ಬಂಗಾಳದಲ್ಲಿ ದೀದಿಗೆ ಮರ್ಮಾಘಾತ: ಸ್ವಕ್ಷೇತ್ರ ಭವಾನಿಪುರದಲ್ಲೂ ಮಮತಾ ಬ್ಯಾನರ್ಜಿಗೆ ಸೋಲು, ಬಿಜೆಪಿಗೆ ಭರ್ಜರಿ ಬಹುಮತ!
ಪಶ್ಚಿಮ ಬಂಗಾಳದಲ್ಲಿ ಸತತ ನಾಲ್ಕನೇ ಬಾರಿಗೆ ಅಧಿಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ಮಮತಾ ಬ್ಯಾನರ್ಜಿಗೆ ಬಂಗಾಳದ ಜನತೆ ಶಾಕ್ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸತತ ನಾಲ್ಕನೇ ಬಾರಿಗೆ ಅಧಿಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ಮಮತಾ ಬ್ಯಾನರ್ಜಿಗೆ ಬಂಗಾಳದ ಜನತೆ ಶಾಕ್ ನೀಡಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 100ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಭೇರಿ ಭಾರಿಸುವ ಮೂಲಕ ಬಿಜೆಪಿ ಸರ್ಕಾರ ರಚನೆಯ ಅರ್ಹತೆ ಪಡೆದುಕೊಂಡಿದೆ. ಇತ್ತ ಸೂರ್ಯಾಸ್ತದ ಒಳಗಾಗಿ ವಿಜಯ ನಮ್ಮದಾಗಲಿದೆ ಎಂದಿದ್ದ ಮಮತಾ ಬ್ಯಾನರ್ಜಿ ಸರ್ಕಾರ ರಚಿಸುವುದು ಹಾಗಿರಲಿ ಶಾಸಕ ಸ್ಥಾನ ಉಳಿಸಿಕೊಳ್ಳುವುದರಲ್ಲಿಯೂ ವಿಫಲರಾಗಿದ್ದಾರೆ.
ಬಂಗಾಳದ ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಕಣಕ್ಕಿಳಿದಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಮಂಡಿಯೂರಿದ್ದಾರೆ. 20ನೇ ಸುತ್ತಿನ ಎಣಿಕೆಯ ನಂತರ ಸುವೇಂದು 73,463 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ 58,349 ಮತಗಳನ್ನು ಪಡೆದರು. ದೀರ್ಘಕಾಲದಿಂದ ಮಮತಾ ಬ್ಯಾನರ್ಜಿ ಭದ್ರಕೋಟೆ ಎಂದೇ ಖ್ಯಾತಿ ಪಡೆದಿದ್ದ ಭವಾನಿಪುರ ಕ್ಷೇತ್ರದಲ್ಲಿ ದೊರೆತ ಈ ಸೋಲು ಮಮತಾ ಬ್ಯಾನರ್ಜಿ ರಾಜಕೀಯ ಲೋಕದ ತೀವ್ರ ಹಿನ್ನೆಡೆ ಎಂದೇ ಹೇಳಬಹುದಾಗಿದೆ. ಈ ಮೂಲಕ ಈ ಬಾರಿ ವಿಧಾನಸಭೆ ಪ್ರವೇಶಿಸುವ ಅರ್ಹತೆಯನ್ನೂ ದೀದಿ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ : ಮಹಿಳೆಯರಿಗೆ ಮೋದಿ ಸರ್ಕಾರದ ಬಂಪರ್ ಆಫರ್! ಉಚಿತ ಗ್ಯಾಸ್ ಸಿಲಿಂಡರ್ ಜೊತೆಗೆ ಸಬ್ಸಿಡಿ
ಅಂದಹಾಗೆ ಸುವೇಂದು ಅಧಿಕಾರಿ ಎದುರು ಮಮತಾ ಬ್ಯಾನರ್ಜಿ ಸೋಲು ಇದೇ ಮೊದಲೇನಲ್ಲ . ಕಳೆದ ಬಾರಿ ನಂದೀಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ಎದುರು ಸುವೇಂದು ಗೆದ್ದು ಬೀಗಿದ್ದರು. ಆದರೆ ಈ ಬಾರಿ ತಮ್ಮ ಭದ್ರಕೋಟೆಯಲ್ಲಿಯೇ ಮಮತಾ ಅದೃಷ್ಠ ಪರೀಕ್ಷೆಗೆ ಇಳಿದಿದ್ದರು. ಆದರೆ ಇಲ್ಲಿಯೂ ಮಮತಾ ಸೋಲಿನ ರುಚಿ ಕಂಡಿದ್ದಾರೆ. ಬಂಗಾಳದಲ್ಲಿ ಕೇಸರಿಪಾಳಯದ ಮೋಡಿಗೆ ಟಿಎಂಸಿ ಪಕ್ಷದ ಸರ್ಕಾರ ರಚನೆಯ ಕನಸು ನುಚ್ಚು ನೂರಾಗಿದೆ.
0



