mobile phone :ಮೊಬೈಲ್ ಪೋನ್ ಬದಲು ಪಾರ್ಸೆಲ್ ನಲ್ಲಿ ಬಂತು ಹಳಸಿದ ತಿಂಡಿಯ ಪೊಟ್ಟಣ

ಮಂಗಳೂರು : mobile phone : ನಿಮ್ಮ‌ ಮೊಬೈಲ್ ನಂಬರ್ ಲಕ್ಕಿ ನಂಬರ್ ಆಗಿ ಆಯ್ಕೆಯಾಗಿದೆ ಎಂದು ಹೇಳಿ ಹಣ ಲಪಟಾಯಿಸುವ ಪ್ರಕರಣ ಈ ಹಿಂದೆ ಹೆಚ್ಚಾಗಿತ್ತು. ಇದೀಗ ಮತ್ತೆ ಅಂತಹುದೇ ಪ್ರಕರಣಗಳ ವರದಿಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಅದೃಷ್ಟದ ಹೆಸರಿನಲ್ಲಿ ಗ್ರಾಹಕರೊಬ್ಬರಿಗೆ ಪಂಗನಾಮ‌‌ ಹಾಕಲಾಗಿದೆ.

ಉಪ್ಪಿನಂಗಡಿಯ ದೇವಳವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿರುವ ಭವಾನಿ ಶಂಕರ್ ಎಂಬವರು ತನ್ನ ಮನೆಯವರಿಗೆಂದು ಏಕಕಾಲದಲ್ಲಿ ಒಂದೇ ಕಂಪೆನಿಯ ಮೂರು ಮೊಬೈಲ್ ಫೋನ್ ಖರೀದಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಅದೇ ಕಂಪೆನಿಯ ಅಧಿಕಾರಿಯೆಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ನೀವು ಮೂರು ಮೊಬೈಲ್ ಫೋನ್ ಖರೀದಿಸಿದಕ್ಕೆ ಸಂಸ್ಥೆಯ ಲಕ್ಕಿ ಗ್ರಾಹಕರಾಗಿ ನೀವು ಆಯ್ಕೆ ಆಗಿದ್ದೀರಿ ಎಂದು ಹೇಳಿದ್ದಾನೆ. ಇದಕ್ಕಾಗಿ 8,800 ರೂ ಬೆಲೆಯ ಮೊಬೈಲ್ ಫೋನ್ ನ್ನು ನಿಮಗಾಗಿ ಕೇವಲ 1,785 ರೂಗೆ ಕಳುಹಿಸುತ್ತೇವೆ. ಇದಕ್ಕಾಗಿ 1,785 ರೂಗಳನ್ನು ಅಂಚೆ ಕಚೇರಿಯಲ್ಲಿ ಕಟ್ಟಿ ಮೊಬೈಲ್ ಪಡೆದುಕೊಳ್ಳಿ ಎಂದು ಹೇಳಿದ್ದಾನೆ.

ಈ ಕರೆಯನ್ನು ನಂಬಿ ಭವಾನಿ ಶಂಕರ್ ಒಕೆ ಎಂದು ಹೇಳಿದ್ದಾರೆ‌‌. ತಾನೂ ಮೊಬೈಲ್ ಖರೀದಿಸಿರುವುದು ನಿಜ ಆಗಿರುವಾಗ ನಾನು‌ ಲಕ್ಕಿ ಗ್ರಾಹಕನಾಗಿ ಆಯ್ಕೆಯಾಗಿರುವುದು ನಿಜವಾಗಿರಬಹುದೆಂದು ಭವಾನಿ ಶಂಕರ್ ನಂಬಿದ್ದಾರೆ. ಇದಾದ ಸ್ವಲ್ಪ ದಿನದಲ್ಲೆ ಅಂಚೆಕಚೇರಿಗೆ ಪಾರ್ಸೆಲ್ ಒಂದು ಬಂದಿದೆ. 1,785 ರೂ ಕಟ್ಟಿ ಅಂಚೆ ಕಚೇರಿಯಿಂದ ಪಾರ್ಸೆಲ್ ನ್ನು ಪಡೆದುಕೊಂಡಿದ್ದಾರೆ‌. ಈ ಸಂದರ್ಭ ಸಂದೇಹವನ್ನು ಬಗೆಹರಿಸಿಕೊಳ್ಳಲು ಅಲ್ಲಿಯೇ ಪಾರ್ಸೆಲ್ ಓಪನ್ ಮಾಡಿ ನೋಡಿದ್ದಾರೆ. ಆದ್ರೆ ಈ ಸಂದರ್ಭ ಮೊಬೈಲ್ ಫೋನ್ ಬದಲು ಹಳಸಿದ ತಿಂಡಿಯ ಪೊಟ್ಟಣವನ್ನು ಪ್ಯಾಕ್ ಮಾಡಿ ಕಳುಹಿಸಿರುವುದು ಕಂಡು ಬಂದಿದೆ.

ವಿಶೇಷ ಅಂದ್ರೆ ಭವಾನಿ ಶಂಕರ್ ಪೋನ್ ಖರೀದಿಸಿರುವುದು ವಂಚಕರಿಗೆ ಹೇಗೆ ತಿಳಿಯುತು ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ‌. ಯಾವುದೋ ಊರಲ್ಲಿ ಖರೀದಿ‌ ಮಾಡಿದ್ರೆ ಇನ್ಯಾವುದೋ ಊರಲ್ಲಿ ಇರುವ ವಂಚಕರಿಗೆ ತಿಳಿಯುತ್ತೆ ಎಂದಾದರೆ ವ್ಯವಸ್ಥೆಗಳ ಬಗ್ಗೆ ಅನುಮಾನ ಮೂಡುವಂತಾಗಿದೆ. ಸದ್ಯ ಈ ಪ್ರಕರಣದಲ್ಲಿ ಭವಾನಿ‌ ಶಂಕರ್ 1,785 ರೂ ಕಳೆದುಕೊಂಡಿದ್ದು, ಇನ್ನು ಬೇರೆ ಯಾರೂ ಈ ರೀತಿ ವಂಚನೆಗೆ ಒಳಗಾಗಬೇಡಿ ಎಂಬು ಭವಾನಿಶಂಕರ್ ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ : Rohit Sharma century Phobia : ವಿರಾಟ್ ಬಳಿಕ ರೋಹಿತ್‌ಗೆ ಸೆಂಚುರಿ ಫೋಬಿಯಾ.. ಶತಕವಿಲ್ಲದೆ 1 ವರ್ಷ, ಏಕದಿನ ಶತಕವಿಲ್ಲದೆ 2.8 ವರ್ಷ

ಇದನ್ನೂ ಓದಿ : Dinesh Karthik: 12 ವರ್ಷಗಳ ನಂತರ ಮತ್ತೊಮ್ಮೆ ವಿಶ್ವಕಪ್ ಆಡಲಿದ್ದಾರೆ ಡಿಕೆ ; ನಾಲ್ಕೇ ಶಬ್ದಗಳಲ್ಲಿ ಖುಷಿ ಹಂಚಿಕೊಂಡ ಕಾರ್ತಿಕ್

Instead of a mobile phone, the parcel came with a stale packet of snacks

Comments are closed.