ಕರಾವಳಿ ಭಾಗದಲ್ಲಿ ಇಂದು ಸೂರ್ಯನ ಅಟ್ಟಹಾಸ : ತೇವಾಂಶ ಭರಿತ ವಾತಾವರಣದಿಂದ ಜನತೆ ಹೈರಾಣಾಗೋದು ಪಕ್ಕಾ

Karnataka Weather Forecast: ರಾಜ್ಯದಲ್ಲಿ ಆಗಾಗ ತಂಪರೆಯುತ್ತಿದ್ದ ವರುಣ ಇಂದಿನಿಂದ ವಿರಾಮ ಪಡೆದುಕೊಳ್ಳಲಿದ್ದಾನೆ. ರಾಜ್ಯದ ಕೆಲವೇ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗಬಹುದೆಂದು ನಿರೀಕ್ಷಿಸಲಾಗಿದೆಯಾದರೂ ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಖರ ಸೂರ್ಯನ ಶಾಖವೇ ಇರಲಿದೆ. ಅದರಲ್ಲೂ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಹಾಗೂ ಉತ್ತರ ಕನ್ನಡದ ಜನತೆಗೆ ಮನೆಯಿಂದ ಹೊರಬರುವ ಮುನ್ನ ನೂರು ಭಾರಿ ಯೋಚಿಸುವುದು ಉತ್ತಮ.

ಇಂದು ಬೆಳಗ್ಗೆಯಿಂದಲೇ ಕರಾವಳಿ ಜಿಲ್ಲೆಗಳಲ್ಲಿ ಹಾಟ್​ ಆ್ಯಂಡ್‌ ಹ್ಯೂಮಿಡ್​ ಇರಲಿದ್ದು ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇಂದು ಬಿಸಿಲಿನ ತೀವ್ರತೆ ಅತ್ಯಂತ ಪ್ರಖರವಾಗಿ ಇರಲಿದ್ದು, ಇದರ ಜೊತೆಯಲ್ಲಿ ಉಸಿರುಗಟ್ಟಿಸುವಂತಹ ತೇವಾಂಶಭರಿತ ವಾತಾವರಣ ಕೂಡ ಇರಲಿದ್ದು ಜನತೆ ಸೆಖೆಯಲ್ಲಿ ಇಂದು ಬೆಂದು ಹೋಗಲಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಇನ್ಮುಂದೆ ನಗದುಮುಕ್ತ..! ಏಪ್ರಿಲ್​ 10ರಿಂದ ಯುಪಿಐ ಪಾವತಿಗೆ ಮಾತ್ರ ಅವಕಾಶ

ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸರಿಸುಮಾರು 32°C ನಿಂದ 34°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ತೇವಾಂಶ ಹೆಚ್ಚಿರುವುದರಿಂದ ಮನುಷ್ಯನ ದೇಹಕ್ಕೆ ಇದು 40°C ಗಿಂತಲೂ ಹೆಚ್ಚಿನ ಶಾಖದ ಅನುಭವ ಸಿಗಲಿದೆ. ವಾತಾವರಣದಲ್ಲಿ ತೇವಾಂಶದ ಪ್ರಮಾಣ ಶೇ. 70ಕ್ಕಿಂತ ಹೆಚ್ಚಿರುವುದರಿಂದ ವಿಪರೀತ ಬೆವರು ಮತ್ತು ಉಸಿರುಗಟ್ಟಿಸುವ ಅನುಭವ ಜನತೆಗೆ ಆಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ 32°C – 33°C ಇರಲಿದ್ದು ವಾತಾವರಣ ವಿಪರೀತ ಸೆಖೆ ಮತ್ತು ಆರ್ದ್ರತೆಯಿಂದ ಕೂಡಲಿರಲಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 32°C – 34°C ಇರಲಿದ್ದು ಮೋಡ ಕವಿದ ವಾತಾವರಣದ ಜೊತೆಯಲ್ಲಿ ಉಸಿರುಗಟ್ಟಿಸುವಂತಹ ಹವಾಮಾನ ಇರಲಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಗರಿಷ್ಠ ತಾಪಮಾನ 30°C – 32°C ಇದ್ದು ತೇವಾಂಶ ಭರಿತ ಬಿಸಿಗಾಳಿ ಇರಲಿದೆ ಎಂದು ಐಎಂಡಿ ತಿಳಿಸಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories