Bommai Cabinate : ನೂತನ 29 ಸಚಿವರ ಪ್ರಮಾಣ ವಚನ : ಯಾರಿಗೆಲ್ಲಾ ಸಿಕ್ಕಿದೆ ಸಚಿವ ಸ್ಥಾನ

ಬೆಂಗಳೂರು : ರಾಜ್ಯದಲ್ಲಿ ನೂತನ ಸಚಿವ ಸಂಪುಟ ಇಂದೇ ಜಾರಿಗೆ ಬರಲಿದ್ದು, ಮಧ್ಯಾಹ್ನ 2.15ಕ್ಕೆ ರಾಜ್ಯದಲ್ಲಿ 29 ಮಂದಿ ಶಾಸಕರು ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಸಂಪುಟದಲ್ಲಿ 7 ಒಕ್ಕಲಿಗರು, 8 ಲಿಂಗಾಯಿತ, 7 ಹಿಂದುಳಿದ ವರ್ಷದಿಂದ 3, ದಲಿತ 1 ಎಸ್‌ಟಿ ಹಾಗೂ ಮಹಿಳಾ ಶಾಸಕಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಈ ಬಾರಿ ಸಾಮಾಜಿಕ ನ್ಯಾಯದ ಜೊತೆಗೆ ಜನಪರ ಆಡಳಿತ ನೀಡುವ ಹಿನ್ನೆಲೆಯಲ್ಲಿ ನೂತನ ಸಚಿವ ಸಂಪುಟ ರಚನೆ ಮಾಡಲಾಗಿದೆ. ಮುಂಬರುವ ಚುನಾವಣೆಯ ಹಿನ್ನೆಲೆ ಸಚಿವರಿಗೆ ಹೊಣೆಗಾರಿಕೆಯನ್ನು ನೀಡಲಾಗುತ್ತಿದೆ.

ರಾಷ್ಟ್ರೀಯ ಅಧ್ಯಕ್ಷರು, ಹೈಕಮಾಂಡ್‌ ನಾಯಕರ ಚಿಂತನೆಯ ಹಿನ್ನೆಲೆಯಲ್ಲಿ ಈ ಬಾರಿಯ ಸಂಪುಟದಲ್ಲಿ ಡಿಸಿಎಂ ಹುದ್ದೆ ರಚನೆ ಮಾಡುವುದಿಲ್ಲ. ಅಲ್ಲದೇ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟ ಸೇರ್ಪಡೆಯ ಕುರಿತಂತೆ ಈಗಾಗಲೇ ಹೈಕಮಾಂಡ್‌ ನಾಯಕರು ಯಡಿಯೂರಪ್ಪ ಅವರ ಜೊತೆ ಮಾತನಾಡಿದ್ದಾರೆ. ನಾನು ಕಳುಹಿಸಿದ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರು ಇರಲಿಲ್ಲ ಎಂದಿದ್ದಾರೆ.

ಸಂಪುಟ ರಚನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ ಮೋದಿ ನಾಯಕತ್ವ, ಅಮಿತ್‌ ಶಾ ಅವರ ಮಾರ್ಗದರ್ಶನ, ನಡ್ಡಾ ಅವರ ಚತುರತೆಯ ಜೊತೆಗೆ ಯಡಿಯೂರಪ್ಪ ಅವರ ಆಶೀರ್ವಾದ ಸಚಿವ ಸಂಪುಟದ ಮೇಲಿದೆ ಎಂದಿದ್ದಾರೆ.

Comments are closed.