ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಡಿಮ್ಯಾಂಡ್….! ಅಡುಗೆ ತಯಾರಿಸಿ ಕಳುಹಿಸಿದ ಸುದೀಪ್…!!

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ನಡೆದಿದ್ದು, ಕೊನೆಯವಾರದ ಆಟ ಜೋರಾಗಿ ನಡೆದಿದೆ. ಈ ಮಧ್ಯೆ ಪ್ರತಿ ವರ್ಷದಂತೆ ಈ ವರ್ಷವೂ ಕಿಚ್ಚ ಸುದೀಪ್ ಬಿಗ್ ಬಾಸ್ ಮಂದಿಗಾಗಿ ತಾವೇ ಅಡುಗೆ ತಯಾರಿಸಿ ಕಳುಹಿಸಿದ್ದಾರೆ.

ಪ್ರತಿ ವರ್ಷವೂ ಅಂತಿಮ ಹಂತದಲ್ಲಿ ಕಣದಲ್ಲಿರೋ ಸ್ಪರ್ಧಿಗಳ ಆಸೆಗಳನ್ನು ಬಿಗ್ ಬಾಸ್ ಈಡೇರಿಸುತ್ತಾರೆ. ಈ ವರ್ಷವೂ ಸುದೀಪ್ ಸ್ಪರ್ಧಿಗಳ ಬೇಡಿಕೆಗೆ ಯೆಸ್ ಎಂದಿದ್ದು, ಅರವಿಂದ್ ಬೇಡಿಕೆಯಂತೆ ಅವರ ರೇಸ್ ಬೈಕ್ ನ್ನು ಲಿವಿಂಗ್ ಏರಿಯಾಗೆ ತರಲಾಗಿತ್ತು.

ಇನ್ನು ದಿವ್ಯ ಉರುಡುಗ ಬೇಡಿಕೆಯಂತೆ ಸುದೀಪ್ ಮನೆಯ ಎಲ್ಲ ಸದಸ್ಯರಿಗಾಗಿ ಅಡುಗೆ ಮಾಡಿದ್ದಾರೆ. ಸುದೀಪ್ ಸ್ವತಃ ಅಡಿಗೆ ಮಾಡಿ ಬಿಗ್ ಬಾಸ್ ಮನೆಗೆ ಕಳುಹಿಸಿಕೊಂಡ ಸಂಗತಿಯನ್ನು ವಾಹಿನಿ ಪ್ರೋಮೋದಲ್ಲಿ ಹಂಚಿಕೊಂಡಿದೆ.

ನಿಮ್ಮ ಆಸೆಯಂತೆ ಅಡುಗೆಯನ್ನು ಕಳುಹಿಸಲಾಗಿದೆ ಎಂದು ಸ್ವತಃ ಸುದೀಪ್ ಹೇಳಿದ ಸಾಲುಗಳು ಬಿಗ್ ಬಾಸ್ ಮನೆಯಲ್ಲಿ ಕೇಳಿದೆ. ಮಾತ್ರವಲ್ಲ ದಿವ್ಯಾ ಉರುಡುಗ ಅವರಿಗೆ ಸುದೀಪ್ ಸಂದೇಶವೊಂದನ್ನು ಕಳುಹಿಸಿದ್ದಾರೆ.

ಡಿಯು ಅವರೇ ಕೇಳಿದ್ರಿ ಊಟ.. ಪ್ರೀತಿಯಿಂದ ತಿನ್ನುತ್ತ ಸ್ವಲ್ಪ ಹೊತ್ತಾದರೂ ಬಿಡಿ ಅರವಿಂದ್ ಮೇಲಿನ ನೋಟ ಎಂದು ಸುದೀಪ್ ಸಂದೇಶ ಕಳುಹಿಸಿದ್ದಾರೆ. ಇನ್ನು ಸುದೀಪ್ ಕೈ ಅಡುಗೆ ಸವಿದ ಮನೆಯ ಸದಸ್ಯರು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ.

Comments are closed.