British Tourist Raped : ಮಸಾಜ್​ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಗೋವಾದಲ್ಲಿ ಅತ್ಯಾಚಾರ : ಆರೋಪಿ ಬಂಧನ

ಗೋವಾ : British Tourist Raped: ಗೋವಾ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಲ್ಲಿ ಎಂದಿಗೂ ವಿಫಲವಾಗೋದಿಲ್ಲ. ಅದರಲ್ಲೂ ವಿದೇಶಿ ಪ್ರಜೆಗಳಂತೂ ಹೆಚ್ಚಾಗಿ ಗೋವಾಗೆ ಭೇಟಿ ನೀಡುತ್ತಾರೆ. ವಿದೇಶಿ ಪ್ರಜೆಗಳು ಭಾರತಕ್ಕೆ ಭೇಟಿ ನೀಡಿದಾಗ ಅವರಿಗೆ ಮುಜುಗರವಾದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ . ಆದರೆ ಗೋವಾದ ಅರಂಬೋಲ್ ಬೀಚ್​ನ ಸಮೀಪದಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ವಿದೇಶಿ ಮಹಿಳೆಯ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿದ್ದಾನೆ. ಮಸಾಜ್​ ಮಾಡಿಕೊಡುತ್ತೇನೆಂದು ಹೇಳಿ ಆಕೆಯ ಸ್ನೇಹಿತನ ಎದುರಲ್ಲೇ ಈತ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.

ಈ ಕೃತ್ಯ ಎಸಗಿದಾತನನ್ನು ವಿನ್ಸೆಂಟ್​ ಡಿಸೋಜಾ (32) ಎಂದು ಗುರುತಿಸಲಾಗಿದೆ. ಉತ್ತರ ಗೋವಾದ ಅರಂಬೋಲ್​ ಬೀಚ್​ ಬಳಿಯಲ್ಲಿಮ ಅಕ್ರಮವಾಗಿ ಮಸಾಜ್​ ಸೆಂಟರ್​ನ್ನು ಹೊಂದಿದ್ದ ಗುಂಪಿನ ಸದಸ್ಯನಾಗಿದ್ದ ಈತ ತಾನು ಮಸಾಜ್​ ಮಾಡಿಕೊಡುತ್ತೇನೆ ಎಂದು ವಿದೇಶಿ ಪ್ರವಾಸಿಗರನ್ನು ನಂಬಿಸಿದ್ದಾನೆ. ಇದನ್ನು ನಂಬಿದ ವಿದೇಶಿ ಮಹಿಳೆಯ ಮೇಲೆ ಈತ ಅತ್ಯಾಚಾರವೆಸಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗೋವಾ ಪ್ರವಾಸದಲ್ಲಿದ್ದ ಬ್ರಿಟನ್​ನ ಮಹಿಳೆಯು ನೀಡಿರುವ ದೂರಿನ ಪ್ರಕಾರ, ತಾನು ಸಮುದ್ರ ತೀರದ ಸಮೀಪದಲ್ಲಿರುವ ಸಿಹಿ ನೀರಿನ ಸರೋವರದ ಬಳಿ ಮಲಗಿದ್ದ ಸಂದರ್ಭದಲ್ಲಿ ಮಸಾಜ್​ ಮಾಡಿಕೊಡುವ ನೆಪದಲ್ಲಿ ಆರೋಪಿಯು ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನನ್ನ ಸ್ನೇಹಿತನು ಈ ಕೃತ್ಯ ನಡೆಯುವಾಗ ಘಟನಾ ಸ್ಥಳದಲ್ಲಿಯೇ ಇದ್ದನು ಎಂದು ಹೇಳಿದ್ದಾರೆ.

ಈ ಘಟನೆ ಜೂನ್ 2 ರಂದು ನಡೆದಿದೆ, ಆದರೆ ಮಹಿಳೆ ಬ್ರಿಟನ್​​ನಲ್ಲಿರುವ ತನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮತ್ತು ಭಾರತದಲ್ಲಿನ ಬ್ರಿಟಿಷ್ ರಾಯಭಾರ ಕಚೇರಿಯಿಂದ ಸಹಾಯವನ್ನು ಪಡೆದ ನಂತರ ಸೋಮವಾರ ಪೆರ್ನೆಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಒಂದು ಗಂಟೆಯೊಳಗೆ ಪೆರ್ನೆಮ್ ಪೊಲೀಸರು, ಇನ್ಸ್‌ಪೆಕ್ಟರ್ ವಿಕ್ರಮ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು .

ಇದನ್ನು ಓದಿ : Saurav Ganguly : ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ : ಸ್ಪಷ್ಟನೆ ಕೊಟ್ಟ ಶಾ

ಇದನ್ನೂ ಓದಿ : Set Up UPI: ಹಣ ವರ್ಗಾಯಿಸಲು ಯುಪಿಐ ಸೆಟ್‌ ಮಾಡುವುದು ಹೇಗೆ?

ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

British Tourist Raped In Front Of Partner Near Beach In Goa: Police

Comments are closed.