Night Curfew Effect : ಕರಾವಳಿಯಲ್ಲಿ ನೈಟ್​ ಕರ್ಫ್ಯೂ ಪಾಲನೆಗೆ ಕಟ್ಟುನಿಟ್ಟಿನ ಆದೇಶ: ಯಕ್ಷಗಾನ, ಕಂಬಳಕ್ಕೂ ಹೊಸ ನಿಯಮ

Night Curfew Effect :ರಾಜ್ಯದಲ್ಲಿ ಓಮಿಕ್ರಾನ್​ ರೂಪಾಂತರಿಯ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದ 10 ದಿನಗಳ ಕಾಲ ಅಂದರೆ ಜನವರಿ 7ರವರೆಗೂ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ . ಪ್ರತಿ ದಿನ ರಾತ್ರಿ 10 ಗಂಟೆಯಿಂದ ಆರಂಭವಾಗುವ ನೈಟ್​ ಕರ್ಫ್ಯೂ ಬೆಳಗ್ಗೆ 5 ಗಂಟೆಯವರೆಗೆ ಇರಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ಇಂದಿನಿಂದಲೇ ನೈಟ್​ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನೈಟ್​ ಕರ್ಫ್ಯೂ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್​ ಕರ್ಫ್ಯೂ ಸಮಯದಲ್ಲಿ ಏನಿರುತ್ತೆ ಏನಿರಲ್ಲ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಮಂಗಳವಾರದಿಂದ ಜನವರಿ 7ರ ಬೆಳಗ್ಗೆ 5 ಗಂಟೆಯವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿ ಇರಲಿದೆ.ಅದರಲ್ಲೂ ಜನವರಿ 2ನೇ ತಾರೀಖಿನವರೆಗೆ ಕ್ಲಬ್, ರೆಸ್ಟಾರೆಂಟ್​, ಹೋಟೆಲ್​,ಪಬ್​ಗಳಲ್ಲಿ ಕೋವಿಡ್​ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ 50 ಪ್ರತಿಶತ ಮಂದಿಗೆ ಮಾತ್ರ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಇಂದಿನಿಂದ ಜನವರಿ 7ನೇ ತಾರೀಖಿನವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್​ ಇರಲಿದೆ. ಮದುವೆ, ಸಭೆ ಸಮಾರಂಭಗಳಲ್ಲಿ 300 ಜನರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು. ನೈಟ್​ ಕರ್ಫ್ಯೂ ಅವಧಿಯಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೇವೆ,ಖಾಲಿ ಸರಕು ವಾಹನಗಳ ಓಡಾಟ, ಇ ಕಾಮರ್ಸ್ ಕಂಪನಿಗಳು , ಹೋಮ್​ ಡೆಲಿವರಿ,ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಕೈಗಾರಿಕೆಗಳು, ಬಸ್​ ಸೇರಿದಂತೆ ವಿವಿಧ ಸಾರಿಗೆ ಸೇವೆಗಳಿಗೆ ಅವಕಾಶ ನೀಡಲಾಗಿದೆ ಎಂದು ಕೂರ್ಮರಾವ್​ ಸ್ಪಷ್ಟಪಡಿಸಿದ್ದಾರೆ.

ಕಂಬಳ, ಯಕ್ಷಗಾನಕ್ಕೂ ಅನ್ವಯಿಸಲಿದೆ ನೈಟ್​ ಕರ್ಫ್ಯೂ ನಿಯಮ :

ಇತ್ತ ಮಂಗಳೂರಿನಲ್ಲಿ ನೈಟ್​ ಕರ್ಫ್ಯೂ ವಿಚಾರವಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯಕ್ಷಗಾನ ಹಾಗೂ ಕಂಬಳಕ್ಕೂ ನೈಟ್​ ಕರ್ಫ್ಯೂ ನಿಯಮ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಕಂಬಳ ಹಾಗೂ ಯಕ್ಷಗಾನದಂತಹ ಕರಾವಳಿಯ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ರಾತ್ರಿ 10 ಗಂಟೆಯ ಒಳಗಾಗಿ ಮುಗಿಸಬೇಕು. ಇದಕ್ಕೆ ಯಾವುದೇ ರೀತಿಯ ವಿನಾಯ್ತಿ ಇರೋದಿಲ್ಲ.ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೈಟ್​ ಕರ್ಫ್ಯೂ ನಿಯಮಾವಳಿಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ :Outrage BJP Government : ಹೋಂ ಸ್ಟೇ, ರೆಸಾರ್ಟ್ ಗೆ ನಿರ್ಬಂಧ: ಬಿಜೆಪಿ ಕಾರ್ಯಕಾರಿಣಿಗೆ ಚಾಲನೆ: ಸರ್ಕಾರದ ವಿರುದ್ಧ ಜನರ ಆಕ್ರೋಶ

ಇದನ್ನೂ ಓದಿ :Ghar Wapsi: ಘರ್​ ವಾಪಸಿ ಮಾಡಿದ ಒಂದೇ ಕುಟುಂಬದ 9 ಮಂದಿ: ಹಿಂದೂ ಧರ್ಮಕ್ಕೆ ಮರುಮತಾಂತರ

Udupi and Dakshin kannada DC statement about night curfew Effect

Comments are closed.