development of Rajkaluwe : ‘ರಾಜಕಾಲುವೆ ಅಭಿವೃದ್ಧಿ ಮಾಡುವುದೇ ನಮ್ಮ ಮೊದಲ ಪ್ರಾಶಸ್ತ್ಯ’ : ಸಿಎಂ ಬೊಮ್ಮಾಯಿ

ಬೆಂಗಳೂರು : development of Rajkaluwe : ಕಳೆದ ಭಾನುವಾರ ರಾಜ್ಯ ರಾಜಧಾನಿಯಲ್ಲಿ ಸುರಿದ ಮಳೆಯು ರಾಜ್ಯ ರಾಜಧಾನಿಯನ್ನು ಅಲ್ಲೋಲ ಕಲ್ಲೋಲವಾಗಿಸಿದೆ. ಸಿಲಿಕಾನ್​ ಸಿಟಿಯಲ್ಲಿ ಪ್ರವಾಹ ಪರಿಸ್ಥಿತಿಯು ಎದುರಾಗಿದ್ದು ಕಂಡ ಬಳಿಕ ರಾಜ್ಯ ಸರ್ಕಾರ ಫುಲ್​ ಅಲರ್ಟ್ ಆಗಿದೆ. ಕಂದಾಯ ಇಲಾಖೆಯು ರಾಜಕಾಲುವೆ ಮೇಲೆ ಒತ್ತುವರಿ ಮಾಡಿ ಕಟ್ಟಲಾದ ಕಟ್ಟಡಗಳ ಸಂಪೂರ್ಣ ಮಾಹಿತಿಯನ್ನು ಬಿಬಿಎಂಪಿ ಅಧಿಕಾರಿಗಳಿಗೆ ನೀಡಿದ್ದು ನಿನ್ನೆಯಿಂದ ಬಿಬಿಎಂಪಿಯು ಮಹದೇವಪುರ ಹಾಗೂ ಕೆ.ಆರ್​ ಪುರಂ ವ್ಯಾಪ್ತಿಯಲ್ಲಿ ಆಪರೇಷನ್​ ಬುಲ್ಡೋಜರ್​ ಕಾರ್ಯಾಚರಣೆಯನ್ನು ಮಾಡುತ್ತಿದೆ. ಇಂದು ವಿಧಾನಸೌಧದಲ್ಲಿಯೂ ಸಹ ಬೆಂಗಳೂರು ನೆರೆ ವಿಚಾರವೇ ಹೆಚ್ಚು ಪ್ರತಿಧ್ವನಿಸಿದ್ದು ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ ರಾಜಕಾಲುವೆಗೆ ನಮ್ಮ ಮೊದಲ ಪ್ರಾಶಸ್ತ್ಯ ಇರಲಿದೆ ಎಂದು ಹೇಳಿದ್ದಾರೆ.


ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್​ ಶಾಸಕ ಕೃಷ್ಣ ಭೈರೇಗೌಡ ಈ ವರ್ಷದ ಮಳೆಯಿಂದಾಗಿ ರಾಜ್ಯ ರಾಜಧಾನಿ ಕೂಡ ಹಾನಿಯನ್ನು ಅನುಭವಿಸಿದೆ. ಬೆಂಗಳೂರಿನಲ್ಲಿ ಸಾಕಷ್ಟು ನಷ್ಟ ಹಾಗೂ ಜೀವ ಹಾನಿ ಸಂಭವಿಸಿದೆ. ಹೀಗಾಗಿ ರಾಜಕಾಲುವೆಯ ಬಗ್ಗೆ ರಾಜ್ಯ ಸರ್ಕಾರ ಹೆಚ್ಚು ತಲೆಕೆಡಿಸಿಕೊಳ್ಳಬೇಕು .ರಾಜಕಾಲುವೆಯು 850ಕಿ.ಮೀ ದೂರವಿದೆ. ಹಿಂದಿನ ಸರ್ಕಾರದಲ್ಲಿ 400 ಕಿ ಮೀ ಅಭಿವೃದ್ಧಿಗೆ 1900 ಕೋಟಿ ರಾಜಕಾಲುವೆ ಅಭಿವೃದ್ಧಿಗೆ ನೀಡಿದೆ. ಕಳೆದ ಮೂರು ವರ್ಷದಲ್ಲಿ 70 ಕಿಮೀ ಮಾತ್ರ ಅಭಿವೃದ್ಧಿ ಆಗಿದೆ. ಉಳಿದ 400 ಕಿ,ಮೀ ಅಭಿವೃದ್ಧಿ ಯಾವಾಗ ಎಂದು ಕೇಳಿದ್ದರು.


ಕಳೆದ ವರ್ಷವೇ ಸಿಎಂ ಬಸವರಾಜ ಬೊಮ್ಮಾಯಿ ರಾಜಕಾಲುವೆ ಅಭಿವೃದ್ಧಿ ಮಾತುಗಳನ್ನಾಡಿದ್ದರು . ರಾಜಕಾಲುವೆ ಅಭಿವೃದ್ಧಿಗೆಂದು 1500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದಾಗಿ ಕೂಡ ಹೇಳಿದ್ದರು. ಆದರೆ ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗಿದೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ 110 ಕೋಟಿ ರೂಪಾಯಿ ಅಗತ್ಯವಿತ್ತು. ಆದರೆ ಕೇವಲ 20 ಕೋಟಿ ರೂಪಾಯಿ ನೀಡಲಾಗಿದೆ. ರಾಜಕಾಲುವೆಯನ್ನು ಅಭಿವೃದ್ಧಿ ಮಾಡದೇ ಹೋದಲ್ಲಿ ಬೆಂಗಳೂರಿನಲ್ಲಿ ಮಳೆಯ ಹಾನಿಯನ್ನು ತಡೆಯಲು ಇನ್ಯಾವುದೇ ಪಯಾರ್ಯ ಮಾರ್ಗವಿಲ್ಲ ಎಂದು ಕಾಂಗ್ರೆಸ್​ ಶಾಸಕ ಕೃಷ್ಣಬೈರೇಗೌಡ ಹೇಳಿದ್ದರು.

ಇದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ ಇಷ್ಟು ಸಮಯ ರಾಜಕಾಲುವೆ ಅಭಿವೃದ್ಧಿ ಕಾರ್ಯ ನಿರಂತರವಾಗಿ ನಡೆಯುತ್ತಿರಲಿಲ್ಲ. ಆಗಾಗ ನಡೆಸಲಾಗುತ್ತಿತ್ತು. ಆದರೆ ಇನ್ಮುಂದೆ ಆ ರೀತಿ ಆಗೋದಿಲ್ಲ. ರಾಜಕಾಲುವೆಯ ಅಭಿವೃದ್ಧಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್

ಇದನ್ನೂ ಓದಿ : Rohit Sharma century Phobia : ವಿರಾಟ್ ಬಳಿಕ ರೋಹಿತ್‌ಗೆ ಸೆಂಚುರಿ ಫೋಬಿಯಾ.. ಶತಕವಿಲ್ಲದೆ 1 ವರ್ಷ, ಏಕದಿನ ಶತಕವಿಲ್ಲದೆ 2.8 ವರ್ಷ

There is a discussion about the development of Rajkaluwe in Vidhansouda too

Comments are closed.