Teenager skincare : ಟೀನೇಜರ್‌ಗಳನ್ನು ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ಬೆಸ್ಟ್‌ ಟಿಪ್ಸ್‌!!

ನಮ್ಮ ಜೀವನದ ನಿರ್ದಿಷ್ಟ ಸಂಖ್ಯೆಯ ವರ್ಷಗಳಿಗೆ ಏಕೆ ವಿಶೇಷ ಹೆಸರುಗಳಿವೆ (Teenage) ಎಂಬುದು ಬಹಳ ಆಶ್ಚರ್ಯವಲ್ಲವೇ ? ಏಕೆಂದರೆ, ನಿಜವಾಗಿಯೂ ಆ ಅವಧಿಗಳು ವಿಶಿಷ್ಟವಾಗಿರುತ್ತವೆ. ನಾವು ವಯಸ್ಕರರಾಗುವ ಮೊದಲು ಕೆಲವು ವರ್ಷಗಳು ಉತ್ತಮವಾಗಿರುತ್ತವೆ. ಆಮೇಲೆ ಒತ್ತಡದ ದಿನಗಳು ಪ್ರಾರಂಭವಾಗುತ್ತದೆ. ಒತ್ತಡ ಹಲವಾರು ವಿಷಯಗಳಿಗೆ ಸಂಬಂಧಿಸಿರುತ್ತದೆ. ಪರೀಕ್ಷೆ, ಗೆಳೆತನ, ವೈಯ್ಯಕ್ತಿಕ ಚಿತ್ರಣ, ಬದಲಾಗುತ್ತಿರುವ ದೈಹಿಕ ರಚನೆ ಮುಂತಾದವುಗಳು. ಇವೆಲ್ಲವೂ ಟೀನೇಜರ್‌ಗಳ ತ್ವಚೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಅದರ ಫಲವೇ ಮೊಡವೆಗಳು (Teenager skincare).

ಟೀನೇಜರ್‌ಗಳಲ್ಲಿ ಕಾಣುವ ಎಕ್ನಿ, ಎಣ್ಣೆಯುಕ್ತ ತ್ವಚೆ, ವೈಟ್‌ಹೆಡ್ಸ್‌, ಬ್ಲಾಕ್‌ ಹೆಡ್ಸ್‌, ಸನ್‌ಬರ್ನ್‌ ಮುಂತಾದ ಸಮಸ್ಯೆಗಳು ಅವರ ದೇಹದಲ್ಲಾಗುವ ಹಾರ್ಮೋನ್‌ಗಳ ಬದಲಾವಣೆಯಿಂದಲೇ ಆಗುತ್ತದೆ. ಅದಕ್ಕೆ ಹೆಚ್ಚಿನ ಕಾಳಜಿ ಅವಶ್ಯಕ. ಅದಕ್ಕಾಗಿ ಇಲ್ಲಿದೆ ಕೆಲವು ಟಿಪ್ಸ್‌:

  • ಸೌಮ್ಯ ಶುದ್ಧೀಕರಣ:
    ಎಲ್ಲದಕ್ಕಿಂತ ಮೊದಲು ನಿಮ್ಮ ತ್ವಚೆ ಹೇಗಿದೆ ಎಂದು ತಿಳಿಯುವುದು ಬಹಳ ಮುಖ್ಯ. ಅದಕ್ಕೆ ಒಳ್ಳೆಯ ಕ್ಲೆನ್ಸರ್‌ ಬಳಸಿ. ನೀವು ಯಾವಾಗಲೂ ನಿಧಾನವಾಗಿ ವೃತ್ತಾಕಾರದಲ್ಲಿ ತ್ವಚೆಯನ್ನು ಸ್ವಚ್ಚಗೊಳಿಸಿ. ಜೋರಾಗಿ ಉಜ್ಜುವುದರಿಂದ ತ್ವಚೆಯ ಮೇಲಿನ ಮಾಯ್‌ಶ್ಚರ್‌ ಹೊರಡುಹೋಗಿ ತುರಿಕೆ, ಉರಿ ಆರಂಭವಾಗುತ್ತದೆ. ಸೋಪನ್ನು ಬಿಡಿ ಮತ್ತು ಸೌಮ್ಯ ಕ್ಲೆನ್ಸರ್‌ಗಳನ್ನು ಉಪಯೋಗಿಸಿ.
  • ಪದೇ ಪದೇ ನಿಮ್ಮ ಮುಖ ಮುಟ್ಟಿಕೊಳ್ಳುವುದನ್ನು ಬಿಡಿ:
    ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. ಪದೇ ಪದೇ ಮುಖವನ್ನು ಮುಟ್ಟುವುದರಿಂದ ಕೊಳಕು, ಬ್ಯಾಕ್ಟೀರಿಯಾಗಳು ಮತ್ತು ಎಣ್ಣೆ ತ್ವಚೆಯ ಮೇಲೆ ಹರಡಲು ಸುಲಭವಾಗುತ್ತದೆ. ಇದರಿಂದ ಸಮಸ್ಯೆ ಉಲ್ಭಣಗೊಳ್ಳುವುದು. ಮೊಡವೆಗಳನ್ನು ಚಿವುಟದೇ ಇರುವುದು ಅತೀ ಮುಖ್ಯ. ಇದರಿಂದ ಚರ್ಮದ ಊತ ಹೆಚ್ಚಾಗಿ ಇನ್ಫೆಕ್ಷನ್‌ ಆಗುತ್ತದೆ.
  • ಮೇಕ್‌ ಅಪ್‌ ಮಾಡಿಕೊಂಡೇ ಮಲಗ ಬೇಡಿ:
    ಎಷ್ಟೇ ಒತ್ತಡವಿರಲಿ, ರಾತ್ರಿ ಮೇಕ್‌ಅಪ್‌ ತೆಗೆದೇ ಮಲಗಿ. ರಾತ್ರಿ ಚರ್ಮವು ಸ್ವತಃ ತ್ವಚೆಯ ರಿಪೇರಿ ಮಾಡುವುದು ಎಂಬುದು ನಿಮಗೆ ತಿಳಿದಿರುವ ವಿಷಯವೇ. ರಾತ್ರಿ ಮೇಕ್‌ಅಪ್‌ ತೆಗೆಯದೇ ಹಾಗೇ ಮಲಗುವುದರಿಂದ ತ್ವಚೆಯ ಆರೈಕೆಗೆ ತೊಡಕುಂಟಾಗುವುದು. ಇದು ಮೊಡವೆ ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆ.
  • ರಾತ್ರಿಯ ತ್ವಚೆಯ ಆರೈಕೆಯನ್ನು ತಪ್ಪದೇ ಪಾಲಿಸಿ :
    ರಾತ್ರಿಯಲ್ಲಿ ಚರ್ಮವು ಸ್ವತ್ಃ ರಿಪೇರಿ ಮಾಡುತ್ತದೆ. ಮಲಗುವ ಮುನ್ನ ತ್ವಚೆಯ ಮೇಲೆ ಸರಿಯಾದ ಉತ್ಪನ್ನಗಳನ್ನು ಲೇಪಿಸುವುದರಿಂದ ತ್ವಚೆಯ ಆರೈಕೆಗೆ ಅನುವು ಮಾಡಿಕೊಟ್ಟಂತೆ ಆಗುತ್ತದೆ. ಮಲಗುವ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದು, ಮಾಯಶ್ಚರೈಸರ್‌, ಲಿಪ್‌ ಬಾಂಬ್‌ ಹೆಚ್ಚಿಕೊಳ್ಳಿ.
  • ಸಮತೋಲಿತ ಆಹಾರ ಸೇವಿಸಿ:
    ಹೆಚ್ಚು ಹೆಚ್ಚು ಹಸಿರು ತರಕಾರಿ ಸೇವಿಸಿ. ಕರಿದ ಮತ್ತು ಎಣ್ಣೆಯುಕ್ತ ಪದಾರ್ಥಗಳನ್ನು ಸೇವಿಸುವುದು ಸಮಸ್ಯಾತ್ಮಕ ತ್ವಚೆಗೆ ಹೆಚ್ಚು ಜಾಗವನ್ನು ಸೃಷ್ಟಿಸುತ್ತದೆ ಮತ್ತು ಎಲ್ಲಾ ತೊಂದರೆಗಳನ್ನು ಉಲ್ಭಣಗೊಳಿಸುತ್ತವೆ. ಅದಕ್ಕಾಗಿಯೇ ಸಮತೋಲಿತ ಆಹಾರವು ಇವೆಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ.

ಇದನ್ನೂ ಓದಿ :Pudina Tea For Summer :ಬೇಸಿಗೆಯ ಆಲಸ್ಯವನ್ನು ಸೋಲಿಸಲು ಪುದೀನ ಚಹಾವನ್ನು ಕುಡಿಯಿರಿ

ಇದನ್ನೂ ಓದಿ : Wet Hair Mistakes : ನೀವೂ ಈ ತಪ್ಪುಗಳನ್ನು ಮಾಡುತ್ತೀರಾ?ಇದರಿಂದ ಕೂದಲಿಗೆ ಸಮಸ್ಯೆಯಾಗಬಹುದು ಹುಷಾರ್‌!

(Teenager skincare tips and get rid of skin problems)

Comments are closed.