Sathish Jarakiholi : ಬಿಜೆಪಿ ತಪ್ಪಿನಿಂದಾಗಿ ಲಖನ್​ ಜಾರಕಿಹೊಳಿಗೆ ಗೆಲುವು ಸಿಕ್ಕಿದೆ : ಸತೀಶ್ ಜಾರಕಿಹೊಳಿ

ಬೆಂಗಳೂರು : ವಿಧಾನಪರಿಷತ್​ ಚುನಾವಣೆಯಲ್ಲಿ( MLC election ) ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಬೆಳಗಾವಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​​ ಎರಡೂ ಸೋಲಿನ ರುಚಿ ಕಂಡಿವೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಖನ್​ ಜಾರಕಿಹೊಳಿ ಇಲ್ಲಿ ವಿಜಯದ ಬಾವುಟ ಹಾರಿಸಿದ್ದಾರೆ. ಬಿಜೆಪಿಯಲ್ಲಿ ರಮೇಶ್​ ಜಾರಕಿಹೊಳಿಯನ್ನು ಕಡಗಣನೆ ಮಾಡಿದ್ದು ಹಾಗೂ ಲಖನ್​ ಜಾರಕಿಹೊಳಿಗೆ (Sathish Jarakiholi) ಟಿಕೆಟ್​ ನೀಡದೇ ಇದ್ದದ್ದು ಬಿಜೆಪಿಗೆ ದೊಡ್ಡ ಮಟ್ಟಿಗಿನ ಹೊಡೆತ ನೀಡಿದೆ. ಇದೇ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ಬಿಜೆಪಿಯ ತಪ್ಪಿನಿಂದಲೇ ಲಖನ್​ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಹೇಳಿದ್ರು.

ಬಿಜೆಪಿ ಮಾಡಿಕೊಂಡ ಯಡವಟ್ಟುಗಳಿಂದಾಗಿ ಬಯಸದೇ ಬಂದ ಭಾಗ್ಯ ಎಂಬಂತೆ ಲಖನ್​ ಚುನಾವಣೆಯಲ್ಲಿ ಗೆದ್ದಿದ್ದಾರೆ. ವಿಧಾನಪರಿಷತ್​ ಚುನಾವಣೆಯಲ್ಲಿ ಲಖನ್​ ಗೆಲುವು ಕೇವಲ ಆಕಸ್ಮಿಕ ಮಾತ್ರ. ಆದರೆ ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕಾದದ್ದು ಲಖನ್​ ಕೈಯಲ್ಲಿದೆ ಎಂದು ಹೇಳಿದ್ರು.

ಲಖನ್​ಗೆ ಎಲ್ಲಾ ಸೇರಿ ಕೈ ಹಿಡಿದು ದಡ ಸೇರಿಸಿದಂತೆ ಆಗಿದೆ. ಸಣ್ಣ ಸಣ್ಣ ಜನರ ನಡುವೆ ಬಾಂಬ್​ ಎಸೆದ ಹಾಗೆ ದೊಡ್ಡವರ ಮಧ್ಯೆ ಬಾಂಬ್​ ಎಸೆದರೆ ಅನಾಹುತ ಹೆಚ್ಚೇ ಆಗುತ್ತದೆ. ಜನಸೇವೆ ಮಾಡೋದು ಅಂದರೆ ಬೇವಿನ ಗಿಡದ ಕೆಳಗೆ ಕೂತು ಜನರನ್ನು ಟೀಕೆ ಮಾಡಿದಂತೆ ಅಲ್ಲ. ರಮೇಶ್​ ಹಾಗೂ ಲಖನ್​ ಇಬ್ಬರೂ ತಮ್ಮ ವರ್ತನೆ ಬದಲಾಯಿಸಿಕೊಳ್ಳಬೇಕು. ಲಖನ್​ ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿಧಾನಪರಿಷತ್​ ಚುನಾವಣಾ ಫಲಿತಾಂಶದ ವಿಚಾರವಾಗಿ ಸ್ಫೋಟಕ ಹೇಳಿಕೆ ನೀಡಿದ ರಮೇಶ್​ ಜಾರಕಿಹೊಳಿ

ಬೆಂಗಳೂರು : ವಿಧಾನ ಪರಿಷತ್​ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸಿಕ್ಕ ಸೋಲು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಸಿದೆ. ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿಯಲ್ಲೇ ಕೇಸರಿ ಪಾಳಯ ಸೋಲಲು ಮಾಜಿ ಸಚಿವ ರಮೇಶ್​ ಜಾರಕಿಹೊಳಿಯ ಪಿತೂರಿ ಕಾರಣವೇ ಎಂಬ ಗುಮಾನಿ ಕೂಡ ಎದ್ದಿದೆ. ಆದರೆ ಈ ಎಲ್ಲಾ ಅಪವಾದಗಳಿಗೆ ಸ್ವತಃ ರಮೇಶ್​ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ್ದ ರಮೇಶ್‌ ಜಾರಕಿಹೊಳಿ ಅವರು ಅನವಶ್ಯಕವಾಗಿ ನನ್ನ ತಲೆ ಮೇಲೆ ಬಿಜೆಪಿ ಸೋಲಿನ ಹೊರೆಯನ್ನು ಹೇರುತ್ತಿದ್ದಾರೆ. ನನಗೆ ಕಾಂಗ್ರೆಸ್​ನ್ನು ಸೋಲಿಸಬೇಕು ಎಂಬ ಅಭಿಲಾಷೆ ದೊಡ್ಡ ಮಟ್ಟದಲ್ಲಿ ಇತ್ತು. ಆದರೆ ನಾನೆಂದಿಗೂ ಬಿಜೆಪಿಯನ್ನು ಸೋಲಿಸಬೇಕು ಎಂದು ಯೋಚನೆ ಕೂಡ ಮಾಡಿಲ್ಲ. ಆದರೂ ನನ್ನ ಮೇಲೆ ವಿನಾಕಾರಣ ಸೋಲಿನ ಅಪವಾದ ಕಟ್ಟಲಾಗ್ತಿದೆ ಎಂದು ಹೇಳಿದರು.

ಅಲ್ಲದೇ ಇದೇ ವೇಳೆ ಹೊಸ ಬಾಂಬ್​ ಸಿಡಿಸಿದ ಗೋಕಾಕ್​ ಸಾಹುಕಾರ, ವಿಧಾನ ಪರಿಷತ್​ ಚುನಾವಣೆಗೂ ಕೇವಲ ನಾಲ್ಕೇ ದಿನಗಳು ಮುಂಚಿತವಾಗಿ ಇಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ಬೆಳವಣಿಗೆ ನಡೆದಿದೆ. ವಿಧಾನಪರಿಷತ್​ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ಸೋಲಿಗೆ ಈ ರಾಜಕೀಯ ವಿದ್ಯಮಾನವೇ ಕಾರಣ. ನಾನು ಪಕ್ಷದ ನಾಯಕರ ಜೊತೆ ಆಂತರಿಕವಾಗಿ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಮಾರ್ಮಿಕವಾಗಿ ಮಾತನಾಡಿದರು. ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಇದೇ ವೇಳೆ ಆಕ್ರೋಶ ಹೊರಹಾಕಿದ ರಮೇಶ್​ ಜಾರಕಿಹೊಳಿ, ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಯಾವುದೇ ಪ್ರಯೋಜನವಿಲ್ಲ. ಅವರೊಬ್ಬ ವೇಸ್ಟ್​ ಬಾಡಿ ಎಂದು ಕುಟುಕಿದರು.

ಇದನ್ನೂ ಓದಿ : ಪಕ್ಷಕ್ಕೆ ಸೋಲು, ಸಹೋದರನಿಗೆ ಗೆಲುವು : ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡದ್ರಾ ರಮೇಶ್ ಜಾರಕಿಹೊಳಿ

ಇದನ್ನೂ ಓದಿ : Omicron patient discharge : ಕೊರೋನಾಂತಕದ ನಡುವೆ ಸಮಾಧಾನದ ಸುದ್ದಿ: ಓಮೈಕ್ರಾನ್ ಸೋಂಕಿತ ಹಾಸ್ಪಿಟಲ್ ನಿಂದ ಡಿಸ್ಚಾರ್ಜ್

Sathish Jarakiholi statement regarding MLC election

Comments are closed.