್ಯುರೆಟಿಕ್‌ ಗುಣವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಪ್ರಯೋಜನವಿದೆ. ಏಲಕ್ಕಿಯನ್ನು ನಿರಂತರವಾಗಿ ಬಳಸುವುದರಿಂದ ಡ್ಯುರೆಟಿಕ್‌ ಕ್ರಿಯೆ ಸರಾಗವಾಗಿ ರಕ್ತದೊತ್ತಡವನ್ನು ಹಿಡಿತದಲ್ಲಿರಿಸಲು ಸಹಾಯಮಾಡುತ್ತದೆ. ಏಲಕ್ಕಿಯಲ್ಲಿಯ ಅಧಿಕ ಆಂಟಿಒಕ್ಸಿಡೆಂಟ್‌, ನಿರ್ವಿಶೀಕರಣಕ್ಕೆ ಸಹಾಯಮಾಡುತ್ತದೆ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆಯನ್ನು ಉತ್ತೇಜಿಸುತ್ತದೆ.
  • ಬಾಯಿಯ ದುರ್ವಾಸನೆ ತಡೆಯುತ್ತದೆ:
    ಬಹಳ ಹಿಂದಿನಿಂದಲೂ ಏಲಕ್ಕಿಯನ್ನು ಬಾಯಿಯ ದುರ್ವಾಸನೆ ತಡೆಯಲು ಮತ್ತು ಬಾಯಿಯ ಆರೋಗ್ಯವನ್ನು ಕಪಾಡಲು ಉಪಯೋಗಿಸುತ್ತಲೇ ಬಂದಿದ್ದಾರೆ. ಊಟದ ನಂತರ ಏಲಕ್ಕಿಯನ್ನು ನಿಧಾನವಾಗಿ ಅಗಿಯುವುದರಿಂದ ಅದ್ಭುತ ಪರಿಮಳ ಕೊಡುತ್ತದೆ. ಅದರಲ್ಲಿರುವ ಆಂಟಿಬ್ಯಾಕ್ಟೀರಿಯಲ್‌ ಗುಣವು ಬೆಳ್ಳುಳ್ಳಿ ಮತ್ತು ಈರುಳ್ಳಿಯ ತೀಕ್ಷ್ಣ ವಾಸನೆಯನ್ನು ಹೋಗಲಾಡಿಸುತ್ತದೆ.
  • ಖಿನ್ನತೆ ಹೋಗಲಾಡಿಸುತ್ತದೆ:
    ಮಾನಸಿಕ ಒತ್ತಡಕ್ಕೆ ಒಳಪಟ್ಟ ವ್ಯಕ್ತಿಗಳಿಗೆ ಏಲಕ್ಕಿಯಿಂದ ಹಲವು ಪ್ರಯೋಜನಗಳು ಇದೆ. ಇದರ ಪರಿಮಳದಿಂದಲೇ ಖಿನ್ನತೆಯನ್ನು ಹೋಲಾಡಿಸುತ್ತದೆ. ಸರಳ ಉಪಾಯವೇನೆಂದರೆ ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಅಥವಾ ಚಹಾಕ್ಕೆ ಸೇರಿಸಿ ಕುಡಿಯಿರಿ. ಏಲಕ್ಕಿ ಚಹಾ ಜನರ ಮನಸ್ಥತಿ (ಮೂಡ್‌)ಯನ್ನು ಪ್ರಭಾವಿಸಲು ಸಹಾಯ ಮಾಡುತ್ತದೆ. ಅದರ ರುಚಿ ಮತ್ತು ಪರಿಮಳಗಳು ರಿಲಾಕ್ಸ್‌ ಆಗುವಂತೆ ಮಾಡುತ್ತದೆ.
  • ತೂಕ ಇಳಿಕೆಯಲ್ಲಿ ಸಹಾಯಮಾಡುತ್ತದೆ:
    ಏಲಕ್ಕಿ ಚಯಾಪಚಯ ಕ್ರಿಯೆಯ ಗತಿ ಹೆಚ್ಚಿಸಿ ದೇಹದಲ್ಲಿರುವ ಅಧಿಕ ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. ಏಲಕ್ಕಿ ನೀರು, ಹೊಟ್ಟೆಯ ಪ್ರದೇಶದಲ್ಲಿ ಉಬ್ಬುವಿಕೆಯನ್ನು ಕಡಿಮೆ ಮಾಡುವ ಮೂಲಕ ಶೇಖರಣೆಗೊಂಡ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬಹಳಷ್ಟು ಜನರಿಗೆ ಕಬ್ಬು ಶೇಖರಣೆಗೋಳ್ಳುವುದೇ ಹೊಟ್ಟಯ ಭಾಗದಲ್ಲಿ. ಇದು ಹಲವಾರು ರೋಗಗಳಿಗೆ ಕಾರಣವೂ ಆಗುತ್ತದೆ. ಏಲಕ್ಕಿ ದೇಹ ತೂಕ ಇಳಿಸಲು ಒಳ್ಳೆಯ ಸಾಂಬಾರ ಪದಾರ್ಥವಾಗಿದ್ದು, ಅಜೀರ್ಣ, ಮಲಬದ್ಧತೆ, ಮತ್ತು ನೀರಿನ ಕೊರತೆ ನೀಗಿಸುತ್ತದೆ.

ಇದನ್ನೂ ಓದಿ : Momo Soup : ಮೆಂಚೋ ಮೋಮೋ ಸೂಪ್‌ ಮಾಡುವುದು ಹೇಗೆ ಗೊತ್ತೇ? ತಯಾರಿಸಲು ಸಾಕು ಬರೀ 15 ನಿಮಿಷಗಳು!

(Cardamom Benefits do you know the 5 benefits of cardamom)

Comments are closed.