CT Ravi CM : ರಾಜ್ಯದ ಸಿಎಂ ಆಗ್ತಾರಾ ಸಿ.ಟಿ.ರವಿ ..? ಶ್ರೀರಾಮುಲು, ಬೊಮ್ಮಾಯಿ ಡಿಸಿಎಂ

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವ ಬದಲಾಗೋದು ಖಚಿತ. ಈ ಹಿನ್ನೆಲೆಯಲ್ಲಿ ಸಿಎಂ ಹುದ್ದೆಗೆ ರೇಸ್‌ ಜೋರಾಗಿದೆ. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸಿಎಂ ಆಗೋ ಸಾಧ್ಯತೆ ದಟ್ಟವಾಗಿದ್ದು, ಶ್ರೀರಾಮುಲು ಮತ್ತು ಬಸವರಾಜ್‌ ಬೊಮ್ಮಾಯಿ ಅವರಿಗೆ ಡಿಸಿಎಂ ಪಟ್ಟ ಒಲಿಯಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಸ್ವ ಪಕ್ಷೀಯ ಶಾಸಕರೇ ಭಂಡಾಯದ ಬಾವುಟ ಹಾರಿದ್ದಾರೆ. ಒಂದೆಡೆ ಭ್ರಷ್ಟಾಚಾರ ಇನ್ನೊಂದೆಡೆ ವಯಸ್ಸಿನ ನೆಪವೊಡ್ಡಿ ರಾಜ್ಯ ಬಿಜೆಪಿ ಭೀಷ್ಮ ಯಡಿಯೂರಪ್ಪನವರ ಯುಗಾಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ದೆಹಲಿ ನಾಯಕರು ಈಗಾಗಲೇ ಜುಲೈ ಅಂತ್ಯದವರೆಗೂ ಗಡುವು ನೀಡಿದ್ದು, ತಾವಾಗಿಯೇ ಸಿಎಂ ಕುರ್ಚಿಯಿಂದ ಯಡಿಯೂರಪ್ಪನವರನ್ನು ಇಳಿಸುವ ತಂತ್ರಗಾರಿಕೆ ಹೆಣೆದಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಬಿಜೆಪಿ ಮೂರು ಭಾಗವಾಗಿದೆ. ಒಂದೆಡೆ ಯಡಿಯೂರಪ್ಪ ಬೆಂಬಲಿಗರು, ಇನ್ನೊಂದೆಡೆ ಭಂಡಾಯದ ಗುಂಪು. ಮತ್ತೊಂದೆಡೆ ಸಂಘಪರಿವಾರ. ಹೀಗಿರುವಾಗ ಪಕ್ಷವನ್ನು ಸಂಘಟನಾತ್ಮಕವಾಗಿ ಗಟ್ಟಿಗೊಳಿಸಿ ಮುಂದಿನ ಚುನಾವಣೆಗೆ ಅಣಿಗೊಳಿಸಬೇಕಾದ ಸಂದಿಗ್ದ ಸ್ಥಿತಿಯಲ್ಲಿ ಬಿಜೆಪಿ ಹೈಕಮಾಂಡ್‌ ಇದೆ. ಇದೇ ಕಾರಣಕ್ಕೆ ಈಗಾಗಲೇ ಯಡಿಯೂರಪ್ಪ ಅವರಿಗೆ ಗಡುವು ನೀಡಲಾಗಿದೆ.

ಬಿ.ಎಸ್.ಯಡಿಯೂರಪ್ಪ ಸಿಎಂ ಹುದ್ದೆಗೆ ಅಧಿಕೃತ ರಾಜೀನಾಮೆ ನೀಡಿಲ್ಲವಾದ್ರೂ, ಯಾವುದೇ ಮುಖ್ಯ ನಿರ್ಧಾರಗಳನ್ನು ಕೈಗೊಳ್ಳದಂತೆ. ಹೊಸ ಯೋಜನೆ ಘೋಷಣೆ ಮಾಡದಂತೆ. ಅಷ್ಟೇ ಯಾಕೆ ಅಧಿಕಾರಿಗಳ ವರ್ಗಾವಣೆದಂತೆ ಹೈಕಮಾಂಡ್‌ ಬ್ರೇಕ್‌ ಹಾಕಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಹುಟ್ಟುಹಾಕಿ ನಾಲ್ಕು ಬಾರಿ ಅಧಿಕಾರಕ್ಕೆ ತಂದ ಯಡಿಯೂರಪ್ಪ ಇದೀಗ ಸ್ವಪಕ್ಷೀಯರ ವಿರೋಧದಿಂದಲೇ ನಿರ್ಗಮಿಸುತ್ತಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪ ನಿರ್ಗಮನದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಕುತೂಹಲ ವ್ಯಕ್ತ ವಾಗುತ್ತಿದೆ. ಈಗಾಗಲೇ ಡಿ.ವಿ.ಸದಾನಂದ ಗೌಡ, ಡಾ.ಅಶ್ವಥ್‌ ನಾರಾಯಣ. ಅರವಿಂದ ಬೆಲ್ಲದ್‌, ಪ್ರಹ್ಲಾದ್‌ ಜೋಷಿ, ಮುರುಗೇಶ್‌ ನಿರಾಣಿ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಆದ್ರೆ ಎಲ್ಲಾ ಹೆಸರುಗಳ ನಡುವಲ್ಲೇ ಹೈಕಮಾಂಡ್‌ ಹಾಗೂ ಆರ್‌ಎಸ್‌ಎಸ್‌ ಪಾಳಯದಲ್ಲೀಗ ಸಿ.ಟಿ.ರವಿ ಹೆಸರು ಮುಂಚೂಣಿಗೆ ಬಂದಿದೆ.

ಇದನ್ನೂ ಓದಿ : BS Yediyurappa Resignation : ರಾಜೀನಾಮೆಯ ಸುಳಿವು ನೀಡಿದ ಸಿಎಂ ಯಡಿಯೂರಪ್ಪ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಗೆಲುವು ಕಂಡಿರುವ ಸಿ.ಟಿ.ರವಿ ಈಗಾಗಲೇ ಸಚಿವರಾಗಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ತಮಿಳುನಾಡು ಉಸ್ತುವಾರಿ ಪಕ್ಷ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಅಂತ ಗುರುತಿಸಿಕೊಂಡಿರುವ ಸಿ.ಟಿ.ರವಿ ಹುಟ್ಟು ಆರ್‌ಎಸ್‌ಎಸ್‌ ಕಾರ್ಯಕರ್ತ. ನರೇಂದ್ರ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಹೊತ್ತಲೇ ಸಿ.ಟಿ.ರವಿ ಮೋದಿ ಅವರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ.

ಅನಂತ ಕುಮಾರ್‌, ಸಂತೋಷ್‌ ಜಿ ಅವರ ಜೊತೆ ಹೆಚ್ಚು ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರಿಂದಿಗೂ ಒಳ್ಳೆಯ ಹೆಸರು ಗಳಿಸಿಕೊಂಡಿದ್ದಾರೆ. ಯಡಿಯೂರಪ್ಪ ಬೆನ್ನಲ್ಲೇ ಬಿಜೆಪಿಯನ್ನು ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಸಿ.ಟಿ.ರವಿ ಸೂಕ್ತ ಅನ್ನೋ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್‌ ಬಂದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಬಿಎಸ್ವೈ ಪರ್ಯಾಯ ನಾಯಕತ್ವಕ್ಕೆ ಬಿಜೆಪಿ ಸಿದ್ಧತೆ : ಸದ್ದಿಲ್ಲದೇ ಸಮರಾಂಗಣಕ್ಕೆ ಸಿ.ಟಿ.ರವಿ

ಆರಂಭದಲ್ಲಿ ಅಶ್ವಥ್‌ ನಾರಾಯಣ, ಅರವಿಂದ ಬೆಲ್ಲದ್‌ ಹೆಸರು ಮುಂಚೂಣಿಯಲ್ಲಿದ್ದರೂ ಅನುಭವದ ಕೊರತೆಯಿದೆ. ಇನ್ನೂ ಡಿ.ವಿ.ಸದಾನಂದ ಗೌಡ ಅವರು ಮೋದಿ ಅವರ ಮನಸ್ಸು ಗೆಲ್ಲುವಲ್ಲಿ ಸಫಲವಾಗಿಲ್ಲ. ಜೊತೆಗೆ ಜೋಷಿ ಅವರು ಕೇಂದ್ರಕ್ಕೆ ಸೀಮಿತಗೊಳಿಸೋ ಸಾಧ್ಯತೆಯಿದೆ. ಇನ್ನು ನಿರಾಣಿ ವಿಷಯದಲ್ಲಿ ಭ್ರಷ್ಟಾಚಾರದ ಆರೋಪವಿದೆ. ಹೀಗಾಗಿ ಸಿ.ಟಿ.ರವಿಗೆ ಪಟ್ಟಕಟ್ಟಿ ದೆಹಲಿ ನಾಯಕರೇ ಅಧಿಕಾರ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಗೋವಿಂದ ಕಾರಜೋಳ ಡಿಸಿಎಂ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದ್ದು, ಶ್ರೀರಾಮುಲು, ಬಿಎಸ್‌ವೈ ಆಪ್ತ ಬಸವರಾಜ ಬೊಮ್ಮಾಯಿ ನೂತನ ಡಿಸಿಎಂ ಆಗಲಿದ್ದಾರೆ. ಉಳಿದಂತೆ ಅಶ್ವಥ್‌ ನಾರಾಯಣ, ಸವದಿ ತಮ್ಮ ಹುದ್ದೆಯಲ್ಲಿಯೇ ಮುಂದುವರಿಯಲಿದ್ದಾರೆ. ಇನ್ನೊಂದೆಡೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಪಕ್ಷದ ಪ್ರಮುಖ ಹುದ್ದೆ ಲಭಿಸುವ ಸಾಧ್ಯತೆಯಿದ್ದು, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಅವರು ಈ ಬಾರಿ ಕ್ಯಾಬಿನೆಟ್‌ ಸೇರೋದು ಖಚಿತ.

ಇದನ್ನೂ ಓದಿ : ಕಾಫಿನಾಡಿನಿಂದ ರಾಷ್ಟ್ರ ರಾಜಧಾನಿಯವರೆಗೂ….! ದಂಡಯಾತ್ರೆ ನೆನಪಿಸಿಕೊಂಡ ಚಿಕ್ಕಮಾಗರವಳ್ಳಿ ರವಿ…!!

ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮುಖಗಳೇ ಕಾಣಿಸಿಕೊಳ್ಳಲಿದೆ. ಬಹುತೇಕ ಹಾಲಿ ಸಚಿವರಿಗೆ ಕೋಕ್‌ ನೀಡುವ ಮೂಲಕ ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ ಮಾಡಲು ಹೈಕಮಾಂಡ್‌ ನಿರ್ಧರಿಸಿದೆ. ಕೇಂದ್ರ ಸಚಿವ ಸಂಪುಟ ಮಾದರಿಯಲ್ಲೇ ಸಂಪುಟ ಪುನರಚನೆಯಾಗೋದು ಖಚಿತ ಎನ್ನುತ್ತಿದೆ ಪಕ್ಷದ ಮೂಲಗಳು.

Comments are closed.