BC Nagesh : ಸಚಿವರ ನಿವಾಸಕ್ಕೆ NSUI ಮುತ್ತಿಗೆ : ಬೆಂಕಿ ಹಾಕುವ ಹುನ್ನಾರವಿತ್ತು ಎಂದ ಗೃಹ ಸಚಿವ

ಬೆಂಗಳೂರು : ಪಠ್ಯಕ್ರಮ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸದ ಮೇಲೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಅಫ್ ಇಂಡಿಯಾ ಸಂಘಟನೆ ಪದಾಧಿಕಾರಿಗಳು ನಡೆಸಿದ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಬಿ.ಸಿ.ನಾಗೇಶ್ (BC Nagesh) ನಿವಾಸದ ಮೇಲಿನ ಮುತ್ತಿಗೆ ಯತ್ನವನ್ನು ರಾಜ್ಯ ಗೃಹ ಸಚಿವರು ಇದು ನಾಗೇಶ್ ನಿವಾಸಕ್ಕೆ ಬೆಂಕಿ ಹಚ್ಚುವ ಯತ್ನ ಎಂದಿದ್ದಲ್ಲದೇ, ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ತುಮಕೂರಿನ ತಿಪಟೂರಿನಲ್ಲಿರೋ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸಕ್ಕೆ ಎನ್ ಎಸ್ ಯುಆಯ್ ಮತ್ತಿಗೆ ಪ್ರಯತ್ನ ನಡೆಸಿತ್ತು. ಈ ವೇಳೆ ಪ್ರತಿಭಟನಾಕಾರರು ಆರ್.ಎಸ್.ಎಸ್ ಚಡ್ಡಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಪೊಲೀಸರು 15 ಜನರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಈ ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬಿ.ಸಿ.ನಾಗೇಶ್ (BC Nagesh) ನಿವಾಸಕ್ಕೆ ಸ್ವತಃ ಹೋಂ ಮಿನಿಸ್ಟರ್ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರಗ ಜ್ಞಾನೇಂದ್ರ, ಇಲ್ಲಿ ತೀವ್ರ ಸ್ವರೂಪದ ಘಟನೆಗಳು ನಡೆದಿದೆ. ಕಾಂಗ್ರೆಸ್ ಪ್ರೇರೇಪಿತರು ಈ ರೀತಿಯ ಕೆಲಸ ಮಾಡಿದ್ದಾರೆ. ಬಹುಷಃ ಶಿಕ್ಷಣ ಸಚಿವರು ಇಲ್ಲಿ ಇದ್ದಿದ್ದರೇ ಅವರ ಕೊಲೆಯನ್ನೇ ಮಾಡುತ್ತಿದ್ದರೇನೋ ಎನ್ನುವಂತಹ ಸ್ಥಿತಿ ಇದೆ ಎನ್ನುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಬಿ.ಸಿ.ನಾಗೇಶ್ ನಿವಾಸದ ಘಟನೆ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ನಾಯಕರು ತಮ್ಮ ಆಕ್ರೋಶ ಹೊರಹಾಕಿದ್ದು, ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ‌‌ ಕಾರ್ಯದರ್ಶಿ ಸಿ.ಟಿ.ರವಿ,ಸಚಿವರಿಗೆ ಕೊಲೆ ಬೆದರಿಕೆ ಹಾಕಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಇದು ತಾಲಿಬಾನಿ ಸಂಸ್ಕೃತಿ. ಅಖಂಡ ನಿವಾಸಕ್ಕೆ ಮಾಡಿದಂತೆ ಮಾಡುವ ಯತ್ನ ನಡೆಸಿದ್ದಾರೆ. ಆದರೆ ಇದಕ್ಕೆಲ್ಲ ನಾವು ಹೆದರೋದಿಲ್ಲ.‌ನಾಗೇಶ್ ಅವರ ಜೊತೆ ನಾವಿದ್ದೇವೆ ಎಂದಿದ್ದಾರೆ.

ಮಂಗಳೂರಿನಲ್ಲಿ ನಾಗೇಶ್ (BC Nagesh) ಘಟನೆ ಖಂಡಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಶಿಕ್ಷಣ ಸಚಿವ ನಾಗೇಶ್ ನಿವಾಸಕ್ಕೆ ನುಗ್ಗಿ ಎನ್.ಎಸ್.ಯು.ಐ ಮತ್ತು ಕಾಂಗ್ರೆಸ್ ಗೂಂಡಾಗಿರಿ ಮಾಡಿದೆ. ಕಾಂಗ್ರೆಸ್ ವೈಚಾರಿಕ ಹೋರಾಟದಲ್ಲಿ ಸೋತಿದೆ. ಮೂಲ ಸಂಸ್ಕೃತಿ ಗೂಂಡಾಗಿರಿ ಮಾಡ್ತಿದೆ. ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಹತಾಶವಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯ ನಾಗೇಶ್ ನಿವಾಸದ ಬಳಿ ಎನ್.ಎಸ್.ಯು.ಐ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹೋರಾಟಗಾರರನ್ನು ವಶಕ್ಕೆ ಪಡೆದಿರುವ ಪೊಲೀಸ್ ಇಲಾಖೆ ತನಿಖೆ ತೀವ್ರಗೊಳಿಸಿದೆ. ಇನ್ನೊಂದೆಡೆ ನಾಳೆ ಈ ವಿಚಾರ ಇನ್ನಷ್ಟು ವಿವಾದಕ್ಕೆ ಕಾರಣವಾಗೋ ಸಾಧ್ಯತೆ ಇದೆ.

ಇದನ್ನೂ ಓದಿ : ಕೋವಿಡ್‌ ಪ್ರಕರಣ ಹೆಚ್ಚಳ, ಮತ್ತೆ ಲಾಕ್‌ಡೌನ್‌ ಜಾರಿ : ಸುಳಿವು ಕೊಟ್ಟ ಸಚಿವರು

ಇದನ್ನೂ ಓದಿ : 777 Charlie : ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ಚಾರ್ಲಿ-777 : 21 ಸಿಟಿಗಳಲ್ಲಿ ಪ್ರೀಮಿಯರ್‌ ಆಗ್ತಿದೆ ಸಿನಿಮಾ

NSUI Attack Education Minister BC Nagesh House Home minister Reaction

Comments are closed.