Prithvi Shaw: “ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಮಾಡ್ಬೇಕು ಹೇಳಿ..” ಬಿಸಿಸಿಐ ವಿರುದ್ಧ ಪೃಥ್ವಿ ಶಾ ಆಕ್ರೋಶ ಸ್ಫೋಟ

ಬೆಂಗಳೂರು:Prithvi Shaw anger against BCCI: ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಮುಂಬೈನ ಯುವ ಆರಂಭಿಕ ಬ್ಯಾಟ್ಸ್’ಮನ್ ಪೃಥ್ವಿ ಶಾ, ಮತ್ತೆ ತಂಡಕ್ಕೆ ಕಂಬ್ಯಾಕ್ ಮಾಡಲು ಶತ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ 2018ರ ಐಸಿಸಿ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ (Indian Cricket team) ನಾಯಕನಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತಿಲ್ಲ.

ಭಾರತ ತಂಡ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯಾಗೆ ತೆರಳಿರುವ ಕಾರಣ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪೃಥ್ವಿ ಶಾ ಅವಕಾಶದ ನಿರೀಕ್ಷೆಯಲ್ಲಿದ್ದರು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಮತ್ತೆ ಪೃಥ್ವಿ ಶಾ ಅವರನ್ನು ಕಡೆಗಣಿಸಿದೆ. ಇದರಿಂದ ಬೇಸರಗೊಂಡಿರುವ ಪೃಥ್ವಿ ಶಾ ಆಯ್ಕೆ ಸಮಿತಿ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

“ನನಗೆ ತುಂಬಾ ಬೇಸರವಾಗಿದೆ. ತುಂಬಾ ಪರಿಶ್ರಮ ಪಡುತ್ತಿದ್ದೇನೆ. ಕಳೆದ ಕೆಲ ತಿಂಗಳುಗಳಿಂದ ಸಾಕಷ್ಟು ರನ್ ಗಳಿಸಿದ್ದೇನೆ. ತೂಕ ಇಳಿಸಿಕೊಂಡು ಫಿಟ್ನೆಸ್ ಸುಧಾರಿಸಿಕೊಂಡಿದ್ದೇನೆ. ಆದರೂ ಭಾರತ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ” ಎಂದು 22 ವರ್ಷದ ಪೃಥ್ವಿ ಶಾ ಹೇಳಿದ್ದಾರೆ. “ಅವರಿಗೆ ಯಾವಾಗ ನನ್ನನ್ನು ಆಡಿಸಬೇಕೆಂದು ಅನ್ನಿಸುತ್ತದೆಯೋ ಆಗಲೇ ನನಗೆ ಅವಕಾಶ ನೀಡಲಿ. ಅಲ್ಲಿಯವರೆಗೆ ನಾನು ಕಾಯುತ್ತೇನೆ. ಭಾರತ ತಂಡ ಅಥವಾ ಭಾರತ ‘ಎ’.. ಹೀಗೆ ಯಾವುದೇ ಅವಕಾಶ ಸಿಕ್ಕರೂ ನಾನು ನನ್ನ ಶ್ರೇಷ್ಠ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ”.

  • ಪೃಥ್ವಿ ಶಾ, ಕ್ರಿಕೆಟಿಗ

ಸ್ಫೋಟಕ ಆಟಕ್ಕೆ ಹೆಸರಾಗಿರುವ ಪೃಥ್ವಿ ಶಾ ಭಾರತ ಪರ ಆಡಿದ ಪದಾರ್ಪಣೆಯ ಟೆಸ್ಟ್’ನಲ್ಲೇ ಶತಕ ಬಾರಿಸಿದ್ದರು. ಇದುವರೆಗೆ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಿರುವ ಪೃಥ್ವಿ, ಒಂದು ಶತಕ, 2 ಅರ್ಧಶತಕಗಳ ಸಹಿತ 339 ರನ್ ಕಲೆ ಹಾಕಿದ್ದಾರೆ. ಟೀಮ್ ಇಂಡಿಯಾ ಪರ 6 ಏಕದಿನ ಪಂದ್ಯಗಳನ್ನೂ ಆಡಿರುವ ಶಾ, 189 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್’ನಲ್ಲಿ ನಡೆದ 2018ರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪೃಥ್ವಿ ಶಾ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.

2022ರ ಐಪಿಎಲ್ ಟೂರ್ನಿಯ ನಂತರ ಪೃಥ್ವಿ ಶಾ 7ರಿಂದ 8 ಕೆ.ಜಿ ತೂಕ ಇಳಿಸಿಕೊಂಡು ಫಿಟ್ನೆಸ್ ಸುಧಾರಿಸಿಕೊಂಡಿದ್ದು, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟೂರ್ನಿ ಅಕ್ಟೋಬರ್ 11ರಿಂದ ಆರಂಭವಾಗಲಿದ್ದು, ರಾಜ್’ಕೋಟ್’ನಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ತಂಡ, ಮಿಜೋರಾಂ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Dinesh Karthik retirement : ಕ್ರಿಕೆಟ್‌ ವೃತ್ತಿ ಬದುಕಿಗೆ ದಿನೇಶ್‌ ಕಾರ್ತಿಕ್‌ ನಿವೃತ್ತಿ ?

ಇದನ್ನೂ ಓದಿ : Deepak Chahar Injured: ವಿಶ್ವಕಪ್ ಹೊಸ್ತಿಲಲ್ಲಿ ಭಾರತಕ್ಕೆ ಮತ್ತೊಂದು ಆಘಾತ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ದೀಪಕ್ ಚಹರ್ ಔಟ್

Indian Cricket team Prithvi Shaw anger against BCCI

Comments are closed.