Yash – Radhika :ಯಶ್​ – ರಾಧಿಕಾ ನಿವಾಸದಲ್ಲಿ ಬೆಳಕಿನ ಹಬ್ಬದ ಸಂಭ್ರಮ ಬಲು ಜೋರು

Yash – Radhika : ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿದೆ. ಎಲ್ಲಾ ಕಡೆಗಳಲ್ಲಿ ಪಟಾಕಿ ಸದ್ದು, ಹಣತೆಯ ಪ್ರಕಾಶ ಹಾಗೂ ಆಕಾಶಬುಟ್ಟಿಗಳ ಹಾರಾಟ ಮೈ ಮನ ತಣಿಸುವಂತಿದೆ. ಸಾಮಾನ್ಯ ಜನತೆ ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ರಾಕಿ ಭಾಯ್​​ ಯಶ್​ ಕೂಡ ತಮ್ಮ ನಿವಾಸದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ.


ಕೆಜಿಎಫ್​ 2 ಖ್ಯಾತಿಯ ನಟ ಯಶ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ದೀಪಾವಳಿ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ . ಫೋಟೋಗಳಲ್ಲಿ ನಟಿ ರಾಧಿಕಾ ಪಂಡಿತ್​, ನಟ ಯಶ್​, ಮಕ್ಕಳಾದ ಯಥರ್ವ್ ಹಾಗೂ ಆಯ್ರಾ ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮವನ್ನು ಆಚರಿಸುತ್ತಿರೋದನ್ನು ಕಾಣಬಹುದಾಗಿದೆ. ತುಂಬಾ ಮುಖ್ಯ ಎನಿಸುವ ಕ್ಷಣಗಳಿವು ಎಂದು ಈ ಫೋಟೋಗಳಿಗೆ ನಟ ಯಶ್​ ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ ಫೋಟೋಗಳ ಮೂಲಕ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ .


ಈ ಫೋಟೋದಲ್ಲಿ ನಟ ಯಶ್​​ ಹಸಿರು ಬಣ್ಣದ ಶರ್ಟ್ ಹಾಗೂ ಜೀನ್ಸ್​ ಪ್ಯಾಂಟ್​ ಧರಿಸಿದ್ದರೆ, ನಟಿ ರಾಧಿಕಾ ಪಂಡಿತ್​ ಕ್ರೀಮ್​ ಬಣ್ಣದ ಕುರ್ತಾ ಧರಿಸಿದ್ದಾರೆ. ಆಯ್ರಾ ಗುಲಾಬಿ ಬಣ್ಣದ ಫ್ರಾಕ್​ನಲ್ಲಿ ಮುದ್ದು ಮುದ್ದಾಗಿ ಕಂಡರೆ ಯಥರ್ವ ಹಸಿರು ಹಾಗೂ ಬಿಳಿ ಬಣ್ಣದ ಕುರ್ತಾ ಪೈಜಾಮಾ ಧರಿಸಿದ್ದಾನೆ.


ಕೆಜಿಎಫ್​ 2 ಸಿನಿಮಾದ ಬಳಿಕ ಸ್ಯಾಂಡಲ್​ವುಡ್​ ಹಾಗೂ ಯಶ್​ರ ಕೀರ್ತಿ ಮುಗಿಲೆತ್ತರಕ್ಕೆ ಚಾಚಿದೆ. ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್​ 2 ಸಿನಿಮಾ ಯಶ್​ರ 18ನೇ ಸಿನಿಮಾವಾಗಿತ್ತು. ಇದಾದ ಬಳಿಕ ಯಶ್​ ತಮ್ಮ 19ನೇ ಸಿನಿಮಾವನ್ನ ಯಾವಾಗ ಘೋಷಿಸ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಆದರೆ ಸಧ್ಯ ತಮ್ಮ ಮುಂದಿನ ಪ್ರಾಜೆಕ್ಟ್​ ಬಗ್ಗೆ ಯಾವುದೇ ಮಾಹಿತಿ ನೀಡದ ನಟ ಯಶ್​ ಪತ್ನಿಯೊಂದಿಗೆ ವಿದೇಶ ಪ್ರವಾಸ ಮಾಡುತ್ತಾ, ಮಕ್ಕಳೊಂದಿಗೆ ಮನೆಯಲ್ಲಿ ಎಂಜಾಯ್​ ಮಾಡುತ್ತಾ ಫ್ಯಾಮಿಲಿ ಟೈಮ್​ ಕಳೆಯುತ್ತಿದ್ದಾರೆ.

ಇದನ್ನು ಓದಿ : Rohit Sharma gets emotional: 90 ಸಾವಿರ ಪ್ರೇಕ್ಷಕರ ಮುಂದೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ

ಇದನ್ನೂ ಓದಿ : Vijaya Raghavendra : ‘ಮರೀಚಿ’ಯಾದ ಚಿನ್ನಾರಿ ಮುತ್ತ- ಸಿದ್ಧ್ರುವ್ ಚೊಚ್ಚಲ ಚಿತ್ರಕ್ಕೆ ಹೀರೋ ಆದ ವಿಜಯ ರಾಘವೇಂದ್ರ

The celebration of the festival of lights at Yash – Radhika’s residence is loud

Comments are closed.