ದಮ್ಮು ಕಟ್ಟುತ್ತದೆ ಎಂದ ಬಂಟ್ವಾಳ್‌, ಇಲ್ಲ ಎಂದ ಕಾಂಗ್ರೆಸ್‌ : ರಮಾನಾಥ ರೈ ಹಾಗೂ ಹರಿಕೃಷ್ಣ ಬಂಟ್ವಾಳ್‌ ಮಾತಿನ ಸಮರ

ಬಂಟ್ವಾಳ : (Harikrishna Bantwal vs Ramanath Rai ) ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಈ ನಡುವಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ನಡುವಿನ ಮಾತಿನ ಸಮರಕ್ಕೂ ವೇದಿಕೆಯಾಗುತ್ತಿದೆ. ಈ ನಡುವಲ್ಲೇ ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕ ಬಿ.ರಮಾನಾಥ ರೈ ಹಾಗೂ ಹರಿಕೃಷ್ಣ ಬಂಟ್ವಾಳ್‌ ನಡುವೆ ದಮ್ಮಿನ ವಾರ್‌ ಶುರುವಾಗಿದೆ.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರು, ಮಾಜಿ ಸಚಿವ ರಮನಾಥ ರೈ ಅವರಿಗೆ 71 ವರ್ಷ ಪ್ರಾಯವಾಗಿದೆ. ಅವರಿಗೆ ಉಸಿರಾಡಲು ಕಷ್ಟವಾಗುತ್ತದೆ. ದಮ್ಮು ಕಟ್ಟುತ್ತದೆ. ನಡೆದಾಡಲು ಸಾಧ್ಯವಾಗುತ್ತಿಲ್ಲ. ಆ ಕಾರಣದಿಂದ ಅವರು ಕಾಂಗ್ರೆಸ್ ಯುವ ನಾಯಕರಿಗೆ ಸ್ಥಾನವನ್ನು ಬಿಟ್ಟು ಕೊಡಬೇಕೆಂದು ಸವಾಲು ಹಾಕಿದ್ದರು. ನಡೆದಾಡಲು ಸಾಧ್ಯವಿಲ್ಲದ ಇವರು ಇನ್ನೂ ಆಸ್ಥಾನದಲ್ಲಿ ಮುಂದುವರೆಯುತ್ತಿರುವುದು ಅವರು ನೈಜ್ಯ ಕಾಂಗ್ರೆಸ್ ಅಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದರು.

ಹರಿಕೃಷ್ಣ ಬಂಟ್ವಾಳ್‌ ಆರೋಪದ ಬೆನ್ನಲ್ಲೇ ರಮಾನಾಥ ರೈ (Harikrishna Bantwal vs Ramanath Rai ) ಬೆಂಬಲಿಗರು ಕೌಟಂರ್‌ ಕೊಡುವ ಕಾರ್ಯವನ್ನು ಮಾಡಿದ್ದಾರೆ. ರಮಾನಾಥ ರೈ ಅವರು ನಿತ್ಯವೂ ಯೋಗಾಸನ ಮಾಡುತ್ತಿದ್ದಾರೆ. ಅವರಿಗೆ ಉಸಿರಾಡಲು ಕಷ್ಟವಾಗುತ್ತಿದೆ ಅನ್ನೋದು ಸುಳ್ಳು. ಅವರ ಆರೋಗ್ಯ ಚೆನ್ನಾಗಿದೆ. ಅವರಿಗೆ ದಮ್ಮು ಕಟ್ಟುತ್ತದೆ ಎಂಬ ಆರೋಪ ಸುಳ್ಳು. ಹರಿಕೃಷ್ಣ ಬಂಟ್ವಾಳ್‌ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ದಮ್ಮು ಕಟ್ಟುವ ಹೇಳಿಕೆ ಕರಾವಳಿ ಭಾಗದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಅದ್ರಲ್ಲೂ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಹರಿಕೃಷ್ಣ ಬಂಟ್ವಾಳ್‌ ಪಕ್ಷದ ಮೇಲೆ ಮುನಿಸಿಕೊಂಡು ಬಿಜೆಪಿ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್‌ ನಾಯಕರ ವಿರುದ್ದ ಬಂಟ್ವಾಳ್‌ ಆರಂಭದಿಂದಲೂ ಸಮರ ಸಾರುತ್ತಿದ್ದಾರೆ. ಇದೀಗ ಬಂಟ್ವಾಳ ಮಾಜಿ ಶಾಸಕ ರಮಾನಾಥ್‌ ರೈ ವಿರುದ್ದ ತಿರುಗಿ ಬಿದ್ದಿದ್ದಾರೆ. ನಾರಾಯಣಗುರುಗಳ ಹೆಸರಲ್ಲಿ ಇದೀಗ ರೈ ರಾಜಕೀಯ ಮಾಡಲು ಹೊರಟಿದ್ದಾರೆ ಅಂತಾ ಆರೋಪಿಸಿದ್ದಾರೆ. ಒಟ್ಟಿನಲ್ಲಿ ಹರಿಕೃಷ್ಣ ಬಂಟ್ವಾಳ್‌ ಹಾಗೂ ರಮಾನಾಥ ರೈ ಅವರ ನಡುವಿನ ಮಾತಿನ ಯುದ್ದ ಇನ್ನಷ್ಟು ಜೋರಾಗುವ ಸಾಧ್ಯತೆಯಿದ್ದು, ರಾಜಕೀಯ ಪಡಸಾಲೆಯಲ್ಲಿ ಬಾರೀ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ : Bigg Boss Kannada OTT Season:”ಬಿಗ್‌ ಬಾಸ್‌ ಕನ್ನಡ ಓಟಿಟಿ ಸೀಸನ್‌ 1″ರ ವಿನ್ನರ್ ರೂಪೇಶ್‌ ಶೆಟ್ಟಿ: ಅಭಿಮಾನಿಗಳ ಸಂಭ್ರಮಾಚರಣೆ

ಇದನ್ನೂ ಓದಿ : Namibian cheetahs :ಬರೋಬ್ಬರಿ 70 ವರ್ಷಗಳ ಬಳಿಕ ಭಾರತಕ್ಕೆ ಮತ್ತೆ ಮರಳಿದ ಚೀತಾ : ಐತಿಹಾಸಿಕ ದಿನವಾಗಿ ಬದಲಾಯ್ತು ಮೋದಿ ಬರ್ತಡೇ

Harikrishna Bantwal vs Ramanath Rai Talk War in Mangalore

Comments are closed.