coconut shell : ಕಸದಿಂದ ರಸ : ತೆಂಗಿನ ಚಿಪ್ಪಿನಿಂದ ನಿರ್ಮಾಣವಾಗ್ತಿದೆ ಸುಂದರ ಪೀಠೋಪಕರಣ

ಉಡುಪಿ : ಕಸದಿಂದ ರಸ : coconut shell : ಶಿಲೆ ಕಲ್ಲು ಕಲಾವಿದನ ಕೈಯಲ್ಲಿ ಸುಂದರ ಮೂರ್ತಿಯಾಗುತ್ತೆ. ಮರದ ತುಂಡು ಬಡಗಿಯ ಕೈಯಲ್ಲಿ ಸುಂದರ ಪೀಠೋಪಕರಣ ಆಗುತ್ತೆ. ಆದ್ರೆ ಉರುವಲಿಗೆ ಬಳಸುವ ಗೆರಟೆ ಈ ಕಲಾವಿದನ ಕೈಯಲ್ಲಿ ಕಲಾ ಪ್ರಪಂಚವನ್ನು ತೆರೆದಿಡುತ್ತೆ. ಹೌದು ಇದು ಬಲು ಅಪರೂಪದ ಜಾನಪದ ಕಲೆ ಗೆರಟೆ ಕಲೆಯ ಸಾದಕ ಉಡುಪಿಯ ವೆಂಕಟ್ರಮಣ ಭಟ್ ಅವರ ಸಾಧನೆಯ ಸ್ಟೋರಿ.

ಪೂಜೆ ಪುನಸ್ಕಾರಗಳಿಗಾಗಲಿ, ರುಚಿಕರವಾದ ತಿಂಡಿತಿನಿಸುಗಳ ತಯಾರಿಕೆಯಲ್ಲಾಗಲಿ ತೆಂಗಿನಕಾಯಿ ಬೇಕೆ ಬೇಕು. ಕಾಯಿಯಿಂದ ಕೊಬ್ಬರಿಯನ್ನು ಬೇರ್ಪಡಿಸಿದ ನಂತರ ಉಳಿಯುವುದು ಗೆರಟೆ. ಎಲ್ರೂ ಇದನ್ನು ಕೆಲಸಕ್ಕೆ ಬಾರದ ವಸ್ತು ಎಂದು ಎಸೆಯುತ್ತಾರೆ. ಅಥವಾ ಉರುವಳಿಗೆ ಬಳಸುತ್ತಾರೆ. ಆದ್ರೆ ಉಡುಪಿಯ ವೆಂಕಟರಮಣ ಭಟ್ ಗೆರಟೆಯಿಂದ ಆಕರ್ಷಕ ಕಲಾಕೃತಿಗಳನ್ನು ಅರಳಿಸ ತೆಂಗಿನ ಚಿಪ್ಪುಗು ಒಂದು ಬೆಲೆ ತಂದುಕೊಟ್ಟಿದ್ದಾರೆ. ತಮ್ಮ ಹರೇ ಕೃಷ್ಣ ಆರ್ಟ್ ಗ್ಯಾಲರಿಯಲ್ಲಿ 95ಕ್ಕೂ ಹೆಚ್ಚು ತೆಂಗಿನ ಚಿಪ್ಪಿನಲ್ಲಿ ಕಲಾಕೃತಿ ರಚಿಸಿದ್ದಾರೆ.

ಇವರು ತಯಾರಿಸಿರುವ ಒಂದೊಂದು ಕೃತಿಯೂ ಅದ್ಭುತವೇ ಸರಿ. ವೇದ ಗಣೇಶ,ವಿವೇಕಾನಂದ,ಗಣಿತ ಸಿದ್ಧಾಂತ,ಏಸುಕ್ರಿಸ್ತ,ಗಾಂಧಿ ಆಶ್ರಮದ ಮಂಗಗಳು, ಅಯ್ಯಪ್ಪ,ಗೀತೋಪದೇಶ,ಲಕ್ಷ್ಮೀ ವಿಗ್ರಹ ಇತ್ಯಾದಿ ಇವರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿವೆ. ಆದರೆ ಎಲ್ಲರೂ ಬೆನ್ನು ತಟ್ಟಿ ಬೆನ್ನು ನೋವಾಯಿತೇ ವಿನಹ ಜೀವನಕ್ಕೆ ಯಾವುದೇ ಆಧಾರ ದೊರೆತಿಲ್ಲ.ಗೆರೆಟೆಯಲ್ಲಿರುವ ವಿಶೇಷ ಪ್ಲಾಸ್ಟಿಕ್ ಮತ್ತು ಫೈಬರ್ ಅಂಶದಿಂದಾಗಿ ಯಾವುದೇ ಕ್ರಿಮಿ ಕೀಟಗಳು ಇದನ್ನು ಹಾಳು ಮಾಡಲ್ಲ. ಈ ಕಾರಣದಿಂದ ಬಹುಕಾಲ ಉಳಿಯುವ ಈ ಗೆರೆಟೆ ಅಮೂಲ್ಯ ನೈಸರ್ಗಿಕ ವಸ್ತು.

ಕಳೆದ 53 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಇವರಿಗೆ ಸರಕಾರದಿಂದಾಗಲಿ ಇಲಾಖೆಯಿಂದಾಗಲೀ ಯಾವುದೇ ಸಹಾಯ ದೊರೆತಿಲ್ಲ. ಇವರಿಗೆ ಆರೋಗ್ಯ ಸಮಸ್ಯೆಯಿದ್ದು ಒಮ್ಮೆ ಹೃದಯಾಘಾತವು ಆಗಿದೆ. ಆದ್ರೆ ಇದ್ಯಾವುದು ಅವರ ಕಲಾಆಸಕ್ತಿಗೆ ಅಡ್ಡಿಯಾಗಿಲ್ಲ. ಆದ್ರೆ ಜೀವನ ನಿರ್ವಹಣೆ ಮಾತ್ರ ಕಷ್ಟವಾಗಿದೆ. ಪತ್ನಿ ಜೊತೆ ಉಡುಪಿಯ ಅಲೆವೂರಿನಲ್ಲಿ ವಾಸವಾಗಿರುವ ಇವರಿಗೆ ಕಲಾಪ್ರೇಮಿಯೊಬ್ಬರು ಆಶ್ರಯ ನೀಡಿದ್ದಾರೆ. ಆ ಮನೆಯಲ್ಲಿಯೇ ತಮ್ಮ ಕಲಾಕೃತಿಯನ್ನು ಇರಿಸಿದ್ದಾರೆ.


ಒಂದೊಂದು ಕಲಾಕೃತಿ ತಯಾರಿಸಲು ಕೆಲ ದಿನ, ತಿಂಗಳು ಬೇಕಾಗುತ್ತೆ. ಇದನ್ನು ಯುನಿಕ್ ಆರ್ಟ್ ಎಂದು ಪರಿಗಣಿಸಲಾಗುತ್ತೆ. ಆದ್ರೆ ಇದ್ಯಾವುದೂ, ಸಂಬಂಧ ಪಟ್ಟ ಇಲಾಖೆಗಳ ಗಮನಕ್ಕೆ ಬಾರದಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಸರಕಾರ ಸಂಬಂಧಪಟ್ಟ ಇಲಾಖೆ ಇಂತಹ ಅಪರೂಪದ ಕಲಾವಿದನನ್ನು ಗುರುತಿಸಿ ಗೌರವಿಸಲಿ. ಕನಿಷ್ಟ ಪಕ್ಷ ಕಲಾವಿದರಿಗೆ ನೀಡುವ ಮಾಸಿಕ ವೇತನ ಇವರಿಗೆ ದೊರೆಯಬೇಕು. ಈ ಕಲೆ ಮುಂದಿನ ಜನಾಂಗಕ್ಕೆ ತಿಳಿಯುವಂತಾಗಬೇಕು ಎಂಬುದು ಎಲ್ಲರ ಆಶಯ.

ಇದನ್ನು ಓದಿ : Kannada Bigg Boss Season 9:ಟಿವಿಯಲ್ಲಿ ಪ್ರಸಾರವಾಗಲಿದೆ ಕನ್ನಡದ ಬಿಗ್‌ ಬಾಸ್‌ ಸೀಸನ್‌ 9

ಇದನ್ನೂ ಓದಿ : Janaspandana program :ಸಾಕಷ್ಟು ವಿಘ್ನಗಳ ಬಳಿಕ ನಾಳೆ ನೆರವೇರಲಿದೆ ಬಿಜೆಪಿಯ ‘ಜನಸ್ಪಂದನ’ ಕಾರ್ಯಕ್ರಮ

A beautiful piece of art made from coconut shell

Comments are closed.