ರಾಜ್ಯದಲ್ಲಿ ಶುರು ಫಾರಿನ್ ಟ್ರಿಪ್ ಪಾಲಿಟಿಕ್ಸ್ : ಆಸ್ಟ್ರೇಲಿಯಾಗೆ ಹಾರಲು ಸಜ್ಜಾದ ಸಿದ್ದು ಬಣ
ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಸ್ತಾಂತರದ ಪರ – ವಿರೋಧದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕರು ಫಾರೀನ್ ಪಾಲಿಟಿಕ್ಸ್ಗೆ ಮುಂದಡಿ ಇಟ್ಟಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಸಿಎಂ ಸಿದ್ದರಾಮಯ್ಯ ಆಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.
ಕೃಷಿ ಇಲಾಖೆಯ ಅಧ್ಯಯನ ಪ್ರವಾಸ ಎಂದು ಕಾಂಗ್ರೆಸ್ ನಾಯಕರ ವಿದೇಶಿ ಪ್ರವಾಸಕ್ಕೆ ಸಬೂಬು ನೀಡಲಾಗಿತ್ತು. ಆದರೆ ಈ ವಿಚಾರವಾಗಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ ನೀಡಿದ್ದು, ಯಾವ ಕೃಷಿ ಪ್ರವಾಸವೂ ಇಲ್ಲ, ನಮ್ಮ ಸ್ವಂತ ಖರ್ಚಿನಲ್ಲಿ ಆಸ್ಟ್ರೇಲಿಯಾ ತೆರಳುತ್ತಿದ್ದೇವೆ. ಇದು ಯಾವುಧೇ ರಾಜಕೀಯ ಪ್ರವಾಸವೂ ಅಲ್ಲ. ಪ್ರವಾಸಕ್ಕೆ ಹೋಗಲು ನಮಗೆ ಮುಖ್ಯಮಂತ್ರಿಗಳಾಗಲಿ, ಉಪಮುಖ್ಯಮಂತ್ರಿಗಳಾಗಲಿ ಸಲಹೆ ನೀಡಿಲ್ಲ. ನಾವು ಸಮಾನ ಮನಸ್ಕರು ಒಂದಾಗಿ ವಿದೇಶಿ ಪ್ರವಾಸ ಆಯೋಜಿಸಿದ್ದೆವು ಎಂದಿದ್ದಾರೆ.
ವಿದೇಶಿ ಪ್ರವಾಸಕ್ಕೆ ಹೊರಟಿರುವವರ ಪೈಕಿ ಕೆಲವು ಎಂಎಲ್ಸಿಗಳೂ ಇದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಬಣದಲ್ಲಿರುವ ಇನ್ನೂ ಕೆಲವು ನಾಯಕರು ಹೈಕಮಾಂಡ್ಗೆ ಹೆದರಿ ವಿದೇಶಿ ಪ್ರವಾಸದಿಂದ ಹೊರಗಳುದಿದ್ದಾರೆ.ಇಂದು ಆಸ್ಟ್ರೇಲಿಯಾಗೆ ಪ್ರಯಾಣಿಸುತ್ತಿರುವ ಕಾಂಗ್ರೆಸ್ ನಾಯಕರು ಮಾರ್ಚ್ 1ರಂದು ಬೆಂಗಳೂರಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಚಿಕ್ಕಮಗಳೂರು: ಮನೆ ಮೇಲೆ ಕಲ್ಲು ತೂರಾಟ ಪ್ರಕರಣ, ಬಜರಂಗದಳ-SDPI ಮುಖಾಮುಖಿ; ಬಿಗುವಿನ ವಾತಾವರಣ
ಸಿಎಂ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಡಿಸಿಎಂ ಡಿ.ಕೆ ಶಿವಕುಮಾರ್ರನ್ನು ಕಟ್ಟಿಹಾಕಲು ಸಿಎಂ ಸಿದ್ದರಾಮಯ್ಯ ಆಪ್ತಬಣಗಳು ಮಾಡಿರುವ ಮಾಸ್ಟರ್ ಪ್ಲಾನ್ ಇದು ಎನ್ನಲಾಗ್ತಿದೆ. ಬಜೆಟ್ ಅಧಿವೇಶನದ ಆರಂಭದವರೆಗೂ ವಿದೇಶದಲ್ಲಿಯೇ ಇರುವ ಮೂಲಕ ಈ ತಿಂಗಳಲ್ಲಿ ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ವಿಚಾರವೇ ಬಾರದಂತೆ ನೋಡಿಕೊಳ್ಳುವುದು ಇವರ ಉದ್ದೇಶವಾಗಿದೆ ಎನ್ನಲಾಗಿದೆ.



