Savarkar photo controversy big twist : ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಸಾವರ್ಕರ್‌ ಪಾರ್ಕ್‌ ಉದ್ಘಾಟನೆ : ಪೋಟೋ ಸಂಘರ್ಷಕ್ಕೆ ಬಿಗ್‌ ಟ್ವಿಸ್ಟ್‌

ತುಮಕೂರು : (Savarkar photo controversy big twist)ವಿನಾಯಕ ದಾಮೋದರ್ ಸಾವರ್ಕರ್‌ ಪೋಟೋ ವಿವಾದ ರಾಜ್ಯದಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಪೋಟೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಆದ್ರೆ ಈ ನಡುವಲ್ಲೇ ಸಿದ್ದರಾಮಯ್ಯ ಕರ್ನಾಟಕದಲ್ಲಿ ಸಿಎಂ ಆಗಿದ್ದ ವೇಳೆಯಲ್ಲಿಯೇ ಕಾಂಗ್ರೆಸ್‌ ನಾಯಕರು ತುಮಕೂರಿನಲ್ಲಿ ಸಾವರ್ಕರ್‌ ಪಾರ್ಕ್‌ ಉದ್ಘಾಟಿಸಿರುವ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಾ.ಜಿ.ಪರಮೇಶ್ವರ್, ರೋಷನ್ ಬೇಗ್ ಅವರು ತುಮಕೂರಿನ ವಿನಾಯಕ ದಾಮೋದರ್ ಸಾವರ್ಕರ್ ಗಾರ್ಡನ್ ಉದ್ಘಾಟಿಸಿದ್ದರು. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.15ರ ಶ್ರೀ ವೀರ ಸಾವರ್ಕರ್ ಪಾರ್ಕ್ ಉದ್ಘಾಟನಾ ಕಾರ್ಯಕ್ರಮದ ಅಡಿಗಲ್ಲಿನ ಫೋಟೋ ವೈರಲ್ ಆಗಿದೆ. 06-08-2016 ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ನಾಯಕರು ಭಾಗಿಯಾಗಿದ್ದರು. ಅದ್ರಲ್ಲೂ ಫಲಕದಲ್ಲಿ ಟಿ.ಬಿ.ಜಯಚಂದ್ರ, ಕಾನೂನು, ಸಂಸದೀಯ ಸಚಿವರು, ಡಾ. ಜಿ. ಪರಮೇಶ್ವರ್, ಗೃಹ ಕಾರ್ಯದರ್ಶಿ, ಆರ್.ಶೋಶನ್ ಬೇಗ್ ನಗರಾಭಿವೃದ್ಧಿ ಸಚಿವರು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಹೆಸರುಗಳಿವೆ.

ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿಯೇ ಪಾರ್ಕ್‌ ಉದ್ಘಾಟನೆ ಆಗಿದೆ. ಆಗ ಸಿದ್ದರಾಮಯ್ಯ ನಿದ್ದೆ ಮಾಡುತ್ತಿದ್ರಾ ಅಂತಾ ವಿರೋಧ ಪಕ್ಷದ ನಾಯಕರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾವರ್ಕರ್ ಅವರ ಫೋಟೋ ವಿರುದ್ಧ ಹಲವರು ಪ್ಲೆಕ್ಸ್‌ಗಳನ್ನು ಹರಿದು ಹಾಕಿದ್ದರು. ಇದು ರಾಜ್ಯದಲ್ಲಿ ಸಾವರ್ಕರ್ ಫ್ಲೆಕ್ಸ್ ಸಂಘರ್ಷಕ್ಕೆ ಕಾರಣವಾಯಿತು. ಇನ್ನೊಂದೆಡೆಯಲ್ಲಿ ಸಿದ್ದರಾಮಯ್ಯ ಸಾವರ್ಕರ್‌ ಪೋಟೋ ಹರಿದು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆ ವಿವಾದವನ್ನು ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಮೊಟ್ಟೆ ಎಸೆದಿದ್ದರು. ಅಲ್ಲದೇ ಇಂದು ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ ವೇಳೆಯಲ್ಲಿಯೂ ದಾರಿಯುದ್ದಕ್ಕೂ ಸಿದ್ದರಾಮಯ್ಯ ಪ್ರತಿಭಟನೆಯನ್ನು ಎದುರಿಸಿದ್ದಾರೆ.

ಇದನ್ನೂ ಓದಿ : Throw Eggs At Siddaramaiahs Car : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ : ಕಾರ್ಯಕರ್ತರ ನಡೆಗೆ ಬಿಜೆಪಿ ಅಸಮಾಧಾನ

ಇದನ್ನೂ ಓದಿ : BS Yediyurappa: 6 ಸಮೀಕ್ಷೆ ಬಿಟ್ಟಿಟ್ಟ ಸತ್ಯ; ಸಿದ್ದು ಶಕ್ತಿ ತಡೆಯಲು ರಾಜಾಹುಲಿಗೆ ಜೈ ಅಂದ ಬಿಜೆಪಿ ಹೈಕಮಾಂಡ್

Savarkar photo controversy big twist: Savarkar Park inaugurated by Congress leaders goes viral

Comments are closed.