Hardik Pandya: ಜಡೇಜಾ-ಹಾರ್ದಿಕ್ Interview ;2018ರ ಆ “ಕರಾಳ” ದಿನವನ್ನು ನೆನೆದು ಭಾವುಕರಾದ ಪಾಂಡ್ಯ

ದುಬೈ: (Jadeja Hardik Interview) ಏಷ್ಯಾ ಕಪ್’ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಅಮೋಘ ಜಯ ತಂದುಕೊಟ್ಟಿರುವ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಪ್ರಿಯರ ಮನ ಗೆದ್ದಿದ್ದಾರೆ. ಕಳೆದ ವರ್ಷ ದುಬೈನಲ್ಲೇ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಕಳಪೆ ಪ್ರದರ್ಶನ ತೋರಿ ಕ್ರಿಕೆಟ್ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದ ಪಾಂಡ್ಯ ರನ್ನು ಈಗ ಅದೇ ಕ್ರಿಕೆಟ್ ಪ್ರಿಯರು ಮನಸಾರೆ ಹೊಗಳುತ್ತಿದ್ದಾರೆ. Hardik Pandya Ravindra Jadeja

ದುಬೈ ಅಂತಾರಾಷ್ಟ್ರೀ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಭಾರತಕ್ಕೆ ಪಾಂಡ್ಯ ಕೊನೆಯ ಓವರ್’ನಲ್ಲಿ ಗೆಲುವು ತಂದುಕೊಟ್ಟಿದ್ದರು. 148 ರನ್’ಗಳ ಗುರಿ ಬೆನ್ನಟ್ಟುವ ವೇಳೆ 89 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತವನ್ನು ಪಾಂಡ್ಯ ತಮ್ಮ ಸ್ಫೋಟಕ ಆಟದ ಮೂಲಕ ಗೆಲ್ಲಿಸಿದ್ದರು. 17 ಎಸೆತಗಳಲ್ಲಿ ಬಿರುಸಿನ 33 ರನ್ ಗಳಿಸಿದ್ದ ಪಾಂಡ್ಯ ಕೊನೆಯ 3 ಎಸೆತಗಳಲ್ಲಿ ಗೆಲುವಿಗೆ 6 ರನ್ ಬೇಕಿಸಿದ್ದ ಎಂ.ಎಸ್ ಧೋನಿ ಶೈಲಿಯಲ್ಲಿ ಸಿಕ್ಸರ್ ಸಿಡಿಸಿ ಭಾರತವನ್ನು ಗೆಲ್ಲಿಸಿದ್ದರು.

ಪಾಕ್ ವಿರುದ್ಧದ ಪಂದ್ಯದ ನಂತರ ಹಾರ್ದಿಕ್ ಪಾಂಡ್ಯ 2018ರಲ್ಲಿ ಇದೇ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಪಂದ್ಯವಾಡುತ್ತಿದ್ದಾಗ ಅನುಭವಿಸಿದ ನೋವಿನ ಬಗ್ಗೆ ರವೀಂದ್ರ ಜಡೇಜ ಜೊತೆ ಮಾತನಾಡಿದ್ದಾರೆ.

ಬಿಸಿಸಿಐ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆ ದಿನವನ್ನು ಪಾಂಡ್ಯ ಮೆಲುಕು ಹಾಕಿದ್ದಾರೆ. ಜಡೇಜರನ್ನು ಪಾಂಡ್ಯ ಸಂದರ್ಶನ ಮಾಡಿದ್ರೆ, ಪಾಂಡ್ಯಗೆ ಜಡೇಜಾ ಪ್ರಶ್ನೆಗಳನ್ನು ಕೇಳಿದ್ರು. ಈ ಸಂದರ್ಭದಲ್ಲಿ 2018ರಲ್ಲಿ ಇದೇ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಪಂದ್ಯವಾಡುತ್ತಿದ್ದಾಗ ಹಾರ್ದಿಕ್ ಪಾಂಡ್ಯ ಗಾಯದೊಂಡು ಸ್ಟ್ರೆಚರ್’ನಲ್ಲಿ ತೆರಳಿದ ಘಟನೆಯ ಬಗ್ಗೆ ರವೀಂದ್ರ ಜಡೇಜ ಪ್ರಶ್ನೆ ಕೇಳಿದರು. ಅದಕ್ಕೆ ಪಾಂಡ್ಯ ಕೊಟ್ಟ ಉತ್ತರ ಹೀಗಿತ್ತು.

“ನನಗೆ ಆ ಘಟನೆ ಇನ್ನೂ ನೆನಪಿದೆ. ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ನನಗೆ ಸಹಿಸಲಸಾಧ್ಯ ಬೆನ್ನು ನೋವು ಶುರುವಾಯಿತು. ನನ್ನನ್ನು ಇಲ್ಲಿಂದ ಅದೇ ಡ್ರೆಸ್ಸಿಂಗ್ ರೂಮ್’ಗೆ ಸ್ಟ್ರೆಚರ್’ನಲ್ಲಿ ಕರೆದೊಯ್ಯಲಾಯಿತು. ನನಗೀಗ ಏನೋ ಸಾಧಿಸಿದ್ದೇನೆ ಎಂಬ ಭಾವನೆ ಮೂಡುತ್ತಿದೆ. ಆ ದಿನ ಇಲ್ಲೇ ನಾನು ಗಾಯಗೊಂಡಿದ್ದೆ. 4 ವರ್ಷಗಳ ನಂತರ ಇದೇ ಮೈದಾನದಲ್ಲಿ ನನಗೆ ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಪಂದ್ಯವಾಡುವ ಅವಕಾಶ ಸಿಕ್ಕಿತು. ನನ್ನ ಕ್ರಿಕೆಟ್ ಪ್ರಯಾಣ ಸುಂದರವಾಗಿದೆ. ಆ ಪ್ರಯಾಣದ ಪ್ರತಿಫಲ ಎಲ್ಲರಿಗೂ ಕಾಣುತ್ತಿದೆ. ಆದರೆ ತೆರೆಯ ಹಿಂದೆ ನನ್ನ ಯಶಸ್ಸಿಗೆ ಕಾರಣರಾದವರು ತುಂಬಾ ಮಂದಿ ಇದ್ದಾರೆ. ಅವರೆಲ್ಲರಿಗೂ ನನ್ನ ಯಶಸ್ಸಿನ ಶ್ರೇಯವನ್ನು ನೀಡಲು ಬಯಸುತ್ತೇನೆ”.

  • ಹಾರ್ದಿಕ್ ಪಾಂಡ್ಯ, ಭಾರತ ಕ್ರಿಕೆಟ್ ತಂಡದ ಆಟಗಾರ.

ಇದನ್ನೂ ಓದಿ : Match Winner Hardik Pandya: 2018ರಲ್ಲಿ ಸ್ಟ್ರೆಚರ್, 2022ರಲ್ಲಿ ಫಿನಿಷರ್, ಮ್ಯಾಚ್ ವಿನ್ನರ್ ; ಭಲೇ ಹಾರ್ದಿಕ್ ಪಾಂಡ್ಯ

ಇದನ್ನೂ ಓದಿ :  ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್‌ : ‘ಜಿಯೋ 5G ಸೇವೆ’ ಘೋಷಿಸಿದ ಮುಕೇಶ್ ಅಂಬಾನಿ

Hardik Pandya Ravindra Jadeja Hardik Interview ; Pandya gets emotional remembering that dark day of 2018

Comments are closed.