ಮೈಸೂರು ಪೇಟ, ಬೃಹತ್‌ ಹಾರ, ಮೈ ಮೇಲೆ ಶಾಲು : ತಮ್ಮ ಆದೇಶವನ್ನೇ ಉಲ್ಲಂಘಿಸಿದ ಸಿಎಂ ಬಸವರಾಜ್‌ ಬೊಮ್ಮಾಯಿ !

ಬೆಂಗಳೂರು : ಸರಕಾರಿ ಇಲಾಖೆ ನಡೆಸುವ ಸರಕಾರಿ ಕಾರ್ಯಕ್ರಮಗಳಲ್ಲಿ ಹಾರ, ಹಣ್ಣು ಹಂಪಲು, ದುಬಾರಿ ಉಡುಗೊರೆಗಳಿಗೆ ಬ್ರೇಕ್‌ ಹಾಕುವ ಸಲುವಾಗಿ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಆದೇಶವನ್ನು ಹೊರಡಿಸಿದ್ದರು. ಆದ್ರೀಗ ಆದೇಶವನ್ನು ತಾವೇ ಉಲ್ಲಂಘಿಸಿದ್ದಾರೆ.

ವಿಧಾನಸೌಧದಲ್ಲಿದ ಬ್ಯಾಂಕ್ವೇಟ್‌ ಹಾಲ್‌ನಲ್ಲಿ ನಡೆದ ರೈತ ವಿದ್ಯಾ ನಿಧಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ರೇಷ್ಮೆ ಗೂಡುಗಳಿಂದ ತಯಾರಾದ ಬೃಹತ್ ಹಾರ, ಮೈಸೂರು ಪೇಟ, ಶಾಲು, ಬೆಳ್ಳಿಯ ಸ್ಮರಣಿಕೆಯನ್ನು ಸ್ವೀಕರಿಸಿದ್ದಾರೆ. ಸಿಎಂ ಆದೇಶ ಉಲ್ಲಂಘನೆ ಮಾಡಿರೋದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ಸಿಎಂ ಬೊಮ್ಮಾಯಿ ಅವರು ಸರಕಾರಿ ಕಾರ್ಯಕ್ರಮದಲ್ಲಿ ಹಾರ, ತುರಾಯಿ, ದುಬಾರಿ ಬೆಲೆಯ ಉಡುಗೊರೆ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಈ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸಿಎಂ ತಮ್ಮ ಆದೇಶವನ್ನೇ ತಾವು ಮರೆತಿದ್ದಾರೆ. ಅಲ್ಲದೇ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ಥೋಮರ್, ಶೋಭಾ ಕರಂದ್ಲಾಜೆ ಅವರಿಂದ ಸಿಎಂ ಸನ್ಮಾನ ಸ್ವೀಕರಿಸಿದರು.

(Karnataka cm Basavaraj Bommai Violation Order)

Comments are closed.