Siddaramaiah : ಬಿಜೆಪಿ ಸರ್ಕಾರಕ್ಕೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಹೇಳಿ ಮರುಕ್ಷಣವೇ ಹೇಳಿಕೆ ವಾಪಸ್​ ಪಡೆದ ಸಿದ್ದರಾಮಯ್ಯ

ಮೈಸೂರು : Siddaramaiah retracted : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಲು ಸಾಲು ಯುವಕರ ಕೊಲೆ ಪ್ರಕರಣಗಳಲ್ಲಿ ರಾಜ್ಯ ಸರ್ಕಾರದ ವಿಫಲತೆಯನ್ನು ವಿಪಕ್ಷಗಳು ಎತ್ತಿ ಆಡುತ್ತಿವೆ. ಹೀಗಾಗಿ ಕಾಂಗ್ರೆಸ್​ ಹಾಗೂ ಜೆಡಿಎಸ್​ನ ನಾಯಕರು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂದು ಮೈಸೂರಿನಲ್ಲಿಯೂ ಇದೇ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿಗೆ ಸರ್ಕಾರವನ್ನು ನಡೆಸುವ ತಾಕತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಆಡಳಿತ ವ್ಯವಸ್ಥೆಯಂತೂ ಸಂಪೂರ್ಣ ಹದಗೆಟ್ಟಿದೆ. ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್​ ಸರ್ಕಾರ ಅಧಿಕಾರದಲ್ಲಿ ಇರ್ತಿದ್ರೆ ಕಲ್ಲು ಹೊಡೆಯಬಹುದಿತ್ತು ಅಂತಾನೆ. ಅಲ್ಲ ಒಬ್ಬ ಸಂಸದನ ಬಾಯಲ್ಲಿ ಬರುವ ಮಾತಾ ಇದು..? ಈಗ ಇವರದ್ದೇ ಸರ್ಕಾರ ಇದೆಯಲ್ವಾ, ನಾವೇನು ಕೊಳೆತ ಮೊಟ್ಟೆಯಲ್ಲಿ ಹೊಡೆಯಬೇಕಾ..? ಅಥವಾ ಚಪ್ಪಲಿಯಲ್ಲಿ ಹೊಡೆಯೋದಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಈ ರೀತಿ ಹೇಳಿದ ಕೆಲವೇ ಕ್ಷಣಗಳಲ್ಲಿ ತಮ್ಮ ಹೇಳಿಕೆಯನ್ನು ಬದಲಾಯಿಸಿದ ಸಿದ್ದರಾಮಯ್ಯ, ನಾನು ಆಕ್ರೋಶದಿಂದ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿದೆ. ನಾನು ಇಂತಹ ಪದ ಬಳಕೆ ಮಾಡಬಾರದಿತ್ತು. ಈ ಹೇಳಿಕೆಯನ್ನು ನಾನು ಈ ಕೂಡಲೇ ವಾಪಸ್​ ಪಡೆಯುತ್ತೇನೆ ಎಂದು ಹೇಳುವ ಮೂಲಕ ತಮ್ಮ ತಪ್ಪನ್ನು ಸರಿ ಮಾಡಿಕೊಂಡರು.

ಇನ್ನು ರಾಜ್ಯದಲ್ಲಿ ಬುಲ್ಡೋಜರ್​ ಮಾಡೆಲ್​ ಜಾರಿಗೆ ತರುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಗೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಅಂದರೆ ನಮ್ಮ ರಾಜ್ಯ ಉತ್ತರ ಪ್ರದೇಶದ ರೀತಿಯಲ್ಲಿ ಬದಲಾಗಿದೆಯೇ..? ಉತ್ತರ ಪ್ರದೇಶ ಹಾಗೂ ಬಿಹಾರದ ರೀತಿಯಲ್ಲಿ ನಮ್ಮ ರಾಜ್ಯ ಬದಲಾಗಿದೆ ಎಂದು ಬಿಜೆಪಿ ನಾಯಕರೇ ಒಪ್ಪಿಕೊಳ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಂತೆ ನಮ್ಮಲ್ಲೂ ಹದಗೆಟ್ಟಿದೆಯೇ..? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ : closure of shops : ದಕ್ಷಿಣ ಕನ್ನಡದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಜೆ 6 ಗಂಟೆಗೆ ಬಂದ್​ : ಜಿಲ್ಲಾಧಿಕಾರಿ ಆದೇಶ

ಇದನ್ನೂ ಓದಿ : Dr. C Aswattha Narayan : ಅಗತ್ಯಬಿದ್ದರೆ ದುಷ್ಕರ್ಮಿಗಳ ಎನ್​ಕೌಂಟರ್​ ಮಾಡಲೂ ಸರ್ಕಾರ ಸಿದ್ಧವಿದೆ : ಸಚಿವ ಡಾ. ಅಶ್ವತ್ಥ ನಾರಾಯಣ ಗುಡುಗು

Siddaramaiah retracted his statement saying that he should slap the BJP government

Comments are closed.