ಪುತ್ತೂರು : ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಬಿಜೆಪಿಯ ಪ್ರಭಾವಿ ಮುಖಂಡ ಡಿವಿ ಸದಾನಂದ ಗೌಡ (DV Sadananda Gowda ) ಅವರಿಗೆ ಬಿಜೆಪಿ ಹೈಕಮಾಂಡ್ ಶಾಕ್ ಕೊಟ್ಟಿದೆ. ಸಕ್ರೀಯ ರಾಜಕಾರಣ ದಿಂದ ನಿವೃತ್ತಿಗೆ ಬಿಜೆಪಿ ವರಿಷ್ಠರು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಸದಾನಂದ ಗೌಡ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪುಷ್ಟಿ ನೀಡಿದೆ.

ಇಂದು ಕುಕ್ಕೆಸುಬ್ರಹ್ಮಣ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿವಿ ಸದಾನಂದ ಗೌಡ ಅವರು, ಚುನಾವಣಾ ಸ್ಪರ್ಧೆ, ಪದವಿಯಲ್ಲಿ ಯಾವುದೇ ಆಸಕ್ತಿ ಇಲ್ಲ ಹೇಳಿದ್ದಾರೆ. ಬಿಜೆಪಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಸುಳ್ಯದಂತಹ ಕುಗ್ರಾಮದಲ್ಲಿದ್ದ ನನ್ನನ್ನು ಪಕ್ಷ ಶಾಸಕ, ಸಂಸದ, ಕೇಂದ್ರ ಸಚಿವ, ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಳಿಕ ಪಕ್ಷದಲ್ಲಿ ಇಷ್ಟೊಂದು ಸ್ಥಾನಗಳನ್ನು ಪಡೆದ ವ್ಯಕ್ತಿ ನಾನೋಬ್ಬನೆ. ಇನ್ನು ಏನಿದ್ದರೂ ಪಕ್ಷವನ್ನು ಗೆಲ್ಲಿಸುವುದರಲ್ಲಿ ನನಗೆ ಆಸಕ್ತಿ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ಮಾಡುವುದರಲ್ಲಿ ಆಸಕ್ತಿ ಎಂದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ಯಾರು ನಿಂತರೂ ಬಿಜೆಪಿಗೆ ಸೋಲಾಗಲ್ಲ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕದ ಇಡೀ ರಾಜ್ಯಕ್ಕೆ ಇದು ಅನ್ವಯ ಆಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ಕುರುಬರಿಗೆ ಒಲಿಯುತ್ತಾ ರಾಜ್ಯಾಧ್ಯಕ್ಷ ಸ್ಥಾನ : KS ಈಶ್ವರಪ್ಪ ಗೆ ಕೊಟ್ಟ ಮಾತು ಉಳಿಸಿಕೊಂಡ್ರಾ ಪ್ರಧಾನಿ ಮೋದಿ ?
ರಾಜ್ಯಪಾಲರಾಗ್ತಾರಾ ಡಿವಿ ಸದಾನಂದ ಗೌಡ ?
ಡಿವಿ ಸದಾನಂದ ಗೌಡ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಅನ್ನೋ ಸುದ್ದಿ ಎಲ್ಲೆಡೆ ಈ ಹಿಂದೆಯೇ ಹರಿದಾಡಿತ್ತು. ಇದೀಗ ಖುದ್ದು ಡಿವಿಎಸ್ ಅವರೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಬಿಜೆಪಿ ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಡಿವಿ ಸದಾನಂದ ಗೌಡ ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದೆಯಂತೆ.

ಡಿವಿ ಸದಾನಂದ ಗೌಡ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಕುರಿತು ಬಿಜೆಪಿ ಹೈಕಮಾಂಡ್ ಭರವಸೆಯನ್ನು ನೀಡಿದೆ. ಇದೇ ಕಾರಣದಿಂದಲೇ ಡಿವಿಎಸ್ ಅವರು ಸಕ್ರೀಯ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರನ್ನು ಕೂಡ ರಾಜ್ಯಪಾಲರನ್ನಾಗಿ ಮಾಡುವ ಕುರಿತು ಬಿಜೆಪಿ ಹೈಕಮಾಂಡ್ ಭರವಸೆ ನೀಡಿತ್ತು.
ಇದನ್ನೂ ಓದಿ : ಕಾಂಗ್ರೆಸ್ ಟೀಕೆಯಿಂದ ಮುಜುಗರ: ವಿಪಕ್ಷ ನಾಯಕನಿಲ್ಲದೇ ಅಧಿವೇಶನದಿಂದ ದೂರ ಉಳಿಯಲು ಬಿಜೆಪಿ ಶಾಸಕರ ನಿರ್ಧಾರ
ಒಂದೊಮ್ಮೆ ಡಿವಿ ಸದಾನಂದ ಗೌಡ ಅವರು ಸಕ್ರೀಯ ರಾಜಕಾರಣಕ್ಕೆ ನಿವೃತ್ತಿಯನ್ನು ಘೋಷಣೆ ಮಾಡಿದ್ರೆ, ಅವರು ಪ್ರತಿನಿಧಿಸುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಅನ್ನೋ ಕುತೂಹಲ ವ್ಯಕ್ತವಾಗಿದೆ. ಡಿವಿಎಸ್ ಸ್ಪರ್ಧೆ ಮಾಡದೇ ಇದ್ರೆ ಆ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರು ಸ್ಪರ್ಧಿಸುವ ಸಾಧ್ಯತೆಯಿದೆ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆ ಅವರು ಈ ಬಾರಿ ಬೆಂಗಳೂರಿನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನಲಾಗುತ್ತಿದೆ. ಇದಕ್ಕೆ ಡಿವಿ ಸದಾನಂದ ಗೌಡ ಅವರು ನೀಡಿರುವ ಹೇಳಿಕೆ ಪುಷ್ಟಿಯನ್ನು ನೀಡುತ್ತಿದೆ.
Ex CM DV Sadananda Gowda Becoming Governor ? DVD has retired from active politics