Apartment Collapse : ಬೆಂಗಳೂರಲ್ಲಿ ಕುಸಿದ ಐದು ಅಂತಸ್ತಿನ ಅಪಾರ್ಟ್‌ಮೆಂಟ್‌ : ತಪ್ಪಿದ ಭಾರೀ ದುರಂತ

ಬೆಂಗಳೂರು : ಕಳೆದೊಂದು ವಾರದ ಹಿಂದೆಯಷ್ಟೇ ವಸತಿ ಕಟ್ಟಡಗಳು ಕುಸಿದ ಕಹಿನೆನಪು ಮಾಸುವ ಮುನ್ನವೇ ಬೆಂಗಳೂರಲ್ಲಿ ಮತ್ತೊಂದು ಐದು ಅಂತಸ್ತಿನ ಕಟ್ಟಡ ಕುಸಿತವಾಗಿದೆ. ಕಟ್ಟಡ ಕುಸಿಯುತ್ತಿದ್ದಂತೆಯೇ ಜನರು ಹೊರಗೆ ಓಡಿಬಂದಿದ್ದರಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬೆಂಗಳೂರಿನ ಕಸ್ತೂರಿ ನಗರದ 2ನೇ ಅಡ್ಡರಸ್ತೆಯಲ್ಲಿರುವ ವಿ.ಜೆ. ಇನ್ಫಿನಿಟಿ ಅಪಾರ್ಟ್‌ಮೆಂಟ್‌ ಸಮುಚ್ಚಯ ಕುಸಿದು ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಕುಸಿದ ಕಟ್ಟದ ಅವಶೇಷಗಳ ಅಡಿಯಲ್ಲಿ ಯಾರಾದ್ರೂ ಸಿಲುಕಿದ್ದಾರಾ ಅನ್ನೋ ಬಗ್ಗೆಯೂ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ : ಬೆಂಗಳೂರಿನ ಲಕ್ಕಸಂದ್ರದಲ್ಲಿ ದುರಂತ : 3 ಅಂತಸ್ತಿನ ಕಟ್ಟಡ ಕುಸಿತ

ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಹಲವು ಫ್ಲ್ಯಾಟ್‌ಗಳಲ್ಲಿ ಜನರು ವಾಸವಿದ್ದರು. ಹಲವು ದಿನಗಳ ಹಿಂದೆಯೇ ಅಪಾರ್ಟ್‌ಮೆಂಟ್‌ ಕಟ್ಟಡ ವಾಲಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು, ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತಿಯನ್ನು ನೀಡಿದ್ದರು. ಇದರ ಬೆನ್ನಲ್ಲೇ ಕೆಲ ದಿನಗಳ ಹಿಂದಷ್ಟೇ ಮುಂಜಾಗ್ರತಾ ಕ್ರಮವಾಗಿ ನಿವಾಸಿಗಳು ಸ್ಥಳಾಂತರ ಮಾಡಲಾಗಿತ್ತು ಎನ್ನಲಾಗುತ್ತಿದೆ.

ಈ ಅಪಾರ್ಟ್‌ಮೆಂಟ್‌ನಲ್ಲಿ ಎಂಟು ಮನೆಗಳಿದ್ದು ಈ ಪೈಕಿ ಮೂರು ಮನೆಗಳಲ್ಲಿ ಜನರು ವಾಸವಾಗಿದ್ದರು. ಆದರೆ ಕಟ್ಟಡ ಕುಸಿತವಾಗುತ್ತಿದ್ದಂತೆಯೇ ಮನೆಯಲ್ಲಿದ್ದವರು ಹಾಗೂ ಅಕ್ಕಪಕ್ಕದ ಜನರು ಹೊರಗಡೆ ಓಡಿ ಬಂದಿದ್ದಾರೆ. ಇದರಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗುತ್ತಿದೆ. ಇನ್ನು ಅಪಾರ್ಟ್‌ಮೆಂಟ್‌ ಕಾಮಗಾರಿ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅನುಮತಿ ಪತ್ರವನ್ನು ನೀಡಿರಲಿಲ್ಲ. ಆದರೂ ಕೂಡ ಕಟ್ಟಡ ಮಾಲೀಕರು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿದ್ದರು. ಅಲ್ಲದೇ ಕೆಲವು ಕುಟುಂಬಗಳಿಗೆ ಬಾಡಿಗೆಗೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಕಟ್ಟಡದ ಮಾಲೀಕರ ವಿರುದ್ದ ಕ್ರಿಮಿನಲ್‌ ಕೇಸ್‌ ದಾಖಲಿಸಲು ಮುಂದಾಗಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿದ್ದು ಮೊಕ್ಕಾಂ ಹೂಡುತ್ತಿದ್ದಾರೆ.

ಇದನ್ನೂ ಓದಿ : ಅಪಾಯದಲ್ಲಿದೆ 3 ಅಂತಸ್ತಿನ ಕಟ್ಟಡ : ವಾಲಿದ ಕಟ್ಟಡ ತೆರವಿಗೆ BBMP ಸೂಚನೆ

( 5 flor Apartment Collapse Kasturi Nagar Bangalore )

Comments are closed.