Arkavathi trouble : ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಅರ್ಕಾವತಿ ಸಂಕಷ್ಟ: ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ ದೂರುದಾರ

ಬೆಂಗಳೂರು : (Arkavathi trouble) ಸದ್ಯ ಬಿಜೆಪಿಯ ಪಾಲಿಗೆ ತಲೆನೋವಾಗಿ ಪರಿಣಮಿಸಿರೋ ಮಾಜಿ ಸಿಎಂ ಸಿದ್ಧರಾಮಯ್ಯನವರಿಗೆ (Former CM Siddaramaiah) ಸಂಕಷ್ಡವೊಂದು ಎದುರಾಗಿದೆ. ಈ ಹಿಂದೆ ಸಿದ್ದರಾಮಯ್ಯನವರನ್ನು ಕಾಡಿದ್ದ ಅರ್ಕಾವತಿ ಡಿನೋಟಿಫಿಕೇಶನ್ ಹಗರಣ ಮತ್ತೆ ಸದ್ದು ಮಾಡಲಾರಂಭಿಸಿದೆ. ಈ ಪ್ರಕರಣದ ಕುರಿತು ದೂರು ನೀಡಿದ್ದ ಹೈಕೋರ್ಟ್ ನ್ಯಾಯವಾದಿ ನಟರಾಜ್ ಶರ್ಮಾ ಈಗ ಮತ್ತೊಮ್ಮೆ ಪ್ರಕರಣದ ಕುರಿತು ಕಾನೂನು ಸಮರಕ್ಕೆ ಸಿದ್ಧವಾಗಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ವಿರುದ್ಧ ಕಾನೂನಿಗೆ ವಿರುದ್ಧವಾಗಿ ಭೂಮಿಯನ್ನು ಮಂಜೂರು ಮಾಡಿದ ಆರೋಪ ಕೇಳಿ ಬಂದಿತ್ತು. ಅಲ್ಲದೇ ಈ ಪ್ರಕರಣದಲ್ಲಿ ಸಿದ್ಧರಾಮಯ್ಯ, ಡಿನೋಟಿಫಿಕೇಶನ್’ ಬದಲಿಗೆ ‘ರೀಡೂ’ ಶಬ್ದ ಬಳಕೆ ಮಾಡಿದ್ದಾರೆ ಎಂಬ ಆರೋಪವೂ ಇತ್ತು. ಈ ಪ್ರಕರಣದಲ್ಲಿ ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಅಕ್ರಮವಾಗಿದೆ ಎಂಬ ಆರೋಪದ ಹಿನ್ನೆಲೆ ನ್ಯಾ. ಕೆಂಪಣ್ಣ ಆಯೋಗ ರಚನೆ ಮಾಡಲಾಗಿತ್ತು. 2016ರಲ್ಲಿ ರಚನೆ ಯಾಗಿದ್ದ ನ್ಯಾ. ಕೆಂಪಣ್ಣ ಆಯೋಗ ಒಂದೂವರೆ ವರ್ಷ ತನಿಖೆ 2017ರ ಆಗಷ್ಟ್ 23ರಂದು ವರದಿ ಸಲ್ಲಿಸಿತ್ತು . ಆದರೆ ವರದಿ ಸಲ್ಲಿಕೆಯಾಗಿ 5 ವರ್ಷಗಳಾಗಿವೆ, ಆದರೆ ವರದಿ ಇನ್ನೂ ಅಂಗೀಕಾರ ಆಗಿಲ್ಲ.

ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೂಡ ಅರ್ಕಾವತಿ ಡಿನೋಟಿಫಿಕೇಶನ್ ಹಗರಣದ ವರದಿ ಮಂಡನೆ ಮಾಡಿರಲಿಲ್ಲ. ಈಗ ಬಿಜೆಪಿ ಸರ್ಕಾರವೂ ಕೂಡ ವರದಿ ಮಂಡಿಸಲು ಮುಂದಾಗುತ್ತಿಲ್ಲ . ಇದರ ಹಿಂದೆ ರಾಜಕೀಯ ಲೆಕ್ಕಾಚಾರವಿದೆ ಎಂದು ನಟರಾಜ ಶರ್ಮಾ ಆರೋಪಿಸುತ್ತಿದ್ದಾರೆ. ಈ ಬಗ್ಗೆ ವಿವರಣೆ ವಿಡಿರೋ ಶರ್ಮಾ ಈಗಾಗಲೇ ವರದಿ ಮಂಡನೆಗೆ ಒತ್ತಾಯಿಸಿ 5 ಬಾರಿ ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನು ಭೇಟಿ ಮಾಡಿ ಅರ್ಜಿ ಕೊಟ್ಟಿದ್ದೇನೆ. ಆದರೂ ವರದಿ ಮಂಡನೆ ಮಾಡಲು ಮುಂದಾಗದ ರಾಜ್ಯ ಬಿಜೆಪಿ ಸರ್ಕಾರ, ಸಿದ್ದರಾಮಯ್ಯರನ್ನು ರಕ್ಷಣೆ ಮಾಡುತ್ತಿದೆ ಎಂದಿದ್ದಾರೆ.

ಈಗ ತನಿಖಾ ವರದಿಯನ್ನು ಮಂಡಿಸುವಂತೆ ನ್ಯಾಯಾಲಯದ ಮೊರೆ ಹೋಗಲು ಹೈಕೋರ್ಟ್ ನ್ಯಾಯವಾದಿ ನಟರಾಜ ಶರ್ಮಾ ನಿರ್ಧರಿಸಿದ್ದಾರಂತೆ. ನ್ಯಾಯಾಲಯದಲ್ಲಿ ಮ್ಯಾಂಡಮಸ್ ಅರ್ಜಿ ಹಾಕಲು ದೂರುದಾರ ನಟರಾಜ ಶರ್ಮಾ ತೀರ್ಮಾನಿಸಿದ್ದು, ಮ್ಯಾಂಡಮಸ್ (ಆಜ್ಞೆ) ಅರ್ಜಿ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರಕ್ಕೆ ವರದಿ ಮಂಡಿಸಲು ಹೈಕೋರ್ಟ್ ಸೂಚಿಸುವ ಸಾಧ್ಯತೆ ಇದೆ ಎಂದು ನೀರಿಕ್ಷಿಸಲಾಗುತ್ತಿದೆ. ಒಂದೊಮ್ಮೆ ಹೈಕೋರ್ಟ್ ಈ ವರದಿ ಮಂಡನೆಗೆ ಸೂಚಿಸಿದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗೋದು ಖಚಿತ ಎನ್ನಲಾಗ್ತಿದೆ.

ಇದನ್ನೂ ಓದಿ : Man Lives Atop Palm Tree :ಪತ್ನಿ ಕಾಟದಿಂದ ಬೇಸತ್ತು ಮರವೇರಿ ಕುಳಿತ ಭೂಪ :ಖಾಸಗಿತನಕ್ಕೆ ಧಕ್ಕೆಯೆಂದ ಗ್ರಾಮಸ್ಥರು

ಇದನ್ನೂ ಓದಿ : clashes on live in relationship :ಲಿವ್​ ಇನ್​ ರಿಲೇಶನ್​ಶಿಪ್​​ನಲ್ಲಿ ಬಿರುಕು : ಸಂಗಾತಿಯಿಂದಲೇ ವ್ಯಕ್ತಿಗೆ ಶಾಕ್​ ಟ್ರೀಟ್​ಮೆಂಟ್​

Former CM Siddaramaiah again in Arkavathi trouble, Complainant decided to go to court

Comments are closed.