India Women Cricket Team: ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ, ಹರ್ಮನ್ ಪ್ರೀತ್ ಕೌರ್ ಸಾರಥ್ಯ

ಬೆಂಗಳೂರು: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಅನುಭವಿ ಆಲ್ರೌಂಡರ್ ಹರ್ಮನ್’ಪ್ರೀತ್ ಕೌರ್ (Harmanpreet Kaur) ಸಾರಥ್ಯದ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ಮಹಿಳಾ ತಂಡ, ಆತಿಥೇಯರ ವಿರುದ್ಧ 3 ಪಂದ್ಯಗಳ ಟಿ20 ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಮೊದಲು ಟಿ20 ಸರಣಿ ನಡೆಯಲಿದ್ದು, ಮೊದಲ ಪಂದ್ಯ ಸೆಪ್ಟೆಂಬರ್ 10ರಂದು ಡುರ್ಹಾಮ್’ನ ರಿವರ್ಸ್’ಸೈಡ್ ಮೈದಾನದಲ್ಲಿ ನಡೆಯಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾರತದ ವನಿತೆಯರು ಏಕದಿನ ಸರಣಿಯ ಕೊನೆಯ ಪಂದ್ಯವನ್ನಾಡಲಿದ್ದಾರೆ.

ಟಿ20 ಸರಣಿಗೆ ಭಾರತ ತಂಡ:
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್, ಜೆಮಿಮಾ ರಾಡ್ರಿಗ್ಸ್, ಸ್ನೇಹ್ ರಾಣಾ, ರೇಣುಕಾ ಠಾಕೂರ್, ಮೇಘನಾ ಸಿಂಗ್, ರಾಧಾ ಯಾದವ್, ಸಬ್ಬಿನೇನಿ ಮೇಘನಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಡಿ.ಹೇಮಲತಾ, ಸಿಮ್ರಾನ್ ದಿಲ್ ಬಹದ್ದೂರ್, ರಿಚಾ ಘೋಷ್ (ವಿಕೆಟ್ ಕೀಪರ್), ಕೆ.ಪಿ ನವ್ಗಿರೆ.

ಏಕದಿನ ಸರಣಿಗೆ ಭಾರತ ತಂಡ:
ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್, ಸ್ನೇಹ್ ರಾಣಾ, ರೇಣುಕಾ ಠಾಕೂರ್, ಮೇಘನಾ ಸಿಂಗ್, ರಾಧಾ ಯಾದವ್, ಸಬ್ಬಿನೇನಿ ಮೇಘನಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಜೇಶ್ವರಿ ಗಾಯಕ್ವಾಡ್, ಡಿ.ಹೇಮಲತಾ, ಸಿಮ್ರಾನ್ ದಿಲ್ ಬಹದ್ದೂರ್, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ಜೂಲನ್ ಗೋಸ್ವಾಮಿ.

ಭಾರತ Vs ಇಂಗ್ಲೆಂಡ್ ಸರಣಿಯ ವೇಳಾಪಟ್ಟಿ
ಸೆಪ್ಟೆಂಬರ್ 10: ಮೊದಲ ಟಿ20 (ಡುರ್’ಹ್ಯಾಮ್)
ಸೆಪ್ಟೆಂಬರ್ 13: ಎರಡನೇ ಟಿ20 (ಡರ್ಬಿ)
ಸೆಪ್ಟೆಂಬರ್ 15: ಮೂರನೇ ಟಿ20 (ಬ್ರಿಸ್ಟಲ್)
ಸೆಪ್ಟೆಂಬರ್ 18: ಮೊದಲ ಏಕದಿನ (ಹೋವ್)
ಸೆಪ್ಟೆಂಬರ್ 21: ಎರಡನೇ ಏಕದಿನ (ಕ್ಯಾಂಟರ್’ಬರಿ)
ಸೆಪ್ಟೆಂಬರ್ 24: ಮೂರನೇ ಏಕದಿನ (ಲಾರ್ಡ್ಸ್)

ಇದನ್ನೂ ಓದಿ : Kumble to be sacked as Punjab coach: ಅನಿಲ್ ಕುಂಬ್ಳೆಗೆ ಶಾಕಿಂಗ್ ನ್ಯೂಸ್: ಪಂಜಾಬ್ ಕಿಂಗ್ಸ್ ಕೋಚ್ ಸ್ಥಾನದಿಂದ ಜಂಬೋಗೆ ಗೇಟ್‌ಪಾಸ್

ಇದನ್ನೂ ಓದಿ : Team India’s 2023-27 FTP Cycle : 2023ರಿಂದ 2027ರವರೆಗೆ ಟೀಮ್ ಇಂಡಿಯಾ ಆಡಲಿರುವ ಸರಣಿಗಳ ಕಂಪ್ಲೀಟ್ ಡೀಟೇಲ್ಸ್

Harmanpreet Kaur captain Indian women Cricket team for England tour

Comments are closed.