ಶಾಲಾ ವಿದ್ಯಾರ್ಥಿಗಳಿಗೆ 10 ದಿನಗಳ ಕ್ರಿಸ್ಮಸ್​ ರಜೆ ವಿಚಾರ : ಧರ್ಮಸಂಘರ್ಷಕ್ಕೆ ಇಳಿದ ಶ್ರೀರಾಮಸೇನೆ

ಕ್ರಿಸ್ಮಸ್​ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹಿಂದೂ ಮಾಲೀಕತ್ವದ ಖಾಸಗಿ ಶಾಲೆಗಳಲ್ಲಿ ಎಲ್ಲಾ ಶಾಲೆಗಳಂತೆಯೇ ದಸರಾ ಹಬ್ಬದ ಸಂದರ್ಭದಲ್ಲಿ 10 ದಿನಗಳ ರಜೆ ನೀಡಿದರೆ ಕ್ರಿಶ್ಚಿಯನ್​ ಸಂಸ್ಥೆಯ ಶಾಲೆಗಳಲ್ಲಿ ಈ ರಜೆಯನ್ನು ಕ್ರಿಸ್ಮಸ್​ ಹಬ್ಬದಂದು ನೀಡುವ ಪರಿಪಾಠ ರಾಜ್ಯದಲ್ಲಿದೆ. ಇದರ ವಿರುದ್ಧ ಸಮರ ಸಾರಿರುವ ಶ್ರೀರಾಮಸೇನೆಯು ಕ್ರಿಶ್ಚಿಯನ್​ ಶಾಲೆಗಳಲ್ಲಿ ಕ್ರಿಸ್ಮಸ್​ ಹಬ್ಬಕ್ಕೆ 10 ದಿನಗಳ ರಜೆ ನೀಡುವ ಕ್ರಮದ ವಿರುದ್ಧ ಧರ್ಮ ಸಂಘರ್ಷಕ್ಕೆ ಮುಂದಾಗಿದೆ.

ರಾಜ್ಯ ಸರ್ಕಾರದ ಪ್ರಕಾರ ಕ್ರಿಸ್ಮಸ್​ ಹಬ್ಬಕ್ಕೆ ಕೇವಲ 1 ದಿನದ ರಜೆ ಮಾತ್ರ ನೀಡಬೇಕು. ಆದರೆ ರಾಜ್ಯದಲ್ಲಿರುವ ಕ್ರಿಶ್ಚಿಯನ್​ ಶಾಲೆಗಳಲ್ಲಿ ದಸರಾ ಹಬ್ಬದ ರಜೆಯನ್ನು ಕಡಿತಗೊಳಿಸಿ ಈ ರಜೆಯನ್ನು ಕ್ರಿಸ್ಮಸ್​ ಹಬ್ಬಕ್ಕೆ ನೀಡಲಾಗುತ್ತಿದೆ. ಕ್ರಿಶ್ಚಿಯನ್​ ಶಾಲೆಗಳಾಗಿದ್ದರೂ ಸಹ ಇಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹೆಚ್ಚಾಗಿ ಹಿಂದೂಗಳೇ ಇರುತ್ತಾರೆ. ಹೀಗಿರುವಾಗ ಹಿಂದೂ ಧರ್ಮದ ಹಬ್ಬಕ್ಕೆ ರಜೆ ಕಡಿತಗೊಳಿಸಿ ಕ್ರಿಶ್ಚಿಯನ್​ ಧರ್ಮದ ಹಬ್ಬಕ್ಕೆ ರಜೆ ನೀಡುವ ಶಾಲೆಗಳ ವಿರುದ್ಧ ಕ್ರಮಕ್ಕೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರು ಹಾಗೂ ಬೆಂಗಳೂರು ಭಾಗಗಳಲ್ಲಿ ಈ ವಿಚಾರವಾಗಿ ಸೋಮವಾರದಿಂದ ಪ್ರತಿಭಟನೆಗೆ ಶ್ರೀರಾಮಸೇನೆ ನಿರ್ಧರಿಸಿದೆ. ಈಗಾಗಲೇ ಬೆಂಗಳೂರಿನ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿರುವ ಶ್ರೀರಾಮಸೇನೆ ಕ್ರಿಸ್ಮಸ್​ ಹಬ್ಬಕ್ಕೆ 1 ದಿನಕ್ಕಿಂತ ಜಾಸ್ತಿ ರಜೆ ನೀಡುವ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ವಿಮಾನಯಾನಕ್ಕೆ ₹47 ಕೋಟಿಗೂ ಅಧಿಕ ಖರ್ಚು ಮಾಡಿದ ಸ’ಮಜಾ’ವಾದಿ ಸಿಎಂ ಸಿದ್ದರಾಮಯ್ಯ..!

ಹಿಂದೂಗಳ ಹಬ್ಬದಂದು ಇರುವ ರಜೆಯನ್ನು ಕಡಿತಗೊಳಿಸಿ ಕ್ರಿಶ್ಚಿಯನ್​ ಹಬ್ಬಕ್ಕೆ ರಜೆ ನೀಡಲಾಗುತ್ತಿದೆ. ಈ ರೀತಿ ಮಾಡುವಂತೆ ಸರ್ಕಾರದಿಂದ ಯಾವುದೇ ಕ್ರಮ ಇಲ್ಲವಾದರೂ ಸಹ ಸ್ವಯಂ ಪ್ರೇರಿತರಾಗಿ ಖಾಸಗಿ ಶಾಲೆಗಳಲ್ಲಿ ಕ್ರಿಸ್ಮಸ್​ ರಜೆಯ ಪರಿಪಾಠವಿದೆ. ಇದನ್ನು ಬಂದ್​ ಮಾಡಿಸಿದೇ ಸಿದ್ಧ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಸವಾಲ್​ ಹಾಕಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories