Bhanvar lal Died : ಕಾಂಗ್ರೆಸ್ ಹಿರಿಯ ನಾಯಕ ಭನ್ವರ್‌ ಲಾಲ್‌ ಶರ್ಮಾ ವಿಧಿವಶ

ರಾಜಸ್ಥಾನ : ( Bhanvar lal Died) ಹಿರಿಯ ಕಾಂಗ್ರೆಸ್ ನಾಯಕ ಭನ್ವರ್‌ ಲಾಲ್‌ ಶರ್ಮಾ ನಿಧನರಾಗಿದ್ದಾರೆ.ಹಲವು ದಿನಗಳಿಂದ ಭನ್ವರ್‌ ಲಾಲ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು . ಶನಿವಾರ ಅವರನ್ನು ಜೈಪುರದ ಸವಾಯಿ ಮಾನ್‌ ಸಿಂಗ್‌ ( SMS) ಆಸ್ಪತ್ರಗೆ ಕುಟುಂಬದವರು ದಾಖಲಿಸಿದ್ದರು . ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ(Bhanvar lal Died).

ಭನ್ವರ್‌ ಲಾಲ್‌(Bhanvar lal Died) ರಾಜಸ್ಥಾನದ ಹಿರಿಯ ಕಾಂಗ್ರೇಸ್‌ ನಾಯಕರಾಗಿದ್ದು, 1998, 2003, 2013,ಮತ್ತು 2018 ರ ಚುನಾವಣೆಗೆ ಕಾಂಗ್ರೆಸ್‌ ನಿಂದ ಶಾಸಕರಾಗಿದ್ದರು . 1985 ರಲ್ಲಿ ಲೋಕದಳದಿಂದ ವಿಧಾನಸಭೆಯ ಸದಸ್ಯರಾಗಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. 1990 ರಲ್ಲಿ ಅವರು ಜನತಾ ದಳ ಪಕ್ಷಕ್ಕೆ ಸೇರುವ ಜೊತೆಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ಹಲವು ದಿನಗಳಿಂದಲೂ ಭನ್ವರ್‌ ಲಾಲ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಭಾನುವಾರ ಅವರು ಚಿಕಿತ್ಸೆ ಫಲಕಾರಿಯಾಗಿದೆ ಮೃತರಾಗಿದ್ದಾರೆ. ಇದೀಗ ಅವರ ಪಾರ್ಥೀವ ಶರೀರವನ್ನು ಹನುಮಂತ ನಗರದಲ್ಲಿರುವ ಅವರ ಮನೆಗೆ ತೆಗೆದುಕೊಂಡು ಹೋಗಲಾಗಿದ್ದು, ವಿದ್ಯಾಧರ್‌ ನಗರದ ಬ್ರಾಹ್ಮಣ ಮಹಾಸಭಾ ಕಟ್ಟಡದಲ್ಲಿ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : CM Basavaraj Bommai : CM ಬೊಮ್ಮಾಯಿ ಪುತ್ರ ಭರತ್‌ ಬೊಮ್ಮಾಯಿಗೆ ಅಂತರಾಷ್ಟ್ರೀಯ ಬಿಸಿನೆಸ್‌ ಅವಾರ್ಡ್‌

ಇದನ್ನೂ ಓದಿ : Nirmala Sitharaman: ಎಷ್ಟಮ್ಮ ಆಲೂಗಡ್ಡೆ..? ಮಾರ್ಕೆಟ್ ನಲ್ಲಿ ಖುದ್ದು ತರಕಾರಿ ಖರೀದಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಇದನ್ನೂ ಓದಿ : Hindu gods:ಹಿಂದೂ ದೇವರನ್ನು ಆರಾಧಿಸಲಾರೆ ಎಂದ ಆಪ್​ ಸಚಿವ : ಬಿಜೆಪಿ ನಾಯಕರಿಂದ ತರಾಟೆ

ಸಾರ್ವಜನಿಕರಿಂದ ಅಂತ್ಯ ದರ್ಶನ ಮುಗಿದ ಮೇಲೆ ಸೋಮವಾರ ಮಧ್ಯಾಹ್ನ ಅವರ ಅಂತ್ಯ ಕ್ರೀಯೆಯನ್ನು ನಡೆಸುವುದಾಗಿ ಅವರ ಕುಟುಂಬದವರು ತಿಳಿಸಿದ್ದಾರೆ.ಭನ್ವರ್‌ ಲಾಲ್‌ ಅವರ ನಿಧನದ ಸುದ್ದಿ ತಿಳಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಟ್ವೀಟ್‌ ಮಾಡುವ ಮೂಲಕ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Instagram Like 2 Murder : ಇನ್ಸ್ಟಾಗ್ರಾಂ ನಲ್ಲಿ ಲೈಕ್‌,ಕಮೆಂಟ್‌ ವಿಚಾರಕ್ಕೆ ಜಗಳ: ಇಬ್ಬರ ಕೊಲೆ

“ಭನ್ವರ್‌ ಲಾಲ್‌ ಅವರು ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಅವರ ಆರೋಗ್ಯದ ಬಗ್ಗೆ ವಿಚಾರಿಸಲು ನಾನು ಎಸ್‌ ಎಂ ಎಸ್‌ ಆಸ್ಪತ್ರೆಗೆ ತೆರಳಿ ಅವರ ಕುಟುಂಬದವರನ್ನು ಬೇಟಿ ಮಾಡಿದ್ದೆ.ಈ ಸಮಯದಲ್ಲಿ ಅವರ ಸಾವಿನ ದುಃಖವನ್ನು ತಡೆಯುವ ಶಕ್ತಿ ಆ ದೇವರು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೆನೆ” ಎಂದು ಸರ್ದಾರ್ಶಹರ್‌ ಅವರು ಟ್ವೀಟ್‌ ಮಾಡುವ ಮೂಲಕ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.

(Bhanvarlal Died) Senior Congress leader Bhanvarlal Sharma passed away. Bhanvarlal was ill for many days. His family admitted him to Sawai Man Singh (SMS) Hospital in Jaipur on Saturday. But the treatment was ineffective and he died on Sunday morning (Bhanvar lal Died).

Comments are closed.