SIMS Shivamogga Recruitment 2021 : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

SIMS Shivamogga Recruitment 2021 : ಶಿವಮೊಗ್ಗ : ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.


ಸೈಂಟಿಸ್ಟ್​ ಬಿ, ಲ್ಯಾಬ್​ ಟೆಕ್ನಿಷಿಯನ್​, ಡಿಇಓ ಹಾಗೂ ಮಲ್ಟಿ ಟಾಸ್ಕಿಂಗ್​ ಹುದ್ದೆಗಳಿಗೆ ಎಸ್​ಐಎಂಎಸ್​ನಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 2022ರ ಜನವರಿ 15 ಕೊನೆಯ ದಿನಾಂಕವಾಗಿದೆ. ಅಧಿಕೃತ ವೆಬ್​ಸೈಟ್​​ನಲ್ಲಿರುವ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿ ಅಲ್ಲಿ ವಿವರಗಳನ್ನು ಭರ್ತಿ ಮಾಡಿ ಕೇಳಲಾದ ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕದ ಒಳಗಾಗಿ ಅರ್ಜಿಯನ್ನು ಕಚೇರಿಗೆ ತಲುಪಿಸುವಂತೆ ಸೂಚನೆ ನೀಡಲಾಗಿದೆ.


ಖಾಲಿ ಇರುವ ಹುದ್ದೆಗಳ ವಿವರ:
ಡಾಟಾ ಎಂಟ್ರಿ ಆಪರೇಟರ್ – 1 ಹುದ್ದೆ
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 1 ಹುದ್ದೆ
ಸೈಂಟಿಸ್ಟ್-ಬಿ – 1 ಹುದ್ದೆ
ಲ್ಯಾಬ್ ಟೆಕ್ನೀಶಿಯನ್ – 1 ಹುದ್ದೆ
ಒಟ್ಟು 4 ಹುದ್ದೆಗಳು


ವಿದ್ಯಾರ್ಹತೆ : ಸೈಂಟಿಸ್ಟ್​ ಬಿ, ಲ್ಯಾಬ್​ ಟೆಕ್ನಿಷಿಯನ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಎಂಡಿ/ಎಂಎಸ್/ಡಿಎನ್‌ಬಿ/ಎಂಡಿಎಸ್/ಎಂ.ವಿ.ಎಸ್ಸಿ ಮತ್ತು ಎಹೆಚ್, ಬಿ.ಎಸ್ಸಿ, ಪದವಿ, ಮೆಟ್ರಿಕ್ ಪದವಿಯನ್ನು ಪಡೆದಿರಬೇಕು ಎಂದು ಸೂಚಿಸಲಾಗಿದೆ.


ವಯಸ್ಸಿನ ಮಿತಿ :
ಸೈಂಟಿಸ್ಟ್-ಬಿ, ಲ್ಯಾಬ್ ಟೆಕ್ನೀಶಿಯನ್, ಡಿಇಒ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 35 ವರ್ಷ ಒಳಗಿನವರಾಗಿರಬೇಕು. ಆಯ್ದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.


ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಾಹಿತಿ ನೀಡಿದೆ.


ವೇತನ ಶ್ರೇಣಿ
ಸೈಂಟಿಸ್ಟ್​ ಬಿ – 56,000 ರೂ,(ಮಾಸಿಕ)
ಲ್ಯಾಬ್​ ಟೆಕ್ನಿಷಿಯನ್​ – 20,000 ರೂ.(ಮಾಸಿಕ)
ಡಿಇಓ – 20,000 ರೂ((ಮಾಸಿಕ)
ಮಲ್ಟಿ ಟಾಸ್ಕಿಂಗ್​ ಸ್ಟಾಫ್​ – 18,000 ರೂ.(ಮಾಸಿಕ)


ಅರ್ಜಿ ಶುಲ್ಕ :
ಸಂಬಂಧಪಟ್ಟ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1000 ರೂಪಾಯಿಗಳನ್ನು ಡಿಡಿ ಮೂಲಕ ಪಾವತಿ ಮಾಡುವಂತೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೇಳಿದೆ.

SIIMS shivmogga recruitment for various posts

ಇದನ್ನು ಓದಿ : KMF BAMUL Recruitment: ಇಲ್ಲಿದೆ ಉದ್ಯೋಗಾವಕಾಶ, 97,100 ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Job Alert in Flipkart Bengaluru: ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗಾವಕಾಶ; ಜವಾಬ್ದಾರಿಯು ಹುದ್ದೆ, ಓರ್ವ ಅಭ್ಯರ್ಥಿಗೆ ಮಾತ್ರ ಅವಕಾಶ

Comments are closed.