Chandra Grahan 2022: ಈ ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್‌ 8 ಕ್ಕೆ…

ನವೆಂಬರ್‌ 8 ರಂದು ಈ ವರ್ಷದ ಕೊನೆಯ ಚಂದ್ರ ಗ್ರಹಣ (Chandra Grahan 2022) ಜರುಗಲಿದೆ. ಈ ವರ್ಷ ಅಕ್ಟೋಬರ್‌ 25 ರಂದು ದೀಪಾವಳಿಯ ದಿನದಂದೇ ಸೂರ್ಯ ಗ್ರಹಣವು ಸಂಭವಿಸಿತ್ತು. ಚಂದ್ರ ಗ್ರಹಣವು (Lunar Eclipse) ಕಾರ್ತಿಕ ಪೂರ್ಣಿಮೆಯ ದಿನದಂದೇ ಸಂಭವಿಸಲಿದೆ. ಈ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸಲಿದೆ. ಅದಕ್ಕಾಗಿ ಜನರು ಗ್ರಹಣ ಆಚರಣೆಯನ್ನು ಮಾಡಲಿದ್ದಾರೆ. ಚಂದ್ರ ಗ್ರಹಣದ ಕಾಲವು ಭಾರತೀಯ ಕಾಲಮಾನ ನವೆಂಬರ್‌ 8 ರ ಮಧ್ಯಾಹ್ನ 1:32 ರಿಂದ ಪ್ರಾರಂಭವಾಗಿ ಸಂಜೆ 7: 27 ರವರೆಗೆ ನಡೆಯಲಿದೆ. ಈ ವಿದ್ಯಾಮಾನವು ಭಾರತದಲ್ಲಿ ನವೆಂಬರ್‌ 8ರ ಸಂಜೆ 5 ಗಂಟೆ 32 ನಿಮಿಷಕ್ಕೆ ಕಾಣಿಸಲಿದೆ. ಮತ್ತು ಸಂಜೆ 6 ಗಂಟೆ 18 ನಿಮಷಕ್ಕೆ ಮುಕ್ತಾಯಗೊಳ್ಳಲಿದೆ. ಈ ಕಾಲವನ್ನು ಗ್ರಹಣಕಾಲ ಎಂದು ಕರೆಯುತ್ತಾರೆ.

ಚಂದ್ರ ಗ್ರಹಣ (Lunar Eclipse) ಎಂದರೇನು?
ಚಂದ್ರ ಗ್ರಹಣ ಇದು ನಮ್ಮ ಸೌರಮಂಡಲದಲ್ಲಿ ನಡೆಯುವ ವಿದ್ಯಮಾನ. ಸೂರ್ಯನ ಸುತ್ತ ಒಂದೇ ಪಥದಲ್ಲಿ ಸುತ್ತುವ ಆಕಾಶ ಕಾಯಗಳು ಒಮ್ಮೊಮ್ಮೆ ಒಂದೇ ಸರಳ ರೇಖೆಯಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಇದು ಪೂರ್ಣಿಮೆ (ಹುಣ್ಣಿಮೆ) ಯ ದಿನದಂದೇ ನಡೆಯುತ್ತದೆ.

ಯಾವ ಭಾಗದಲ್ಲಿ ಚಂದ್ರ ಗ್ರಹಣ ಗೋಚರಿಸುತ್ತದೆ?
ಈ ವರ್ಷದ ಕೊನೆಯ ಚಂದ್ರ ಗ್ರಹಣವು ಏಷ್ಯಾ, ಆಸ್ಟ್ರೇಲಿಯಾ, ಈಶಾನ್ಯ ಯುರೋಪ್‌, ಫೆಸಿಫಿಕ್‌ ಸಾಗರ, ಹಿಂದೂ ಮಹಾಸಾಗರ, ನಾರ್ತ್‌ ಅಮೇರಿಕಾ ಮತ್ತು ಸೌತ್‌ ಅಮೇರಿಕಾಗಳಲ್ಲಿ ಕಾಣಿಸುತ್ತದೆ. ಆದರೆ ಈ ಚಂದ್ರ ಗ್ರಹಣವು ನೈರುತ್ಯ ಯುರೋಪ್‌ ಮತ್ತು ಆಫ್ರಿಕಾ ಖಂಡಗಳಲ್ಲಿ ಕಾಣಿಸುವುದಿಲ್ಲ. ಭಾರತದಲ್ಲಿ 2022ರ ಕೊನೆಯ ಚಂದ್ರ ಗ್ರಹಣವು ಕೋಲ್ಕತ್ತಾ, ಪಾಟ್ನಾ, ರಾಂಚಿ ಮತ್ತು ಗೌಹಾಟಿ ಮುಂತಾದ ಸ್ಥಳಗಳಲ್ಲಿ ಗೋಚರಿಸಲಿದೆ.

ಚಂದ್ರ ಗ್ರಹಣ ಕಾಲ ಯಾವುದು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಗ್ರಹಣದ ಕಾಲ ಘಟ್ಟವು ಒಂಭತ್ತು ಗಂಟೆಯ ಮೊದಲೇ ಪ್ರಾರಂಭವಾಗುವುದು. ಭಾರತದಲ್ಲಿ ಗ್ರಹಣವು ಗೋಚರಿಸುವುದರಿಂದ ಇಲ್ಲಿಯೂ ಇದನ್ನೇ ಆಚರಿಸಲಾಗುತ್ತಿದೆ.

ಇದನ್ನೂ ಓದಿ : Digital Currency: ಭಾರತದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಯಾದ ಡಿಜಿಟಲ್‌ ರೂಪಾಯಿ; ಇದರಿಂದಾಗುವ ಲಾಭವೇನು…

ಇದನ್ನೂ ಓದಿ : Top Selling : ಹಬ್ಬಗಳ ಋತುವಿನಲ್ಲಿ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರವಾಹನಗಳು ಯಾವುದು ಗೊತ್ತಾ?

(Chandra Grahan 2022 last lunar eclipse on November 8. Know the date, time, and places)

Comments are closed.